ಮಗಳನ್ನು ಪುರುಷರ ಶೌಚಾಲಯಕ್ಕೆ ಕರೆದೊಯ್ದ ತಂದೆ!; ಮುಂದೆ ಆಗಿದ್ದೇನು?

public toilet
Published on

ನವದೆಹಲಿ: ಮಗಳಿಗೆ ತಾಯಿಗಿಂತ ಹೆಚ್ಚಾಗಿ ತಂದೆ ಜೊತೆಗೆ ಬಾಂಧವ್ಯ ಹೆಚ್ಚಾಗಿರುತ್ತದೆ. ಇಲ್ಲೊಂದು ತಂದೆ- ಮಗಳ ಸ್ಟೋರಿ ಕೇಳಿದ್ರೆ ನೀವು ಹೀಗೂ ಉಂಟಾ? ಎಂದು ಪ್ರಶ್ನೆ ಮಾಡುವುದರ ಜತೆಗೆ ಆಶ್ಚರ್ಯ ಪಡುವುದು ಖಂಡಿತಾ ಹೌದು.

ನಡೆದಿದ್ದೇನು?: ತಂದೆ ಜತೆ ಆತನ 3 ವರ್ಷದ ಮಗಳು ಶಾಪಿಂಗ್‌ಗೆ ಹೋಗಿದ್ದರು. ಮಗಳು ವಾಶ್‌ರೂಮ್‌ಗೆ ಹೋಗಬೇಕು ಎಂದಿದ್ದಾಳೆ. ಮಗಳು ತುಂಬಾ ಚಿಕ್ಕವಳಾದ್ದರಿಂದ ಆಕೆಯನ್ನು ಒಬ್ಬೊಂಟಿಯಾಗಿ ಮಹಿಳೆಯರ ಶೌಚಾಲಯಕ್ಕೆ ಕಳುಹಿಸಲು ಸಾಧ್ಯವಾಗಿಲ್ಲ. ಹೀಗಾಗಿ, ಆತ ಪುರುಷರ ಶೌಚಾಲಯಕ್ಕೆ ಕರೆದೊಯ್ದಿದ್ದಾನೆ. ನಂತ್ರ, ಮಗಳನ್ನು ಹೊರಕ್ಕೆ ಕರೆದುಕೊಂಡು ಬರುವಾಗ ಅದನ್ನು ಕಂಡ ಅಪರಿಚಿತ ಮಹಿಳೆಯೊಬ್ಬಳು ಕೂಗಾಡಿ ಆತನಿಗೆ ಪ್ರಶ್ನೆ ಮಾಡಿದ್ದಾಳೆ.

ಈ ಬಗ್ಗೆ ಮಾತನಾಡಿರುವ ತಂದೆ, ʻನಾನು ನನ್ನ ಮಗಳ ಜೊತೆ ಬಾತ್ರೂಮ್ನಿಂದ ಹೊರಬರುವುದನ್ನು ನೋಡಿದ ಒಬ್ಬ ಮಹಿಳೆ ಕಿರುಚಾಡಿದ್ದಾಳೆ. ನೀವು ಹುಡುಗಿಯನ್ನು ಪುರುಷರ ಶೌಚಾಲಯಲಕ್ಕೆ ಕರೆದುಕೊಂಡು ಹೋಗಲು ಎಷ್ಟು ಧೈರ್ಯ ಎಂದು ಪ್ರಶ್ನೆ ಮಾಡಿದಳು. ನಾನು ನನ್ನ ಪರಿಸ್ಥತಿ ಬಗ್ಗೆ ಆ ಮಹಿಳೆಗೆ ವಿವರಿಸಿದೆ. ಆದರೆ ಆಕೆ ಅರ್ಥ ಮಾಡಿಕೊಳ್ಳಲೇ ಇಲ್ಲ. ಅವರ ನೋಟವೇ ಸರಿ ಇಲ್ಲ ಎಂದು ನಾನು ಭಾವಿಸಿದೆ. ನನ್ನ ಮಗಳು ಚಿಕ್ಕವಳು. ಆಕೆ ಮೂತ್ರ ವಿಸರ್ಜಿಸಬೇಕಾದರೆ ನಾನು ಏನು ಮಾಡಬೇಕಿತ್ತು?ʼ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ. ಈ ಪೋಸ್ಟ್​​ ನೋಡಿದ ನೆಟ್ಟಿಗರು ವಿಭಿನ್ನವಾಗಿ ಕಾಮೆಂಟ್​​ ಮಾಡುವ ಮೂಲಕವಾಗಿ ತಂದೆ-ಮಗಳ ಪ್ರೀತಿಯ ಬಾಂಧವ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಶಾಪಿಂಗ್​ ಮಾಲ್​ನಲ್ಲಿ ಫ್ಯಾಮಿಲಿ ವಾಶ್ ರೂಂ ಇಲ್ಲದ ಕಾರಣ ಮಗಳನ್ನು ಪುರುಷರ ಟಾಯ್ಲೆಟ್ ಗೆ ಕರೆದುಕೊಂಡು ಹೋಗುವ ಅಪ್ಪನ ನಿರ್ಧಾರ ಸರಿಯಾಗಿದೆ ಎಂದು ಹಲವರು ಕಾಮೆಂಟ್‌ ಮಾಡಿದ್ದಾರೆ. ನಾವು ನೋಡುವ ನೋಟದಲ್ಲಿ ಕೆಲವು ವಿಚಾರಗಳು ಒಳ್ಳೆಯದ್ದು, ಕೆಟ್ಟದ್ದು ಎಂದು ನಿರ್ಧಾರವಾಗುತ್ತದೆ ಎನ್ನುವುದು ಹಲವರು ಅಭಿಪ್ರಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net