'ಐದು ನೂರು ರೂ.ಗೆ ಗ್ಯಾಸ್​ ಸಿಲಿಂಡರ್, ಉಚಿತ ವಿದ್ಯುತ್': ಹರಿಯಾಣ ಚುನಾವಣೆಗೆ 'ಕೈ' ಗ್ಯಾರಂಟಿ!

congress
Published on

ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಜನರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿದೆ. ಬಡವರು, ಮಧ್ಯಮ ವರ್ಗದವರು ಮತ್ತು ಯುವಕರನ್ನು ಸೆಳೆದು ಪಕ್ಷ ಮತ್ತೆ ಅಧಿಕಾರಕ್ಕೆ ತರಲು ಮತ್ತೊಮ್ಮೆ ಉಚಿತ ಯೋಜನೆಗಳ ಮೊರೆ ಹೋಗಿದೆ.

ರಾಜ್ಯದಲ್ಲಿ ಜಾತಿ ಗಣತಿ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಜಾತಿ ಲೆಕ್ಕಾಚಾರದ ಆಧಾರದಲ್ಲಿ 500 ರೂ.ಗೆ ಸಿಲಿಂಡರ್ ನೀಡುವುದಾಗಿ ಘೋಷಿಸಿದೆ.

ಗ್ಯಾರಂಟಿಗಳು: 300 ಯೂನಿಟ್ ವರೆಗೆ ಉಚಿತ ವಿದ್ಯುತ್, 25 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, ಮಹಿಳೆಯರಿಗೆ ಮಾಸಿಕ 2 ಸಾವಿರ ರೂ., 500ರೂ.ಗೆ ಗ್ಯಾಸ್ ಸಿಲಿಂಡರ್, 2 ಲಕ್ಷ ಉದ್ಯೋಗಗಳ ನೇಮಕಾತಿ, ಮಾದಕ ದ್ರವ್ಯ ಮುಕ್ತ ರಾಜ್ಯ, ವೃದ್ಧರಿಗೆ 6 ಸಾವಿರ ರೂ.ಪಿಂಚಣಿ, ಅಂಗವಿಕಲರಿಗೆ 6 ಸಾವಿರ ರೂ.ಪಿಂಚಣಿ, ವಿಧವೆಯರಿಗೆ 6 ಸಾವಿರ ರೂ.ಪಿಂಚಣಿ, ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆ ಮುಂದುವರಿಸುವುದು, ಜಾತಿ ಜನಗಣತಿ, ರೈತರ

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟಕ್ಕೆ ತಕ್ಷಣ ಪರಿಹಾರ, ಬಡವರಿಗೆ ಮನೆ ಕಟ್ಟಿಕೊಡಲು 3.5 ಲಕ್ಷ ನೀಡುತ್ತೇವೆ ಎಂದು ಭರವಸೆ ನೀಡಲಾಗಿದೆ.

ಹರಿಯಾಣ 90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಮುಂದಿನ ತಿಂಗಳು 5 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. 8ರಂದು ಫಲಿತಾಂಶ ಪ್ರಕಟವಾಗಲಿದೆ.

ಕಾಂಗ್ರೆಸ್ ಪಕ್ಷವು ಹರಿಯಾಣದ ಜನರನ್ನು ಮೆಚ್ಚಿಸಲು ಪ್ರಯತ್ನಿಸಿದೆ. ಬಡ ಮತ್ತು ಮಧ್ಯಮ ವರ್ಗದ ಜನರನ್ನು ಗುರಿಯಾಗಿಸಿಕೊಂಡು ಭರವಸೆಗಳನ್ನು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net