ಮಹಿಳೆಯಿಂದ ಬರೊಬ್ಬರಿ 4.12 ಕೋಟಿ ರೂ. ವಂಚಿಸಿದ ಸೈಬರ್​ ಖದೀಮರ ಬಂಧನ |Cybercriminal

Cybercriminal
Published on

ಕೇರಳ: 'ಡಿಜಿಟಲ್​ ಅರೆಸ್ಟ್​​' ವಂಚನೆ(Cybercriminal)ಪ್ರಕರಣದಲ್ಲಿ ಇಲ್ಲಿನ ಕೊಚ್ಚಿಯ ಮಹಿಳೆಯೊಬ್ಬರಿಗೆ ಬರೊಬ್ಬರಿ 4.12 ಕೋಟಿ ರೂ. ವಂಚನೆ ಮಾಡಿದರ ಆರೋಪದ ಮೇಲೆ ಇಬ್ಬರನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಮಣಪುರಂ ಜಿಲ್ಲೆಯ ಅರೀಕೋಡ್​ನ ನಿವಾಸಿಗಳಾದ ಮೊಹಮ್ಮದ್​ ಮುಹಾಸಿಲ್​(22) ಮತ್ತು ಮಿಶಾಬ್ ಕೆಪಿ (21) ​​ಬಂಧಿತ ವ್ಯಕ್ತಿಗಳು. ದೆಹಲಿ ಪೊಲೀಸ್​ ಅಧಿಕಾರಿಗಳು ಎಂಬಂತೆ ನಟಿಸಿ ಮಹಿಳೆಯಿಂದ ಕೋಟ್ಯಾಂತರ ರೂ. ವಂಚನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ಸಂಪರ್ಕಿಸಿದ ಖದೀಮರು, ''ನಿಮ್ಮ ಆಧಾರ್​ ಕಾರ್ಡ್​ ಬಳಸಿ ವಂಚನೆ ಮೂಲಕ ಬ್ಯಾಂಕ್​ ಖಾತೆ ತೆರೆದಿದ್ದಾರೆ. ಹೀಗಾಗಿ, ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ ಎಂದು ಮಹಿಳೆಯನ್ನು ನಂಬಿಸಿದ ಖದೀಮರು, ದೆಹಲಿ ಪೊಲೀಸ್​ ಅಧಿಕಾರಿಗಳಂತೆ ಪೋನ್​ ಮತ್ತು ವಿಡಿಯೋ ಕಾಲ್​ ಮಾಡಿ ''ಡಿಜಿಟಲ್​ ಬಂಧನ''ಕ್ಕೆ ಒಳಪಡಿಸಿದ್ದಾರೆ. ನಿಮ್ಮ(ಮಹಿಳೆ) ಖಾತೆಯಲ್ಲಿರುವ ಒಟ್ಟು ಹಣ ಈ ಹೊಸ ಖಾತೆಗೆ ವರ್ಗಾವಣೆ ಮಾಡಿ ಎಂದ ಖದೀಮರು ತಮ್ಮ ಹೊಸ ಖಾತೆಗೆ ಎಲ್ಲಾ ಹಣ ಟ್ರಾನ್ಸಫರ್​ ಮಾಡಿಸಿಕೊಂಡಿದ್ದಾರೆ'' ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಜಾಡು ಹಿಡಿದು ಪತ್ತೆ ಮಾಡಿದ ಪೊಲೀಸರು

ಆರಂಭದಲ್ಲಿ ತೃಕ್ಕಾಕರ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಕೊಚ್ಚಿ ನಗರ ಪೊಲೀಸ್​​ ಆಯುಕ್ತ ಪುಟ್ಟ ವಿಮಲಾದಿತ್ಯ ಅವರ ಸೂಚನೆ ಮೇರೆಗೆ ಪ್ರಕರಣವನ್ನು ಸಹಾಯಕ ಪೊಲೀಸ್​ ಆಯುಕ್ತ(ಸೈಬರ್​) ಎಂ.ಕೆ. ಮುರಳಿಗೆ ವರ್ಗಾಹಿಸಲಾಗಿತು. ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡವನ್ನು ರಚಿಸಿಲಾಗಿತ್ತು.

ಇನ್ನು ವಂಚಿಸಿದ ಹಣವನ್ನು ತಮ್ಮ ನಂಬಿಕಸ್ಥರ ಖಾತೆಗಳಿಗೆ ವಂಚಕರು ವರ್ಗಾಹಿಸಿದ್ದಾರೆ. ವಂಚನೆಯ ಹಣದಲ್ಲಿ ಅಧಿಕ ಭಾಗವನ್ನು ಮಣಪುರಂನಲ್ಲಿ ವಿತ್​ ಡ್ರಾ ಮಾಡಲಾಗಿದೆ ಎಂಬ ಮಾಹಿತಿ ಆಧರಿಸಿದ ಪೊಲೀಸರು, ಮಣಪುರಂನಲ್ಲಿರು ಎಲ್ಲಾ ಎಟಿಟಂ ಸ್ಥಳಗಳ ಮೇಲೆ ನಿಗಾ ಇಟ್ಟಿದ್ದಾರೆ. ಇವರ ದೂರವಾಣಿ ಕರೆಗಳ ಮೇಲೆ ಕೂಡ ಕಣ್ಣೀಟ್ಟಿದ್ದ ಪೊಲೀಸರು ಕೊನೆಗೆ ನಿಖರ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net