More

    380ರಿಂದ 27 ರೂಪಾಯಿಗೆ ಕುಸಿದಿರುವ ಷೇರು: ಸದ್ಯ ಏರುಗತಿಯಲ್ಲಿರುವ ಬ್ಯಾಂಕ್​ ಸ್ಟಾಕ್​ ಖರೀದಿಗೆ ಮಾರುಕಟ್ಟೆ ಎಕ್ಸ್​ಪರ್ಟ್​ ಸಲಹೆ

    ಮುಂಬೈ: ಯೆಸ್ ಬ್ಯಾಂಕ್ ಷೇರುಗಳ ಬೆಲೆ ಗುರುವಾರ 7%ರಷ್ಟು ಏರಿಕೆಯಾಗಿದೆ. ವಹಿವಾಟಿನ ಸಮಯದಲ್ಲಿ ಕಂಪನಿಯ ಷೇರುಗಳು ರೂ. 27.33 ರ ಇಂಟ್ರಾಡೇ ಗರಿಷ್ಠ ಮಟ್ಟವನ್ನು ತಲುಪಿದವು.

    ಈ ಷೇರು ಈಗ 52 ವಾರಗಳ ಗರಿಷ್ಠ ಬೆಲೆಯಾದ 32.81 ರೂಪಾಯಿಗೆ 16% ನಷ್ಟು ಕಡಿಮೆ ಇದೆ. ಆದರೂ, ಸ್ಟಾಕ್ ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಶೇಕಡಾ 17.44ರಷ್ಟು ಹೆಚ್ಚಾಗಿದೆ. ಯೆಸ್ ಬ್ಯಾಂಕ್ ಷೇರುಗಳು ಸಾಮಾನ್ಯ ಸರಾಸರಿಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿವೆ. 2018 ರಲ್ಲಿ ಯೆಸ್ ಬ್ಯಾಂಕ್ ಷೇರು ಬೆಲೆ 380 ರೂಪಾಯಿ ಮುಟ್ಟಿತ್ತು.

    ಈ ಸ್ಟಾಕ್ ಸಾಕಷ್ಟು ಪ್ರಮಾಣದ ವಹಿವಾಟು ನಡೆಸುತ್ತಿದೆ. ಇದರ ಬೆಲೆ ಬಲವಾದ ಏರುಗತಿಯನ್ನು ಸಂಕೇತಿಸುತ್ತದೆ ಎಂದು ಚಾಯ್ಸ್ ಬ್ರೋಕಿಂಗ್‌ನ ಈಕ್ವಿಟಿ ರಿಸರ್ಚ್ ವಿಶ್ಲೇಷಕ ಮಂದರ್ ಭೋಜನ್ ಹೇಳುತ್ತಾರೆ.

    ಎಲ್‌ಕೆಪಿ ಸೆಕ್ಯುರಿಟೀಸ್‌ನ ಹಿರಿಯ ತಾಂತ್ರಿಕ ವಿಶ್ಲೇಷಕ ರೂಪಕ್ ಡೇ ಅವರು, ಮಾಸಿಕ ಪಟ್ಟಿಯಲ್ಲಿ ಕ್ರೋಢೀಕರಣದ ಸಮಯದಲ್ಲಿ ಯೆಸ್ ಬ್ಯಾಂಕ್ ಷೇರುಗಳ ಬೆಲೆ ತೀವ್ರವಾಗಿ ಏರಿದೆ. ಇದು ಹೂಡಿಕೆದಾರರಲ್ಲಿ ಆಶಾವಾದದ ಹಠಾತ್ ಹೆಚ್ಚಳವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಈ ಸ್ಟಾಕ್ ಬೆಲೆ 50 ರೂ ಮಟ್ಟಕ್ಕೆ ಬರಬಹುದು ಎಂದೂ ಅವರು ಹೇಳುತ್ತಾರೆ.

    ಚಾಯ್ಸ್ ಬ್ರೋಕಿಂಗ್‌ನ ಸುಮೀತ್ ಬಗಾಡಿಯಾ, “ಹೊಸ ಹೂಡಿಕೆದಾರರು ಪ್ರಸ್ತುತ ಮಟ್ಟದಲ್ಲಿ ಯೆಸ್ ಬ್ಯಾಂಕ್ ಷೇರುಗಳನ್ನು ಖರೀದಿಸಬಹುದು. ಪ್ರತಿ ಷೇರಿಗೆ 21 ರೂ.ನಷ್ಟು ಸ್ಟಾಪ್ ಲಾಸ್ ಅನ್ನು ಇರಿಸಬಹುದು. ಸ್ಟಾಕ್ ಅನ್ನು ಹತ್ತಿರದ ಅವಧಿಗೆ ಹಿಡಿದಿಟ್ಟುಕೊಳ್ಳಬಹುದು. ಇದರ ಗುರಿ ಬೆಲೆ ರೂ. 30 ಮತ್ತು ರೂ.32 ಆಗಿದೆ ಎಂದು ಹೇಳುತ್ತಾರೆ.

    ಡಿಸ್ಕೌಂಟ್​ ರೇಟಿನಲ್ಲಿ ಹೊಸ ಷೇರು ವಿತರಣೆ: ಬ್ಯಾಂಕ್ ಸ್ಟಾಕ್​ ಖರೀದಿಗೆ ಹೂಡಿಕೆದಾರರು ಮುಗಿಬಿದ್ದಿದ್ದರಿಂದ ಒಂದೇ ದಿನದಲ್ಲಿ 10% ಹೆಚ್ಚಳ

    ಸಚಿನ್​ ತೆಂಡೂಲ್ಕರ್​ ಹೂಡಿಕೆಯ ಕಂಪನಿ ಷೇರು ಅಪ್ಪರ್​ ಸರ್ಕ್ಯೂಟ್​ ಹಿಟ್​: ವಿದೇಶಿ ಹೂಡಿಕೆಗೆ ಸರ್ಕಾರ ಅನುಮತಿಸಿದ ತಕ್ಷಣವೇ ಆಗಸಕ್ಕೆ ನೆಗೆದ ಸ್ಪೇಸ್​ ಕಂಪನಿಗಳ ಷೇರುಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts