More

    ಮುಖೇಶ್​ ಅಂಬಾನಿ ಒಡೆತನದ ಜಿಯೋ ಫೈನಾನ್ಶಿಯಲ್, ರಿಲಯನ್ಸ್ ಇಂಡಸ್ಟ್ರೀಸ್​ ಷೇರು ಬೆಲೆ ಸಾರ್ವಕಾಲಿಕ ಗರಿಷ್ಠ: ಹೂಡಿಕೆದಾರರಿಗೆ ಇನ್ನಷ್ಟು ಲಾಭವಾಗಲಿದೆ ಎನ್ನುತ್ತಾರೆ ತಜ್ಞರು

    ಮುಂಬೈ: ಉದ್ಯಮಿ ಮುಖೇಶ್ ಅಂಬಾನಿಯವರ ಕಂಪನಿ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಷೇರುಗಳ ಬೆಲೆ ಶುಕ್ರವಾರದ ವಹಿವಾಟಿನ ಆರಂಭದಲ್ಲಿ 15% ಏರಿಕೆಯಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತು. ಈ ಮೂಲಕ ಸತತ ಐದನೇ ದಿನದಲ್ಲಿ ಈ ಷೇರುಗಳು ಲಾಭ ಗಳಿಸಿದವು. ಶುಕ್ರವಾರ ಶೇ.15ರಷ್ಟು ಏರಿಕೆಯಾಗಿ ದಾಖಲೆಯ 347 ರೂ. ತಲುಪಿತು.

    ಏತನ್ಮಧ್ಯೆ, ಶುಕ್ರವಾರದ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಷೇರುಗಳು ಸಹ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದವು.

    ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಬೆಲೆ ಶುಕ್ರವಾರ ಇಂಟ್ರಾ-ಡೇ ವಹಿವಾಟಿನಲ್ಲಿ ಶೇ. 1ರಷ್ಟು ಏರಿಕೆಯಾಗಿ 2,988.80 ರೂಪಾಯಿಯ ಗರಿಷ್ಠ ಮಟ್ಟ ಮುಟ್ಟಿತು.

    ಕಂಪನಿಯ ಮಾರುಕಟ್ಟೆ ಮೌಲ್ಯ ಈಗ 250 ಬಿಲಿಯನ್ ಡಾಲರ್ (ಅಂದಾಜು ರೂ. 20.72 ಲಕ್ಷ ಕೋಟಿ) ಸಮೀಪದಲ್ಲಿದೆ. 13ನೇ ಫೆಬ್ರವರಿ 2024 ರಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಮಾರುಕಟ್ಟೆ ಕ್ಯಾಪ್
    20 ಲಕ್ಷ ಕೋಟಿ ದಾಟಿತ್ತು. ಇದರೊಂದಿಗೆ ಈ ಕಂಪನಿಯು 20 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯವನ್ನು ತಲುಪಿದ ಭಾರತದ ಮೊದಲ ಕಂಪನಿಯಾಗಿದೆ.

    ಈ ತಿಂಗಳ ಆರಂಭದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಪೇಟಿಎಂ ವಾಲೆಟ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ಮಾತುಕತೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದಾದ ನಂತರ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಷೇರುಗಳಲ್ಲಿ ಕೊಂಚ ಕುಸಿತ ಕಂಡಿತ್ತು. ಶುಕ್ರವಾರ ಈ ಷೇರುಗಳಲ್ಲಿ ಭಾರೀ ವಹಿವಾಟು ನಡೆದಿದೆ.

    ತಾಂತ್ರಿಕ ಚಾರ್ಟ್‌ನಲ್ಲಿನ ವಿಶ್ಲೇಷಕರು ದೈನಂದಿನ ಚಾರ್ಟ್‌ನಲ್ಲಿ ಸ್ಟಾಕ್ ಬಲವಾಗಿ ಕಾಣುತ್ತದೆ ಎಂದು ಹೇಳಿದ್ದಾರೆ. “ಜಿಯೋ ಫೈನಾನ್ಶಿಯಲ್ ಷೇರುಗಳು ಅತಿ ಶೀಘ್ರದಲ್ಲಿ 350 ರೂ. ತಲುಪಬಹುದು. ಸ್ಟಾಪ್ ಲಾಸ್ ಅನ್ನು 310 ರೂ.ನಲ್ಲಿ ಇರಿಸಿಕೊಳ್ಳಿ.” ಎಂದು ಡಿಆರ್‌ಎಸ್ ಫಿನ್‌ವೆಸ್ಟ್ ರವಿ ಸಿಂಗ್ ಹೇಳುತ್ತಾರೆ.

    ಡಿಸೆಂಬರ್ 2023 ರ ಹೊತ್ತಿಗೆ, ಪ್ರವರ್ತಕರು ಕಂಪನಿಯಲ್ಲಿ 47.12 ಶೇಕಡಾ ಪಾಲನ್ನು ಹೊಂದಿದ್ದಾರೆ. ಇಲ್ಲಿ 5 ದಿನಗಳಲ್ಲಿ ಈ ಸ್ಟಾಕ್ ಶೇಕಡಾ 22 ಕ್ಕಿಂತ ಹೆಚ್ಚು ಹೆಚ್ಚಾಗಿದೆ. ಕಳೆದ ಒಂದು ತಿಂಗಳಲ್ಲೇ ಶೇ. 40ಕ್ಕೂ ಹೆಚ್ಚು ಏರಿಕೆಯಾಗಿದೆ. ಈ ಷೇರಿನ 52 ವಾರದ ಕನಿಷ್ಠ ಬೆಲೆ 202.80 ರೂ. ಇದೆ.

    ಒಂದು ವರ್ಷದಲ್ಲಿ ಹೂಡಿಕೆದಾರರಿಗೆ 339% ಲಾಭ ನೀಡಿದ ಐಟಿ ಸ್ಟಾಕ್: ಅಮೆರಿಕ ಕಂಪನಿಯ ಆರ್ಡರ್​ ಸಿಗುತ್ತಿದ್ದಂತೆಯೇ ಈಗ ಷೇರುಗಳ ಖರೀದಿ ಜೋರು

    380ರಿಂದ 27 ರೂಪಾಯಿಗೆ ಕುಸಿದಿರುವ ಷೇರು: ಸದ್ಯ ಏರುಗತಿಯಲ್ಲಿರುವ ಬ್ಯಾಂಕ್​ ಸ್ಟಾಕ್​ ಖರೀದಿಗೆ ಮಾರುಕಟ್ಟೆ ಎಕ್ಸ್​ಪರ್ಟ್​ ಸಲಹೆ

    ಡಿಸ್ಕೌಂಟ್​ ರೇಟಿನಲ್ಲಿ ಹೊಸ ಷೇರು ವಿತರಣೆ: ಬ್ಯಾಂಕ್ ಸ್ಟಾಕ್​ ಖರೀದಿಗೆ ಹೂಡಿಕೆದಾರರು ಮುಗಿಬಿದ್ದಿದ್ದರಿಂದ ಒಂದೇ ದಿನದಲ್ಲಿ 10% ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts