

ಅಭಿಮಾನಿಗಳ ವಿಚಾರದಲ್ಲಿ ದರ್ಶನ್ ಯಾವತ್ತಿದ್ರೂ ಒಂದು ಕೈ ಮೇಲೆಯೇ. ಅವರು ಏನೇ ಮಾಡಿದರೂ, ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಸಣ್ಣ ಸಲಹೆ ಕೂಡ ದೊಡ್ಡ ಮಟ್ಟದಲ್ಲಿ ಆಚರಿಸಲ್ಪಡುತ್ತದೆ. ಇದೀಗ ಅಭಿಮಾನಿಯೊಬ್ಬರು ದರ್ಶನ್ಗೆ ವಿಶೇಷವಾದ ಉಡುಗೊರೆ ನೀಡಿದ್ದಾರೆ.
ಹೌದು ನಿರ್ಮಾಣ ಹಂತದ ಮನೆಗೆ ಡಿ ಬಾಸ್ ಎಂದು ಹೆಸರನ್ನು ನೀಡಿ ಸುದ್ದಿಯಲ್ಲಿದ್ದಾರೆ. ಆ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ದರ್ಶನ್ ಅಭಿಮಾನಿಗಳು ಪುಳಕಿತರಾಗಿದ್ದಾರೆ. ಪೇಂಟಿಂಗ್ ಮೂಲಕವೋ, ಕೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದರ ಮೂಲಕವೋ ಅಭಿಮಾನ ಮೆರೆಯುತ್ತಿದ್ದವರೀಗ, ಮನೆಗೆ ದರ್ಶನ್ ಹೆಸರನ್ನಿಟ್ಟು ಅಭಿಮಾನ ಮೆರೆದಿದ್ದಾರೆ.
ಇತ್ತೀಚೆಗಷ್ಟೇ ಕರೊನಾ ಹಿನ್ನೆಲೆಯಲ್ಲಿ ರಾಬರ್ಟ್ ಪೋಸ್ಟರ್ ಬಳಸಿಕೊಂಡು ಮಾಸ್ಕ್ ಸಿದ್ಧಪಡಿಸಿದ್ದರು ಅಭಿಮಾನಿಗಳು. ಅವುಗಳನ್ನು ಹಂಚಿಕೆ ಮಾಡಿ, ಮಾಸ್ಕ್ನಿಂದಾಗುವ ಅನುಕೂಲತೆಗಳೇನು ಎಂಬುದರ ಬಗ್ಗೆ ಜಾಗೃತಿಯನ್ನೂ ಮೂಡಿಸಿದ್ದರು. ಇದೀಗ ಇಲ್ಲೊಬ್ಬ ಅಭಿಮಾನಿ ವಿಶೇಷವಾಗಿ ದರ್ಶನ್ ಅವರನ್ನು ನೆನಪು ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ರಶ್ಮಿ ಹೊಸ ದುನಿಯಾ
ಎಲ್ಲ ಅಂದುಕೊಂಡಂತೆ ಆಗಿದ್ದರೆ, ‘ರಾಬರ್ಟ್’ ಸಿನಿಮಾ ಏ. 9ಕ್ಕೆ ತೆರೆಕಾಣಬೇಕಿತ್ತು. ಕರೊನಾ ಹಾವಳಿಯಿಂದಾಗಿ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿಕೊಂಡಿದೆ. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.