More

    ಕ್ವಾರಂಟೈನ್ ಕೇಂದ್ರವನ್ನು ಹೊರವಲಯದಲ್ಲಿ ತೆರೆಯಿರಿ

    ಶ್ರವಣಬೆಳಗೊಳ: ಪಟ್ಟಣದಲ್ಲಿ ಕ್ವಾರಂಟೈನ್ ಕೇಂದ್ರ ಆರಂಭ ಮಾಡಲು ಸಾರ್ವಜನಿಕರ ವಿರೋಧವಿದ್ದು, ಗ್ರಾಮದ ಹೊರವಲಯದಲ್ಲಿರುವ ಕಟ್ಟಡಗಳಲ್ಲಿ ಆರಂಭಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ನಾಗರಿಕರು ಜಿಲ್ಲಾಧಿಕಾರಿ, ತಹಸೀಲ್ದಾರ್, ಕರೊನಾ ಕೇಂದ್ರದ ನೋಡಲ್ ಅಧಿಕಾರಿ ಉಪ ತಹಸೀಲ್ದಾರ್ ಮರಿಯಯ್ಯ ಹಾಗೂ ಕಂದಾಯ ನಿರೀಕ್ಷಕ ಮೋಹನ್‌ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಾ ರಮೇಶ್ ಮಾತನಾಡಿ, ಸೋಂಕಿತ ವ್ಯಕ್ತಿಗಳನ್ನು ಸ್ಥಳಾಂತರ ಮಾಡುವ ಸಂದರ್ಭ ಯಾರಿಗಾದರು ಸೋಂಕು ಹರಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಕೇಂದ್ರವನ್ನು ಪಟ್ಟಣದ ಹೊರವಲಯದಲ್ಲಿ ತೆರೆಯಬೇಕು ಎಂದು ಆಗ್ರಹಿಸಿದರು.

    ಮಂಡ್ಯ ಮತ್ತು ಹಾಸನ ಜಿಲ್ಲೆಯ ಗಡಿ ಭಾಗದಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡುವಂತೆಯೂ ಮನವಿ ಮಾಡಿದರು.

    ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಎಂ.ಲಕ್ಷ್ಮಣ್, ಎನ್.ಆರ್.ವಾಸು, ಸರಸ್ವತಿ ಮಹೇಶ್, ಸಿ.ಜೆ.ರವಿ, ಎಸ್.ವಿ.ಲೋಕೇಶ್, ಕುಮಾರ್, ವರ್ತಕರ ಸಂಘದ ಅಧ್ಯಕ್ಷ ಎಸ್.ಎಂ.ಸುಧಾಕರ್, ಖಜಾಂಚಿ ಸಂದೇಶ್, ಮುಖಂಡರಾದ ಎಸ್.ಕೆ.ರಾಘವೇಂದ್ರ, ರಮೇಶ್, ಎಸ್.ಕೆ.ಪ್ರಭಾಕರ್, ಶಿವಣ್ಣ, ಎಸ್.ಆರ್.ಲೋಕೇಶ್, ಲೋಹಿತ್ ಮುಂತಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts