More

    ಸಚಿನ್​ ತೆಂಡೂಲ್ಕರ್​ ಹೂಡಿಕೆಯ ಕಂಪನಿ ಷೇರು ಅಪ್ಪರ್​ ಸರ್ಕ್ಯೂಟ್​ ಹಿಟ್​: ವಿದೇಶಿ ಹೂಡಿಕೆಗೆ ಸರ್ಕಾರ ಅನುಮತಿಸಿದ ತಕ್ಷಣವೇ ಆಗಸಕ್ಕೆ ನೆಗೆದ ಸ್ಪೇಸ್​ ಕಂಪನಿಗಳ ಷೇರುಗಳು

    ಮುಂಬೈ: ಬಾಹ್ಯಾಕಾಶ ಸಂಬಂಧಿ ಕಂಪನಿಗಳ ಷೇರುಗಳ ಬೆಲೆಗಳು ಗುರುವಾರ ರಾಕೆಟ್ ವೇಗದಲ್ಲಿ ಏರಿಕೆ ಕಂಡಿವೆ. ಮಿಶ್ರ ಧಾತು ನಿಗಮ್ ಲಿಮಿಟೆಡ್ (Midhani), MTAR ಟೆಕ್ನಾಲಜೀಸ್, ಡೇಟಾ ಪ್ಯಾಟರ್ನ್ (ಇಂಡಿಯಾ), ಅಪೊಲೊ ಮೈಕ್ರೋ
    ಸಿಸ್ಟಮ್ಸ್ ಲಿಮಿಟೆಡ್, ಆಜಾದ್ ಇಂಜಿನಿಯರಿಂಗ್ ಮತ್ತು ಪಾರಸ್ ಡಿಫೆನ್ಸ್‌ನಂತಹ ಕಂಪನಿಗಳ ಷೇರುಗಳ ಬೆಲೆ 13% ವರೆಗೆ ಜಿಗಿತವನ್ನು ಕಂಡಿವೆ.

    ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ- ಫಾರೆನ್​ ಡೈರೆಕ್ಟ್​ ಇನ್ವೆಸ್ಟ್​ಮೆಂಟ್​) ನೀತಿಯಲ್ಲಿ ಬದಲಾವಣೆಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿದ ನಂತರ ಈ ಕಂಪನಿಗಳ ಷೇರುಗಳಲ್ಲಿ ಈ ತೀವ್ರ ಏರಿಕೆಯಾಗಿದೆ. ಸ್ವಯಂಚಾಲಿತ ಮಾರ್ಗದ ಅಡಿಯಲ್ಲಿ ಉಪಗ್ರಹಗಳ ಘಟಕಗಳು, ವ್ಯವಸ್ಥೆಗಳು ಮತ್ತು ಉಪ-ವ್ಯವಸ್ಥೆಗಳ ತಯಾರಿಕೆಯಂತಹ ಚಟುವಟಿಕೆಗಳಿಗೆ ಶೇಕಡಾ ನೂರರಷ್ಟು ವಿದೇಶಿ ನೇರ ಹೂಡಿಕೆಗೆ ಕೇಂದ್ರ ಸರ್ಕಾರ ಅನುಮೋದಿಸಿದೆ.

    ಮಿಶ್ರ ಧಾತುನಿ ನಿಗಮ್ ಲಿಮಿಟೆಡ್ (Midhani) ಷೇರುಗಳ ಬೆಲೆ ಗುರುವಾರ ಇಂಟ್ರಾ ಡೇ ವಹಿವಾಟಿನಲ್ಲಿ ಶೇಕಡಾ 13 ರಷ್ಟು ಏರಿಕೆಯಾಗಿ 458.60 ರೂಪಾಯಿ ತಲುಪಿತ್ತು. ಕಂಪನಿಯ ಷೇರುಗಳ ಬೆಲೆ ಬುಧವಾರ 404.20 ರೂ. ಇತ್ತು.
    ಇದೇ ಸಮಯದಲ್ಲಿ, ಡೇಟಾ ಪ್ಯಾಟರ್ನ್ (ಇಂಡಿಯಾ) ಷೇರುಗಳು ಗುರುವಾರ 9 ಪ್ರತಿಶತದಷ್ಟು ಏರಿಕೆ ಕಂಡು, 2254 ರೂ. ತಲುಪಿತ್ತು. ಇದಲ್ಲದೆ, MTAR ಟೆಕ್ನಾಲಜೀಸ್‌ನ ಷೇರುಗಳ ಬೆಲೆ 8% ಕ್ಕಿಂತ ಹೆಚ್ಚು ಏರಿಕೆಯಾಗಿ 2065 ರೂ. ಮುಟ್ಟಿತ್ತು. ಪ್ಯಾರಾಸ್ ಡಿಫೆನ್ಸ್ ಆ್ಯಂಡ್​ ಸ್ಪೇಸ್ ಟೆಕ್ನಾಲಜೀಸ್ ಷೇರುಗಳ ಬೆಲೆ 3% ಕ್ಕಿಂತ ಹೆಚ್ಚು ಏರಿಕೆ ಕಂಡು 754.40 ರೂ. ತಲುಪಿತ್ತು.

    ಅಪೊಲೊ ಮೈಕ್ರೋ ಸಿಸ್ಟಮ್ಸ್ ಮತ್ತು ಆಜಾದ್ ಇಂಜಿನಿಯರಿಂಗ್ ಷೇರುಗಳು ಗುರುವಾರ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆದವು. ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಇದೇ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ.

    ಅಪೊಲೊ ಮೈಕ್ರೋ ಸಿಸ್ಟಮ್ಸ್ ಲಿಮಿಟೆಡ್‌ನ ಷೇರುಗಳು 5 ಶೇಕಡಾ ಅಪ್ಪರ್ ಸರ್ಕ್ಯೂಟ್‌ನೊಂದಿಗೆ ರೂ 129.25 ತಲುಪಿದವು. ಇದೇ ಸಮಯದಲ್ಲಿ, ಆಜಾದ್ ಇಂಜಿನಿಯರಿಂಗ್‌ನ ಷೇರುಗಳು 5% ರ ಅಪ್ಪರ್ ಸರ್ಕ್ಯೂಟ್‌ನೊಂದಿಗೆ ರೂ 1215.55 ಮುಟ್ಟಿದವು. ಇದಲ್ಲದೆ, ನೆಲ್ಕೊ ಷೇರುಗಳ ಬೆಲೆ ಶೇ. 7ಕ್ಕೂ ಹೆಚ್ಚು ಏರಿಕೆ ಕಂಡಿತು. ಗುರುವಾರ ಕಂಪನಿಯ ಷೇರುಗಳ ಬೆಲೆ 813 ರೂ. ಮುಟ್ಟಿತು.

    ಜಗತ್ತಿನ ಪ್ರಮುಖ ಷೇರು ಮಾರುಕಟ್ಟೆಗಳಲ್ಲಿ ಗೂಳಿಯ ಗುಟುರು: ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ ನಿಫ್ಟಿ ಸೂಚ್ಯಂಕ

    ನೀವು ಈ ಷೇರಿನಲ್ಲಿ 1 ವರ್ಷದ ಹಿಂದೆ 1 ಲಕ್ಷ ತೊಡಗಿಸಿದ್ದರೆ ಅದೀಗ 2.2 ಕೋಟಿ ಆಗುತ್ತಿತ್ತು; ಹೂಡಿಕೆದಾರರನ್ನು ಕೋಟ್ಯಧಿಪತಿಗಳನ್ನಾಗಿ ಮಾಡಿದ ಷೇರಿಗೆ ಮತ್ತೆ ಬೇಡಿಕೆ ಏಕೆ?

    ರೂ 316 ಕೋಟಿ ಸಂಗ್ರಹಿಸಲು ಷೇರು/ವಾರೆಂಟ್‌ ನೀಡಲು ಸ್ಪೈಸ್​ಜೆಟ್​ ಅನುಮೋದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts