

ಬಂಗಾಳಕೊಲ್ಲಿ: ನೈಋತ್ಯ ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತವು ಡಿಸೆಂಬರ್ 3 ರಂದು ಚಂಡಮಾರುತವಾಗಿ ತೀವ್ರಗೊಳ್ಳಲಿದ್ದು, ಇದರ ಪರಿಣಾಮವಾಗಿ ತಮಿಳುನಾಡಿನ ಉತ್ತರ ಕರಾವಳಿ ಜಿಲ್ಲೆಗಳು ಮತ್ತು ಒಳನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ (ಡಿ.02) ಮನ್ಸೂಚನೆ ನೀಡಿದೆ.
ಚಂಡಮಾರುತದ ದಿಕ್ಕು: ಬಿರುಸಿನ ಚಂಡಮಾರುತ ಡಿಸೆಂಬರ್ 4ರ ಬೆಳಗ್ಗೆ ದಕ್ಷಿಣ ಆಂಧ್ರಪ್ರದೇಶ ಮತ್ತು ನೆರೆಯ ಉತ್ತರ ತಮಿಳುನಾಡು ಕರಾವಳಿಯ ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯನ್ನು ತಲುಪಲಿದೆ. ತದನಂತರ ಉತ್ತರದ ಕಡೆಗೆ ಚಲಿಸಲಿದ್ದು, ಬಹುತೇಕ ಸಮಾನಾಂತರವಾಗಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಸಮೀಪಿಸಲಿದೆ. ಡಿಸೆಂಬರ್ 5ರ ಮುಂಜಾನೆಯಲ್ಲಿ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯನ್ನು ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಈ ಚಂಡಮಾರುತ ಹಾದು ಹೋಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತದ ಗಾಳಿಯು ಗಂಟೆಗೆ 80-90 ಕಿಮೀ ವೇಗದಲ್ಲಿ ಬೀಸಲಿದ್ದು, ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸಲಿದೆ. ಪ್ರಾದೇಶಿಕ ಹವಾಮಾನ ಕೇಂದ್ರದ ಉಪ ಮಹಾನಿರ್ದೇಶಕ ಎಸ್. ಬಾಲಚಂದ್ರನ್ ನೀಡಿದ ಮಾಹಿತಿ ಪ್ರಕಾರ, ಪುದುಕೊಟ್ಟೈ, ತಂಜಾವೂರು, ತಿರುವರೂರು, ನಾಗಪಟ್ಟಣಂ, ತಿರುವಳ್ಳೂರು, ಚೆನ್ನೈ, ಕಾಂಚೀಪುರಂ, ರಾಣಿಪೇಟ್, ಚೆಂಗಲ್ಪಟ್ಟು, ವಿಲ್ಲುಪುರಂ ಮತ್ತು ಕಡಲೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ಚಾಲ್ತಿಯಲ್ಲಿರುವ ಗಾಳಿಯು ಡಿಸೆಂಬರ್ 2ರ ರಾತ್ರಿಯಿಂದ ಡಿಸೆಂಬರ್ 4 ರವರೆಗೆ ಗಂಟೆಗೆ 60-70 ಕಿ.ಮೀ ವೇಗದಲ್ಲಿ 80 ಕಿಮೀ ವೇಗದಲ್ಲಿ ಚಂಡಮಾರುತವಾಗಿ ಮಾರ್ಪಡುವ ಸಾಧ್ಯತೆಯಿದೆ. ನಂತರದಲ್ಲಿ ಅದು ಕ್ರಮೇಣ ಕಡಿಮೆಯಾಗುತ್ತದೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).
ಈ ರಾಶಿಯವರಿಗಿಂದು ಸುಖ ಭೋಜನ ಪ್ರಾಪ್ತಿ: ನಿತ್ಯಭವಿಷ್ಯ