ಜುಲೈನಿಂದ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಬಾಕಿ ಪಾವತಿ

money1
Published on

ನವದೆಹಲಿ : ಜುಲೈ 1 ರಿಂದ 52 ಲಕ್ಷ ಕೇಂದ್ರ ಸರ್ಕಾರದ ನೌಕರರು ಮತ್ತು 60 ಲಕ್ಷ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಡಿಯರ್​ನೆಸ್​ ಅಲೊಯೆನ್ಸ್(ಡಿಎ)​ ಮತ್ತು ಡಿಯರ್​ನೆಸ್​ ರಿಲೀಫ್(ಡಿಆರ್​) ಬೆನೆಫಿಟ್ಟನ್ನು ಪುನಃ ನೀಡಲು ಆರಂಭಿಸಲಾಗುವುದು ಎನ್ನಲಾಗಿದೆ.

2020 ರ ಜನವರಿಯಿಂದ ಈಚೆಗೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಪರಿಷ್ಕರಿಸಲಾಗಿರಲಿಲ್ಲ. ಇದೀಗ ಜನವರಿ 1, 2020 ರಿಂದ ಜನವರಿ 1, 2021 ರವರೆಗಿನ ಡಿಎ ಬಾಕಿ ಮೊತ್ತವನ್ನು ನೌಕರರಿಗೆ 3 ಕಂತುಗಳಲ್ಲಿ ಪಾವತಿಸಲಾಗುವುದು. 7ನೇ ಪೇ ಕಮಿಷನ್​ ಶಿಫಾರಸ್ಸಿನ ಆಧಾರದಲ್ಲಿ ಲೆಕ್ಕ ಹಾಕಿ ಡಿಎ ಮೊತ್ತವನ್ನು ಪಾವತಿಸಲಾಗುವುದು ಎನ್ನಲಾಗಿದೆ.

ಡಿಎ ಮೊತ್ತವನ್ನು ತಿಳಿಯಲು ನೌಕರರು 7ನೇ ವೇತನ ಆಯೋಗದ ಸಂಬಳ ಮತ್ತು ಪಿಂಚಣಿಯ ಮ್ಯಾಟ್ರಿಕ್ಸ್​ಅನ್ನು ಪರಿಶೀಲಿಸಬೇಕು. ಹಾಲಿ ಇರುವ ಶೇ. 17 ರ ಡಿಎ, ಶೇ. 28 ರವರೆಗೆ ಏರಿಕೆಯಾಗಲಿದೆ. ಹಾಗಾಗಿ ಜುಲೈ ತಿಂಗಳಿಂದ ಮಾಸಿಕ ಡಿಎ ಬೇಸಿಕ್ ಸ್ಯಾಲರಿಯ ಶೇ.11 ರಷ್ಟು ಏರಿಕೆಯಾಗಲಿದೆ ಎಂದು ನಾಷನಲ್ ಕೌನ್ಸಿಲ್​ ಆಫ್​ ಜೆಸಿಎಂನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net