More

    ಸ್ಟುಪಿಡ್‌ ಇಂಡಿಯನ್‌, ನೀನೂ ಕರಿಯಳು, ನಿನ್ನ ಹೃದಯನೂ ಕಪ್ಪು ಎಂದು ಜೈಲು ಸೇರಿದ ಸಿಂಗಪುರದ ಮಹಿಳೆ!

    ಸಿಂಗಪುರ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಭಾರತೀಯ ಮಹಿಳೆಗೆ ಮೂರ್ಖ ಭಾರತೀಯಳು (ಸ್ಟುಪಿಡ್‌ ಇಂಡಿಯನ್‌) ಎನ್ನುವ ಮೂಲಕ ಸಿಂಗಪುರದ ಮಹಿಳೆಯೊಬ್ಬಳು ಪೇಚಿಗೆ ಸಿಲುಕಿದ್ದಾಳೆ. ಇದೇ ಕಾರಣಕ್ಕೆ ಈಕೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

    ಜನಾಂಗೀಯ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ 40 ವರ್ಷದ ಆಯಿಷಾ ಜಾಫರ್ ಎಂಬ ಮಹಿಳೆಗೆ ನಾಲ್ಕು ವಾರಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 33 ವರ್ಷದ ಭಾರತೀಯ ಮಹಿಳೆಗೆ ‘ಸ್ಟುಪಿಡ್ ಇಂಡಿಯನ್’ಎಂದು ಕರೆದು ಈಕೆ ಕಂಬಿ ಎಣಿಸುವಂತಾಗಿದೆ.

    ಆಗಿದ್ದೇನು?: ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಭಾರತೀಯ ಮಹಿಳೆ ಇಯರ್‌ಫೋನ್‌ನಲ್ಲಿ ಸಂಗೀತ ಕೇಳುತ್ತಿದ್ದಳು. ಈ ಸಂದರ್ಭದಲ್ಲಿ ಸಿಂಗಪುರದ ಮಹಿಳೆ ಹಲವು ಬಾರಿ ಆಕೆ ಬಗ್ಗೆ ಕಾಮೆಂಟ್ ಮಾಡಿದ್ದಾಳೆ. ನಂತರ ಆಕೆ ಕೂಗಾಡುತ್ತಿರುವುದು ಭಾರತೀಯ ಮಹಿಳೆಗೆ ಕಾಣಿಸಿದೆ. ನಂತರ ಇಯರ್‌ ಫೋನ್‌ ತೆಗೆದಿದ್ದಾರೆ. ಆಗ ಕಪ್ಪು ಚರ್ಮ ಹೊಂದಿರುವ ಭಾರತೀಯಳು. ಸ್ಟುಪಿಡ್ ಇಂಡಿಯನ್, ಮೈನಾರಿಟಿ ಕ್ಲಾಸ್‌ (ಅಲ್ಪಸಂಖ್ಯಾತರು) ಎಂದೆಲ್ಲ ನಿಂದಿಸಿರುವುದು ಗಮನಕ್ಕೆ ಬಂದಿದೆ. ‘ನೀನು ಕಪ್ಪು, ನಿನ್ನ ಹೃದಯ ಕಪ್ಪು. ನಿನ್ನ ತವರು ದೇಶ ಭಾರತ, ಸಿಂಗಪುರ ಅಲ್ಲ. ಸ್ಟುಪಿಡ್ ಇಂಡಿಯನ್ಸ್. ನೀನೊಬ್ಬಳು ಭಾರತೀಯ ಮಹಿಳೆ. ಅದಕ್ಕಾಗಿಯೇ ಕಪ್ಪಗಿದ್ದೀಯ. ನಿನ್ನ ಬಣ್ಣವನ್ನು ನಾನು ದ್ವೇಷಿಸುತ್ತೇನೆ. ನಾನು ನಿನ್ನ ಮುಖವನ್ನು ಇಷ್ಟಪಡುವುದಿಲ್ಲ’ ದೇಶಬಿಟ್ಟು ತೊಲಗು ಎಂಬಿತ್ಯಾದಿ ಅವಾಚ್ಯ ಶಬ್ದಗಳಿಂದ ಕೂಗಾಡಿದ್ದಾಳೆ. ಬಳಿಕ, ಸಂತ್ರಸ್ತೆ ತನ್ನ ಮೊಬೈಲ್ ಫೋನ್ ತೆಗೆದುಕೊಂಡು ಘಟನೆಯನ್ನು ಚಿತ್ರೀಕರಿಸಿದ್ದಾರೆ.

    ಸಿಂಗಪುರದ ಮಹಿಳೆ ವಿರುದ್ಧ ಕೇಸ್‌ ದಾಖಲು ಮಾಡಲಾಗಿದೆ. ವಿಡಿಯೋ ತುಣುಕುಗಳನ್ನು ಪರಿಶೀಲಿಸಿದ ಕೋರ್ಟ್‌ ಜನಾಂಗೀಯ ನಿಂದನೆ ಮಾಡಿರುವುದು ಸಾಬೀತಾಗಿರುವುದು ಕಾಣಿಸಿದೆ. ಈ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.

    ಉಗ್ರ ಹಫೀಜ್‌ ಸಯೀದ್‌ ಮನೆ ಮುಂದೆ ಭಾರಿ ಸ್ಫೋಟ: ಇಬ್ಬರ ಸಾವು- 16 ಮಂದಿ ಸ್ಥಿತಿ ಗಂಭೀರ

    ಪತಿ ಗುಟ್ಟಾಗಿ ಪರಸ್ತ್ರೀ ಜತೆ ಲೈಂಗಿಕ ಸಂಬಂಧ ಹೊಂದಿದಾಗ ಪತ್ನಿ ಕೇಸ್‌ ಹಾಕಿದ್ರೆ ಏನಾಗುತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts