More

    ವಿದೇಶಿ ಪ್ರಾಜೆಕ್ಟ್ ಕಾಮಗಾರಿಗೆ ಭಾರತೀಯ ಕಂಪನಿಗಳ ಬಿಡ್ಡಿಂಗ್​: ಕಲ್ಪತರು ಪವರ್​ ಷೇರುಗಳಿಗೆ ಭರ್ಜರಿ ಬೇಡಿಕೆ, ಬೆಲೆ ಏರಿಕೆ

    ಮುಂಬೈ: ಸೌದಿ ಅರಾಮ್ಕೊದ ಮಾಸ್ಟರ್ ಗ್ಯಾಸ್ ಸಿಸ್ಟಮ್ ಪ್ರಾಜೆಕ್ಟ್‌ ಕಾಮಗಾರಿ ಪಡೆದುಕೊಳ್ಳುವುದಕ್ಕಾಗಿ ಎರಡು ದೊಡ್ಡ ಭಾರತೀಯ ಕಂಪನಿಗಳು ಕಡಿಮೆ ಬಿಡ್ ಮಾಡಿವೆ. ಕಲ್ಪತರು ಪವರ್ ಮತ್ತು ಲಾರ್ಸೆನ್ & ಟೂಬ್ರೊ ಲಿಮಿಟೆಡ್ ಅಂದರೆ L&T ಈ ಎರಡು ಕಂಪನಿಗಳಾಗಿವೆ.

    ಮಿಡಲ್ ಈಸ್ಟ್ ಬಿಸಿನೆಸ್ ಇಂಟೆಲಿಜೆನ್ಸ್‌ನ ವರದಿಯ ಪ್ರಕಾರ, 10 ಶತಕೋಟಿ ಡಾಲರ್​ನ MGS-3 ಯೋಜನೆಗೆ ಆಯ್ಕೆಯಾದ 10 ಕಂಪನಿಗಳಲ್ಲಿ L&T ಮತ್ತು ಕಲ್ಪತರು ಪವರ್ ಸೇರಿವೆ. ಮೂರು ಪ್ಯಾಕೇಜ್‌ಗಳಿಗೆ ಕಲ್ಪತರು ಅತ್ಯಂತ ಕಡಿಮೆ ಬಿಡ್‌ದಾರರಾಗಿ ಹೊರಹೊಮ್ಮಿದೆ. ಇದೇ L&T ಕೂಡ ಒಂದು ಪ್ಯಾಕೇಜ್​ನಲ್ಲಿ ಅತ್ಯಂತ ಕಡಿಮೆ ಬಿಡ್‌ದಾರನಾಗಿದೆ.

    ಈ ಸುದ್ದಿ ಹರಡುತ್ತಿದ್ದಂತೆಯೇ ಹೂಡಿಕೆದಾರರು ಕಲ್ಪತರು ಪ್ರಾಜೆಕ್ಟ್ ಇಂಟರ್‌ನ್ಯಾಶನಲ್ ಲಿಮಿಟೆಡ್‌ನ ಷೇರುಗಳನ್ನು ಖರೀದಿಸಲು ಮುಗಿಬಿದ್ದರು. ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರದಂದು, ಕಲ್ಪತರು ಪ್ರಾಜೆಕ್ಟ್ ಇಂಟರ್ನ್ಯಾಷನಲ್ ಷೇರುಗಳ ಬೆಲೆ ಅಂದಾಜು 7 ಪ್ರತಿಶತದಷ್ಟು ಏರಿಕೆಯಾಗಿ 1024.65 ರೂ. ತಲುಪಿತು. ಇದರೊಂದಿಗೆ ಸ್ಟಾಕ್ ತನ್ನ ಹೊಸ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿತು.

    ಮೇ 2023ರಲ್ಲಿ ಈ ಷೇರು ಬೆಲೆ ರೂ 485 ಆಗಿತ್ತು, ಅಲ್ಲಿಂದ ಇದುವರೆಗೆ ಈ ಷೇರಿನಲ್ಲಿ ಹೂಡಿಕೆ ಮಾಡಿದವರು 9 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಡಬಲ್ ರಿಟರ್ನ್‌ಗಳನ್ನು ಪಡೆದಿದ್ದಾರೆ.

    ಏತನ್ಮಧ್ಯೆ, ಎಲ್ & ಟಿ ಷೇರುಗಳು ಸಹ ಶುಕ್ರವಾರ ಏರುಗತಿ ಪ್ರವೃತ್ತಿಯಲ್ಲಿ ಕಾಣಿಸಿಕೊಂಡವು. ವಿಶ್ವದ ಅತಿದೊಡ್ಡ ತೈಲ ಕಂಪನಿ ಸೌದಿ ಅರಾಮ್ಕೊ, ನೆಸ್ಫಾನಿಯಾ ಆಯಿಲ್‌ಫೀಲ್ಡ್ ಯೋಜನೆಗಳಿಗಾಗಿ 10 ಶತಕೋಟಿ ಡಾಲರ್​ಗಿಂತ ಹೆಚ್ಚಿನ ಮೌಲ್ಯದ ಆರ್ಡರ್‌ಗಳಿಗಾಗಿ ಬಿಡ್ಡಿಂಗ್ ಪ್ರಕ್ರಿಯೆಯನ್ನು ಮುಂದೂಡಿದೆ ಎಂಬ ಸುದ್ದಿಯ ನಂತರ, ಎಲ್​ ಆ್ಯಂಡ್​ ಟಿ ಷೇರುಗಳಲ್ಲಿ ದೊಡ್ಡ ಕುಸಿತ ಕಂಡುಬಂದಿತ್ತು.

    ಬೋನಸ್​ ಷೇರು ವಿತರಣೆ, ಸ್ಟಾಕ್ ವಿಭಜನೆ ನಂತರ ಅಪ್ಪರ್ ಸರ್ಕ್ಯೂಟ್ ಹಿಟ್​: ಮುಂದೆಯೂ ಫಾರ್ಮಾ ಕಂಪನಿ ಷೇರಿಗೆ ಬೇಡಿಕೆ ಬರುವುದಕ್ಕೆ ಹೀಗಿದೆ ಕಾರಣ…

    ಮುಖೇಶ್​ ಅಂಬಾನಿ ಒಡೆತನದ ಜಿಯೋ ಫೈನಾನ್ಶಿಯಲ್, ರಿಲಯನ್ಸ್ ಇಂಡಸ್ಟ್ರೀಸ್​ ಷೇರು ಬೆಲೆ ಸಾರ್ವಕಾಲಿಕ ಗರಿಷ್ಠ: ಹೂಡಿಕೆದಾರರಿಗೆ ಇನ್ನಷ್ಟು ಲಾಭವಾಗಲಿದೆ ಎನ್ನುತ್ತಾರೆ ತಜ್ಞರು

    ಒಂದು ವರ್ಷದಲ್ಲಿ ಹೂಡಿಕೆದಾರರಿಗೆ 339% ಲಾಭ ನೀಡಿದ ಐಟಿ ಸ್ಟಾಕ್: ಅಮೆರಿಕ ಕಂಪನಿಯ ಆರ್ಡರ್​ ಸಿಗುತ್ತಿದ್ದಂತೆಯೇ ಈಗ ಷೇರುಗಳ ಖರೀದಿ ಜೋರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts