More

    VIDEO | ಬಸ್‌ ಸೀಟಿಗಾಗಿ ಜುಟ್ಟು ಹಿಡಿದು ಹೊಡೆದಾಡಿದ ಮಹಿಳೆಯರು!

    ನವದೆಹಲಿ: ಬಸ್​, ರೈಲು ಹೀಗೆ ಸಾರ್ವಜನಿಕರು ಪ್ರಯಾಣಿಸುವ ವಾಹನಗಳಲ್ಲಿ ಪ್ರತಿಯೊಬ್ಬ ಪ್ರಯಾಣಿಕನು ಕುಳಿತುಕೊಳ್ಳಲು ಆಸನ ಬೇಕು ಎಂದುಕೊಳ್ಳುತ್ತಾರೆ. ಸೀಟಿಗಾಗಿ ಪರಸ್ಪರ ಕಿತ್ತಾಡಿದ ಹಲವು ಉದಾಹರಣೆಗಳಿವೆ. ಸೀಟಿಗಾಗಿ ಬಸ್‌ನಲ್ಲಿ ಮಹಿಳೆ ಹಾಗೂ ಯುವತಿ ಜುಟ್ಟು ಹಿಡಿದು ಹೊಡೆದಾಡಿಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಬಸ್​ನಲ್ಲಿ ಇಬ್ಬರು ಮಹಿಳೆಯರು ಪರಸ್ಪರ ವಾದ ಪ್ರತಿವಾದ ಮಾಡುತ್ತಾ ಒಬ್ಬರನ್ನೊಬ್ಬರು ಎಳೆದಾಡಿಕೊಂಡು ಹೊಡೆದುಕೊಳ್ಳುತ್ತಾರೆ. ಈ ವೇಳೆ ಕೆಲವರು ಅವರ ಜಗಳ ಬಿಡಿಸಲು ಪ್ರಯತ್ನಿಸುತ್ತಾರೆ. ಆದರೆ ಅವರ ಹೊಡೆದಾಟವನ್ನು ಯಾರಿಗೂ ನಿಲ್ಲಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಇಬ್ಬರು ಮಹಿಳಾ ಪೊಲೀಸರು ಬಸ್ ಏರಿ ಈ ಇಬ್ಬರು ಮಹಿಳೆಯರನ್ನು ಕೆಳಗೆ ಇಳಿಸಿದ್ದಾರೆ.

    ಇದನ್ನೂ ಓದಿ: ಭಾರತದ ಮೊದಲ ತೃತೀಯ ಲಿಂಗಿ ದಂಪತಿಯ ಮಗುವಿಗೆ ನಾಮಕರಣ!

    ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಈ ರೀತಿ ಜಗಳ ಪಬ್ಲಿಕ್‌ ಟ್ರಾನ್ಸ್‌ಪೋರ್ಟ್‌ನಲ್ಲಿ ಮಹಿಳೆಯರು ಜಗಳ ಮಾಡಿದ್ದನ್ನು ನಾವು ನೋಡಿದ್ದೇವೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಈ ಘಟನೆ ಎಲ್ಲಿ ನಡೆದಿರುವುದು ಎನ್ನುವ ಮಾಹಿತಿ ಇಲ್ಲ. ಸೋಶಿಯಲ್​ ಮೀಡಿಯಾ ತುಂಬಾ ಹರಿದಾಡುತ್ತಿದೆ.

    https://twitter.com/gharkekaleshh/status/1632630264609525760

    ಸೈಬರ್‌ ಕಳ್ಳರ ಕನ್ನ; 1 ಲಕ್ಷ ರೂ. ಕಳೆದುಕೊಂಡ ನಟಿ ನಗ್ಮಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts