More

    ಗುರುವಾರ 20% ಏರಿಕೆಯಾಗಿ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆದ ಷೇರುಗಳು: ಶುಕ್ರವಾರವೂ ಈ ಸ್ಟಾಕ್​ನಲ್ಲಿ ಭಾರೀ​ ಲಾಭದ ನಿರೀಕ್ಷೆ

    ಮುಂಬೈ: ಈ ಕಂಪನಿಗಳ ಷೇರುಗಳು ಕಳೆದ ಕೆಲವು ದಿನಗಳಿಂದ ಅಪ್‌ಟ್ರೇಡ್‌ನಲ್ಲಿವೆ. ಗುರುವಾರ ಈ ಷೇರುಗಳು ಅಪ್ಪರ್​ ಸರ್ಕ್ಯೂಟ್​ ಹಿಟ್​ ಆಗಿವೆ. ಈ ಷೇರುಗಳು ಶುಕ್ರವಾರ ಮಾರುಕಟ್ಟೆಯಲ್ಲಿ ಗಮನಾರ್ಹ ಲಾಭವನ್ನು ನೀಡಬಹುದಾಗಿದೆ.

    ಗುರುವಾರ ಷೇರು ಮಾರುಕಟ್ಟೆಯಲ್ಲಿ ಆರಂಭಿಕವಾಗಿ ಕಡಿಮೆ ಮಟ್ಟದ ಖರೀದಿಯ ನಂತರ ಭಾರಿ ಏರಿಕೆ ಕಂಡುಬಂದಿದೆ. ಅಲ್ಲದೆ, ನಿಫ್ಟಿ ತನ್ನ ಹೊಸ ಸಾರ್ವಕಾಲಿಕ ಉನ್ನತ ಮಟ್ಟವನ್ನು ತಲುಪಿದೆ. ಈ ಅವಧಿಯಲ್ಲಿ ಆಟೋ, ಎಫ್‌ಎಂಸಿಜಿ, ಇನ್‌ಫ್ರಾ ಮತ್ತು ಐಟಿ ಷೇರುಗಳಲ್ಲಿ ಏರಿಕೆ ಕಂಡುಬಂದಿದೆ.

    ಕೆಲವು ಷೇರುಗಳು ಮಾರುಕಟ್ಟೆಯ ಚಲನೆಯಿಂದ ಸ್ವತಂತ್ರವಾಗಿ ತಮ್ಮದೇ ಆದ ವೇಗದಲ್ಲಿ ಮುಂದುವರಿಯುತ್ತಿದ್ದವು. ಇವುಗಳು ಖರೀದಿಯ ಭಾವನೆಗಳನ್ನು ಹೊಂದಿರುವ ಷೇರುಗಳಾಗಿವೆ. ಅಲ್ಲದೆ, ಈ ಷೇರುಗಳು ಕಳೆದ ಕೆಲವು ದಿನಗಳಿಂದ ಅಪ್‌ಟ್ರೇಡ್‌ನಲ್ಲಿವೆ. ಈ ಷೇರುಗಳು ಶುಕ್ರವಾರ ಮಾರುಕಟ್ಟೆಯಲ್ಲಿ ಗಮನಾರ್ಹ ಲಾಭವನ್ನು ನೀಡಬಹುದಾಗಿದೆ.

    ಶುಕ್ರವಾರ ಮಾರುಕಟ್ಟೆಯಲ್ಲಿ ಇಂಟ್ರಾಡೇ ಮಟ್ಟದಲ್ಲಿ ಉತ್ತಮ ಲಾಭವನ್ನು ನೀಡಬಲ್ಲ ಕೆಲವು ಷೇರುಗಳತ್ತ ಗಮನ ಹರಿಸೋಣ.

    1) ಖೈತಾನ್ ಇಂಡಿಯಾ ಲಿಮಿಟೆಡ್ (Khaitan India Ltd):

    ಗುರುವಾರ ಈ ಸ್ಟಾಕ್‌ನಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಶೇಕಡಾ 20ರಷ್ಟು ಹೆಚ್ಚಳವಾಗುವುದರೊಂದಿಗೆ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆದ ಈ ಷೇರು ರೂ 79.58 ರ ಮಟ್ಟ ಮುಟ್ಟಿತು. ಈ ಸ್ಟಾಕ್‌ನಲ್ಲಿ ಖರೀದಿದಾರರು ಪ್ರಬಲರಾಗಿದ್ದು, ಶುಕ್ರವಾರದ ಮಾರುಕಟ್ಟೆಯಲ್ಲೂ ಈ ಸ್ಟಾಕ್ ಗಮನಾರ್ಹ ಲಾಭವನ್ನು ಪಡೆಯಬಹುದು.

    2) ಮೆಗಾಸಾಫ್ಟ್ ಲಿ (Megasoft Ltd):

    ಈ ಕಂಪನಿಯ ಷೇರು ಬೆಲೆ ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿದೆ. ಗುರುವಾರದ ಮಾರುಕಟ್ಟೆಯಲ್ಲೂ ಈ ಸ್ಟಾಕ್‌ನಲ್ಲಿ ಅಂದಾಜು 20%ರಷ್ಟು ಏರಿಕೆ ಕಂಡುಬಂದು 98.81 ರೂ. ತಲುಪಿತು. ಈ ಸ್ಟಾಕ್ ಶುಕ್ರವಾರ ಮಾರುಕಟ್ಟೆಯಲ್ಲಿಯೂ ಅದ್ಭುತಗಳನ್ನು ಮಾಡಬಹುದು. ಏಕೆಂದರೆ ಇದರಲ್ಲಿ ನಿರಂತರ ಖರೀದಿದಾರರು ಇದ್ದಾರೆ. ಶುಕ್ರವಾರವೂ ಈ ಷೇರುಗಳಲ್ಲಿ ಏರಿಕೆ ಕಂಡುಬರಬಹುದು.

    3) ತರ್ಮಾಟ್ ಲಿ (Tarmat Ltd):

    ಗುರುವಾರದ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಖರೀದಿದಾರರು ಈ ಷೇರುಗಳ ಬಗ್ಗೆ ಉತ್ತಮ ಆಸಕ್ತಿ ತೋರಿಸಿದರು. ಈ ಷೇರು ಕೂಡ ಅಂದಾಜು 20%ರಷ್ಟು ಏರಿಕೆಯಾಗಿ, ರೂ 109.85 ತಲುಪಿತು. ಶುಕ್ರವಾರ ಮಾರುಕಟ್ಟೆಯಲ್ಲೂ ಖರೀದಿದಾರರು ಈ ಸ್ಟಾಕ್‌ನಲ್ಲಿ ಆಸಕ್ತಿ ವಹಿಸಬಹುದು, ಇದರಿಂದಾಗಿ ಈ ಸ್ಟಾಕ್ ಮತ್ತಷ್ಟು ಏರಿಕೆಯಾಗಬಹುದು.

    4) ವೀರ್​ಹೆಲ್ತ್ ಕೇರ್ (Veerhealth Care):

    ಗುರುವಾರ ಈ ಸ್ಟಾಕ್‌ನಲ್ಲಿ ಖರೀದಿ ಭಾವನೆಗಳು ತುಂಬಾ ಪ್ರಬಲವಾಗಿದ್ದವು. ಹೀಗಾಗಿ, ಈ ಷೇರು ಬೆಲೆ ಅಂದಾಜು 20%ರಷ್ಟು ಹೆಚ್ಚಳವಾಗಿ 27.08 ರೂ. ಮುಟ್ಟಿತು. ಈ ಸ್ಟಾಕ್‌ನಲ್ಲಿ ಖರೀದಿಯು ಶುಕ್ರವಾರವೂ ಮುಂದುವರಿದು, ಈ ಷೇರು ಮತ್ತಷ್ಟು ಲಾಭ ತರಬಹುದು.

    5) ರಿಷಿರೂಪ್ ಲಿಮಿಟೆಡ್​ (Rishiroop Ltd.):

    ಈ ಸ್ಟಾಕ್‌ನಲ್ಲಿ ಬುಲಿಶ್ ಪ್ರವೃತ್ತಿ ಇದೆ. ಗುರುವಾರದಂದು ಅದು ಏರುಗತಿ ತೋರಿಸಿರುವ ರೀತಿಯಲ್ಲಿಯೇ ಈ ಷೇರು ಮತ್ತಷ್ಟು ಲಾಭಗಳನ್ನು ದಾಖಲಿಸಬಹುದು ಎಂದು ತೋರುತ್ತದೆ. ಗುರುವಾರದ ಮಾರುಕಟ್ಟೆಯಲ್ಲಿ ಈ ಸ್ಟಾಕ್ ಬೆಲೆ ಅಂದಾಜು 15%ರಷ್ಟು ಹೆಚ್ಚಳವಾಗಿ 215.45 ರೂ. ಮುಟ್ಟಿತು.

    380ರಿಂದ 27 ರೂಪಾಯಿಗೆ ಕುಸಿದಿರುವ ಷೇರು: ಸದ್ಯ ಏರುಗತಿಯಲ್ಲಿರುವ ಬ್ಯಾಂಕ್​ ಸ್ಟಾಕ್​ ಖರೀದಿಗೆ ಮಾರುಕಟ್ಟೆ ಎಕ್ಸ್​ಪರ್ಟ್​ ಸಲಹೆ

    ಡಿಸ್ಕೌಂಟ್​ ರೇಟಿನಲ್ಲಿ ಹೊಸ ಷೇರು ವಿತರಣೆ: ಬ್ಯಾಂಕ್ ಸ್ಟಾಕ್​ ಖರೀದಿಗೆ ಹೂಡಿಕೆದಾರರು ಮುಗಿಬಿದ್ದಿದ್ದರಿಂದ ಒಂದೇ ದಿನದಲ್ಲಿ 10% ಹೆಚ್ಚಳ

    ಸಚಿನ್​ ತೆಂಡೂಲ್ಕರ್​ ಹೂಡಿಕೆಯ ಕಂಪನಿ ಷೇರು ಅಪ್ಪರ್​ ಸರ್ಕ್ಯೂಟ್​ ಹಿಟ್​: ವಿದೇಶಿ ಹೂಡಿಕೆಗೆ ಸರ್ಕಾರ ಅನುಮತಿಸಿದ ತಕ್ಷಣವೇ ಆಗಸಕ್ಕೆ ನೆಗೆದ ಸ್ಪೇಸ್​ ಕಂಪನಿಗಳ ಷೇರುಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts