More

    ಒಂದು ವರ್ಷದಲ್ಲಿ ಹೂಡಿಕೆದಾರರಿಗೆ 339% ಲಾಭ ನೀಡಿದ ಐಟಿ ಸ್ಟಾಕ್: ಅಮೆರಿಕ ಕಂಪನಿಯ ಆರ್ಡರ್​ ಸಿಗುತ್ತಿದ್ದಂತೆಯೇ ಈಗ ಷೇರುಗಳ ಖರೀದಿ ಜೋರು

    ಮುಂಬೈ: ಸ್ಮಾಲ್ ಕ್ಯಾಪ್ ಕಂಪನಿಯಾದ ಸೆನ್​ಸಿಸ್​ ಟೆಕ್​ ಲಿಮಿಟೆಡ್​ (Ceinsys Tech Ltd) ಷೇರುಗಳ ಬೆಲೆ ಗುರುವಾರ ಇಂಟ್ರಾ ಡೇ ವಹಿವಾಟಿನಲ್ಲಿ 5.77% ರಷ್ಟು ಏರಿಕೆ ಕಂಡವು. ಫರ್ಗೊ ಯುಎಸ್​ಎ ಲ್ಯಾಂಡ್ ಇಂಕ್​ (Fugro USA Land Inc) ನಿಂದ ಈ ಕಂಪನಿಯು ಹೊಸ ಆರ್ಡರ್​ ಪಡೆದುಕೊಂಡ ಹಿನ್ನೆಲೆಯಲ್ಲಿ ಷೇರುಗಳ ಬೆಲೆ ಏರಿಕೆ ಕಂಡುಬಂದಿದೆ. ಗುರುವಾರ ಈ ಷೇರುಗಳ ಬೆಲೆ 598.05 ರೂ. ಮುಟ್ಟಿತು.

    ಈ ಕಂಪನಿಯ ಷೇರುಗಳ ಬೆಲೆ ಕಳೆದ 3-ತಿಂಗಳಲ್ಲಿ 74%; 6 ತಿಂಗಳಲ್ಲಿ 199% ಹೆಚ್ಚಳ ಕಂಡಿದೆ. ಕಳೆದ 1 ವರ್ಷದಲ್ಲಿ 339% ಹೆಚ್ಚಳವಾಗಿದೆ. ಕಳೆದ 2 ವರ್ಷಗಳಲ್ಲಿ 249%; ಕಳೆದ 3-ವರ್ಷಗಳಲ್ಲಿ 360%ರಷ್ಟು ಏರಿಕೆಯಾಗಿದೆ ಎಂಬುದು ಗಮನಾರ್ಹ.

    ಫರ್ಗೊ ಯುಎಸ್​ಎ ಲ್ಯಾಂಡ್ ಇಂಕ್​ನಿಂದ ಸೇವಾ ಆದೇಶದ ಸ್ವೀಕೃತಿ ಬಂದಿದೆ. ರೂ. 5,26,28,995/ ಆರ್ಡರ್ ಇದಾಗಿದೆ ಎಂದು ಕಂಪನಿಯು ತಿಳಿಸಿದೆ.

    ಈ ಕಂಪನಿಯ ಷೇರುಗಳ 52-ವಾರದ ಗರಿಷ್ಠ ಬೆಲೆ ರೂ 604.70 ಮತ್ತು ಕನಿಷ್ಠ ಬೆಲೆ ರೂ 116.25 ಆಗಿದೆ. ಕಂಪನಿಯು 922.87 ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಡಿಸೆಂಬರ್ 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ನಿವ್ವಳ ಲಾಭವು 280.88% ರಷ್ಟು ಏರಿಕೆಯಾಗಿ 10.36 ಕೋಟಿ ರೂ.ಗಳಿಗೆ ತಲುಪಿದೆ.

    ಗುರುವಾರ 20% ಏರಿಕೆಯಾಗಿ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆದ ಷೇರುಗಳು: ಶುಕ್ರವಾರವೂ ಈ ಸ್ಟಾಕ್​ನಲ್ಲಿ ಭಾರೀ​ ಲಾಭದ ನಿರೀಕ್ಷೆ

    380ರಿಂದ 27 ರೂಪಾಯಿಗೆ ಕುಸಿದಿರುವ ಷೇರು: ಸದ್ಯ ಏರುಗತಿಯಲ್ಲಿರುವ ಬ್ಯಾಂಕ್​ ಸ್ಟಾಕ್​ ಖರೀದಿಗೆ ಮಾರುಕಟ್ಟೆ ಎಕ್ಸ್​ಪರ್ಟ್​ ಸಲಹೆ

    ಡಿಸ್ಕೌಂಟ್​ ರೇಟಿನಲ್ಲಿ ಹೊಸ ಷೇರು ವಿತರಣೆ: ಬ್ಯಾಂಕ್ ಸ್ಟಾಕ್​ ಖರೀದಿಗೆ ಹೂಡಿಕೆದಾರರು ಮುಗಿಬಿದ್ದಿದ್ದರಿಂದ ಒಂದೇ ದಿನದಲ್ಲಿ 10% ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts