More

    ರಶ್ಮಿ ಹೊಸ ದುನಿಯಾ

    ‘ಬಿಗ್ ಬಾಸ್’ ಮನೆಯಿಂದ ಹೊರಬಂದ ನಂತರ ‘ದುನಿಯಾ’ ರಶ್ಮಿ ಆಮೇಲೆ ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಯಾವೊಂದು ಹೊಸ ಚಿತ್ರದಲ್ಲೂ ಅವರು ನಟಿಸುತ್ತಿರುವ ಸುದ್ದಿ ಇರಲಿಲ್ಲ. ರಶ್ಮಿ ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸುತ್ತಿದ್ದವರಿಗೆಲ್ಲಾ, ಹೊಸ ಚಿತ್ರದಲ್ಲಿ ನಟಿಸುವ ಮೂಲಕ ಉತ್ತರ ಕೊಟ್ಟಿದ್ದಾರೆ. ರಶ್ಮಿ ಸದ್ದಿಲ್ಲದೆ ಹೊಸ ಚಿತ್ರದಲ್ಲಿ ನಟಿಸಿದ್ದಾರೆ.

    ಅದೇ ‘ಅವನಲ್ಲಿ ಇವಳಿಲ್ಲಿ’. ಹೆಸರು ಕೇಳಿದಾಕ್ಷಣ, ಉಪೇಂದ್ರ ಅಭಿನಯದ ‘ಶ್’ ಚಿತ್ರ ಖಂಡಿತವಾಗಿ ನೆನಪಿಗೆ ಬರುತ್ತದೆ. ಆ ಚಿತ್ರದ ‘ಅವನಲ್ಲಿ ಇವಳಿಲ್ಲಿ …’ ಎಂಬ ಹಾಡು ಸೂಪರ್ ಹಿಟ್ ಆಗಿತ್ತು. ಈಗ ಅದೇ ಹೆಸರಿನ ಚಿತ್ರದಲ್ಲಿ ರಶ್ಮಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದು, ಚಿತ್ರವು ಇದೀಗ ಪೋಸ್ಟ್ ಪೊ›ಡಕ್ಷನ್ ಹಂತದಲ್ಲಿದೆ. ಹೆಸರೇ ಹೇಳುವಂತೆ ಇದೊಂದು ಪ್ರೇಮಕಥೆ ಇರುವ ಚಿತ್ರ. ಅಷ್ಟೇ ಅಲ್ಲ, ದುರಂತ ಪ್ರೇಮಕಥೆಯಂತೆ. ಇಲ್ಲಿ ರಶ್ಮಿ, ಫಾರಿನ್

    ರಿಟರ್ನ್ಡ್ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಅವರಿಗೆ ನಾಯಕನಾಗಿ ಪ್ರಭು ಮುಂಡ್ಕೂರ್ ಅಭಿನಯಿಸಿದ್ದಾರೆ. ಪ್ರಭು ಇದಕ್ಕೂ ಮುನ್ನ ‘ಊರ್ವಿ’, ‘ಡಾಟರ್ ಆಫ್ ಪಾರ್ವತಮ್ಮ’, ‘ರಿಲ್ಯಾಕ್ಸ್ ಸತ್ಯ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರು ವನ್ಯಜೀವಿ ಛಾಯಾಗ್ರಾಹಕನಾಗಿ ಅಭಿನಯಿಸಿದ್ದಾರೆ. ರಶ್ಮಿ ಮತ್ತು ಪ್ರಭು ಜತೆಗೆ ಜೈಜಗದೀಶ್, ಹನುಮಂತೇಗೌಡ, ಸಂಗೀತಾ, ಸುಚಿತ್ರಾ, ಶ್ರೀನಿವಾಸ ಮೇಷ್ಟ್ರು ಮುಂತಾದವರು ನಟಿಸುತ್ತಿದ್ದಾರೆ.

    ಇನ್ನು ಈ ಚಿತ್ರವನ್ನು ನಿರ್ದೇಶಿಸಿರುವವರು ತೀರ್ಥಹಳ್ಳಿಯ ಸಂದೇಶ್. ಕಥೆ-ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ಚಿತ್ರಕ್ಕೆ ಬಕ್ಕೇಶ್ ಮತ್ತು ಕಾರ್ತಿಕ್ ಸಂಗೀತ ಸಂಯೋಜಿಸಿದ್ದು, ರವಿಕಿಶೋರ್ ಛಾಯಾಗ್ರಹಣ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts