More

    ಐಎಂಎ ದೂರುಗಳ ವಿರುದ್ಧ ಸುಪ್ರೀಂ ಮೊರೆ ಹೋದ ಬಾಬಾ ರಾಮ್​​ದೇವ್​

    ನವದೆಹಲಿ : ಯೋಗ ಗುರು ಹಾಗೂ ಪತಂಜಲಿ ಆಯುರ್ವೇದ ಕಂಪೆನಿಯ ಬಾಬಾ ರಾಮದೇವ್ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್​(ಐಎಂಎ) ನಡುವಿನ ಕಲಹ ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಅಲೋಪಥಿ ವೈದ್ಯರ ಬಗೆಗಿನ ತಮ್ಮ ಟೀಕೆಯ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್​​ಐಆರ್​ಗಳನ್ನು ತಡೆ ಹಿಡಿಯಲು ಕೋರಿ ರಾಮ್​ದೇವ್​ ಅವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

    ಕರೊನಾ ಚಿಕಿತ್ಸೆಯಲ್ಲಿ ವೈದ್ಯರು ಬಳಸುವ ಔಷಧಿಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡುವ ಪ್ರಯತ್ನ ಮಾಡಿದ್ದಾರೆ ಎಂದು ಐಎಂಎ ಪಟ್ನಾ ಮತ್ತು ರಾಯ್ಪುರ ಶಾಖೆಗಳು ರಾಮ್​ದೇವ್ ವಿರುದ್ಧ ದೂರು ದಾಖಲಿಸಿವೆ. ಈ ದೂರುಗಳ ಆಧಾರದ ಮೇಲೆ ಪೊಲೀಸರು ದರ್ಜು ಮಾಡಿರುವ ಎಫ್​ಐಆರ್​ಗಳನ್ನು ತಡೆಹಿಡಿಯಬೇಕು, ಹಾಗೂ ದೆಹಲಿಗೆ ವರ್ಗಾಯಿಸಬೇಕು ಎಂದು ರಾಮ್​ದೇವ್​ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ. (ಏಜೆನ್ಸೀಸ್)

    ಮಗುವಿನೊಂದಿಗೆ 12ನೇ ಮಹಡಿಯಿಂದ ನೆಲಕ್ಕೆ ಹಾರಿ ಮಹಿಳೆ ಆತ್ಮಹತ್ಯೆ

    ಬ್ಲ್ಯಾಂಕ್ ಫಂಗಸ್ ಔಷಧಿ : ರಾಜ್ಯಕ್ಕೆ ಹೆಚ್ಚುವರಿ 5,240 ವಯಲ್ಸ್​ ಹಂಚಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts