ಬೆಂಗಳೂರಿನಲ್ಲಿ ಎರಡು ಹೊಸ ಬ್ಲೂ ಸ್ಕ್ವೇರ್ ಡೀಲರ್‌ ಶಿಪ್‌ ಶೋರೂಮ್​​ಗಳನ್ನು ತೆರೆದ ಯಮಹಾ | Yamaha

blank

ಬೆಂಗಳೂರು: ಇಂಡಿಯಾ ಯಮಹಾ(Yamaha) ಮೋಟಾರ್ (ಐವೈಎಂ) ಬೆಂಗಳೂರಿನ ಪ್ರಮುಖ ಸ್ಥಳಗಳಾದ ಬೊಮ್ಮನಹಳ್ಳಿ ಮತ್ತು ಮಾರತಹಳ್ಳಿಯಲ್ಲಿ ಎರಡು ಹೊಸ ಬ್ಲೂ ಸ್ಕ್ವೇರ್ ಡೀಲರ್‌ ಶಿಪ್‌ ಶೋರೂಮ್​ಗಳನ್ನು ತೆರೆದಿದೆ. ಈ ಮೂಲಕ ಯಮಹಾ ಸಂಸ್ಥೆಯು ಕರ್ನಾಟಕದಲ್ಲಿ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ.

ಬೊಮ್ಮನಹಳ್ಳಿ ಮೋಟೋ ವರ್ಲ್ಡ್ ಎಂಬ ಹೆಸರಿನಲ್ಲಿ ಮತ್ತು ಮಾರತಹಳ್ಳಿಯಲ್ಲಿ ಪನಾಚೆ ಎಂಟರ್‌ ಪ್ರೈಸಸ್ ಹೆಸರಿನಲ್ಲಿ ಆರಂಭವಾಗಿರುವ ನೂತನ ಬ್ಲೂಸ್ಕ್ವೇರ್ ಶೋರೂಮ್ ಗಳು ಗ್ರಾಹಕರಿಗೆ ಅತ್ಯುತ್ತಮ ಮಾರಾಟ ಮತ್ತು ಸರ್ವೀಸ್ ಸೌಲಭ್ಯ ಒದಗಿಸಲು ವಿನ್ಯಾಸಗೊಂಡಿವೆ. ಹೊಸತಾಗಿ ಮತ್ತೆರಡು ಶೋರೂಮ್​ಗಳನ್ನು ತೆರೆಯುವ ಮೂಲಕ ಯಮಹಾ ಸಂಸ್ಥೆಯು ಗ್ರಾಹಕರಿಗೆ ಅತ್ಯದ್ಭುತ ಸೇವೆ ಒದಗಿಸುವ ಗುರಿಯನ್ನು ಇಟ್ಟುಕೊಂಡಿದೆ.

ಹೊಸ ಶೋರೂಮ್​​ಗಳ ಮೂಲಕ ಕರ್ನಾಟಕದಲ್ಲಿ ತನ್ನ ಉಪಸ್ಥಿತಿ ಬಲಪಡಿಸಿಕೊಂಡ ಯಮಹಾ

ದ್ವಿಚಕ್ರ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಮತ್ತು ಮೋಟಾರ್‌ ಸೈಕ್ಲಿಂಗ್ ಆಸಕ್ತರ ಸಮುದಾಯ ಬೆಳೆಯುತ್ತಿರುವುದರಿಂದ ಕರ್ನಾಟಕವು ಯಮಹಾಗೆ ಪ್ರಮುಖ ಮಾರುಕಟ್ಟೆಯಾಗಿ ಬೆಳೆದಿದೆ. ಅದಕ್ಕೆ ಪೂರಕವಾಗಿ ಯಮಹಾ ಸಂಸ್ಥೆಯು ಉತ್ತಮ ಡೀಲರ್ ನೆಟ್​​ವರ್ಕ್ ಸಿದ್ಧಗೊಳಿಸಿದ್ದು, ಗ್ರಾಹಕರ ಆದ್ಯತೆಗೆ ತಕ್ಕಂತೆ ನವೀನ ಉತ್ಪನ್ನಗಳನ್ನು ಒದಗಿಸುತ್ತದೆ. ಬೆಂಗಳೂರಿನಲ್ಲಿ ಆರಂಭವಾಗಿರುವ ಈ ಎರಡು ಹೊಸ ಬ್ಲೂ ಸ್ಕ್ವೇರ್ ಡೀಲರ್‌ ಶಿಪ್‌ ಶೋರೂಮ್​​ಗಳ ಸೇರ್ಪಡೆಯಿಂದ ಕರ್ನಾಟಕದಲ್ಲಿರುವ ಯಮಹಾ ಬ್ಲೂ ಸ್ಕ್ವೇರ್ ಶೋರೂಮ್​ಗಳ ಒಟ್ಟು ಸಂಖ್ಯೆ 33ಕ್ಕೆ ಏರಿದೆ. ಬೆಂಗಳೂರಿನಲ್ಲಿಯೇ ಒಟ್ಟು 19 ಬ್ಲೂಸ್ಕ್ವೇರ್ ಶೋರೂಮ್ ಗಳಿರುವುದು ವಿಶೇಷವಾಗಿದೆ.

ಬ್ಲೂ ಸ್ಕ್ವೇರ್ ಶೋರೂಮ್​​ಗಳು ಯಮಹಾ ಪ್ರಪಂಚಕ್ಕೆ ಪ್ರವೇಶ ದೊರಕಿಸುವ ಬಾಗಿಲು

ಬ್ಲೂ ಸ್ಕ್ವೇರ್ ಶೋರೂಮ್​​ಗಳು ಕೇವಲ ರಿಟೇಲ್ ಮಾರಾಟದ ಸ್ಥಳಗಳಷ್ಟೇ ಆಗಿ ಉಳಿದಿಲ್ಲ. ಈ ಶೋರೂಮ್ ಗಳನ್ನು ಉನ್ನತ ಮಟ್ಟದ ಮೋಟಾರ್ ಸೈಕ್ಲಿಂಗ್ ಅನುಭವ ಒದಗಿಸುವ ಕೇಂದ್ರಗಳಾಗಿ ವಿನ್ಯಾಸಗೊಳಿಸಲಾಗಿದೆ. ಈ ಶೋರೂಮ್​​ನ ಹೆಸರಿನಲ್ಲಿನ ‘ಬ್ಲೂ’ ಯಮಹಾದ ರೇಸಿಂಗ್ ಪರಂಪರೆಯ ಸಂಕೇತವಾಗಿದೆ ಮತ್ತು ಇಲ್ಲಿ ಬ್ರ್ಯಾಂಡ್‌ ನ ಸಂಪೂರ್ಣ ಉತ್ಪನ್ನ ಶ್ರೇಣಿಯನ್ನು ನೋಡಲು ಗ್ರಾಹಕರಿಗೆ ಸೂಕ್ತವಾದ ವಾತಾವರಣವನ್ನು ಸೃಷ್ಟಿಸಲಾಗುತ್ತದೆ.

ಬೆಂಗಳೂರಿನಲ್ಲಿ ಎರಡು ಹೊಸ ಬ್ಲೂ ಸ್ಕ್ವೇರ್ ಡೀಲರ್‌ ಶಿಪ್‌ ಶೋರೂಮ್​​ಗಳನ್ನು ತೆರೆದ ಯಮಹಾ | Yamaha

ಶೋರೂಮ್‌ ಗಳು ಯಮಹಾ ಮೋಟಾರ್‌ ಸೈಕಲ್‌ ಗಳು ಮತ್ತು ಸ್ಕೂಟರ್‌ ಗಳನ್ನು ಸೊಗಸಾಗಿ ಪ್ರದರ್ಶಿಸುತ್ತವೆ. ಜತೆಗೆ ಇಲ್ಲಿ ವ್ಯಾಪಕ ಶ್ರೇಣಿಯ ಯಮಹಾ ಒರಿಜಿನಲ್ ಪರಿಕರಗಳು, ಉಡುಪುಗಳು ಮತ್ತು ಬಿಡಿಭಾಗಗಳು ದೊರೆಯುತ್ತವೆ. ತೀವ್ರ ಅನುಭವವನ್ನು ಒದಗಿಸಲೆಂದೇ ವಿನ್ಯಾಸಗೊಳಿಸಲಾಗಿರುವ ಬ್ಲೂ ಸ್ಕ್ವೇರ್ ಔಟ್​​ಲೆಟ್‌ಗಳು ಗ್ರಾಹಕರಿಗೆ ಪ್ರತೀ ಟಚ್‌ ಪಾಯಿಂಟ್‌ನಲ್ಲಿ ಯಮಹಾದ ರೇಸಿಂಗ್ ಪರಂಪರೆಯನ್ನು ಅರಿಯುವ ಅವಕಾಶ ಮಾಡಿಕೊಡುತ್ತದೆ. ಜತೆಗೆ ಈ ಶೋರೂಮ್‌ಗಳು ಯಮಹಾದ ಬ್ಲೂ ಸ್ಟ್ರೀಕ್ಸ್ ರೈಡರ್ ಸಮುದಾಯದ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತವೆ. ಗ್ರಾಹಕರು ಸಹ ಉತ್ಸಾಹಿ ರೈಡರ್​ಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಮ್ಮ ಯಮಹಾ ಮೋಟಾರ್ ಸೈಕಲ್​ಗಳ ಜತೆಗೆ ಅತ್ಯಾಕರ್ಷಕ ರೈಡ್​​ಗಳು ಹಾಗೂ ಸಮುದಾಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುತ್ತವೆ. ಈ ವಿಸ್ತರಣಾ ಪ್ರಕ್ರಿಯೆಯು ಸದ್ಯ ಚಾಲ್ತಿಯಲ್ಲಿರುವ ಯಮಹಾದ ‘ದಿ ಕಾಲ್ ಆಫ್ ದಿ ಬ್ಲೂ’ ಪ್ರಚಾರ ಅಭಿಯಾನಕ್ಕೆ ಸೂಕ್ತವಾಗಿ ಹೊಂದಿಕೆಯಾಗುತ್ತಿದ್ದು, ಭಾರತದಲ್ಲಿ ಯಮಹಾ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಮತ್ತು ಎಲ್ಲಾ ಪ್ರದೇಶಗಳ ಗ್ರಾಹಕರ ಜತೆಗೆ ಗಟ್ಟಿಯಾದ ಬಾಂಧವ್ಯವನ್ನು ಸೃಷ್ಟಿಸಲು ಸಹಾಯ ಮಾಡಲಿದೆ.

ಯಮಹಾದ ಪ್ರೀಮಿಯಂ ಮೋಟಾರ್‌ ಸೈಕಲ್‌ ಗಳಾದ ವೈಝಡ್ಎಫ್-ಆರ್3 (321ಸಿಸಿ), ಎಂಟಿ -03 (321ಸಿಸಿ), ವೈಝಡ್ಎಫ್-ಆರ್15ಎಂ (155ಸಿಸಿ), ವೈಝಡ್ಎಫ್-ಆರ್15 ವಿ4 (155ಸಿಸಿ), ವೈಝಡ್ಎಫ್-ಆರ್15ಎಸ್ ವಿ3 (155ಸಿಸಿ), ಎಂಟಿ-15 ವಿ2 (155ಸಿಸಿ), ಮತ್ತು ಎಫ್ ಝಡ್ ಸರಣಿಯ ಬೈಕುಗಳಾದ ಎಫ್ ಝಡ್ ಎಫ್ಐ ವರ್ಷನ್ 4.0 (149ಸಿಸಿ), ಎಫ್ ಝಡ್ ಎಫ್ಐ ವರ್ಷನ್ 3.0 (149ಸಿಸಿ), ಎಫ್ ಝಡ್ ಎಫ್ಐ (149ಸಿಸಿ), ಮತ್ತು ಎಫ್ ಝಡ್ ಎಕ್ಸ್ (149ಸಿಸಿ) ಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಜತೆಗೆ ಯಮಹಾ ಸ್ಕೂಟರ್​ಗಳಾದ ಯಮಹಾ ಏರಾಕ್ಸ್ 155 ವರ್ಷನ್ ಎಸ್ (155ಸಿಸಿ), ಆರಾಕ್ಸ್ 155 (155ಸಿಸಿ), ಫ್ಯಾಸಿನೋ ಎಸ್ 125 ಎಫ್ಐ ಹೈಬ್ರಿಡ್ (125ಸಿಸಿ), ಫ್ಯಾಸಿನೋ 125 ಎಫ್ಐ ಹೈಬ್ರಿಡ್ (125ಸಿಸಿ), ರೇಝಡ್ಆರ್ 125 ಎಫ್ಐ ಹೈಬ್ರಿಡ್ (125 ಸಿಸಿ) ಮತ್ತು ರೇಝಡ್ಆರ್ ಸ್ಟ್ರೀಟ್ ರಾಲಿ 125 ಎಫ್ಐ ಹೈಬ್ರಿಡ್ (125 ಸಿಸಿ) ಸೇರಿದಂತೆ ಯಮಹಾದ ವೈವಿಧ್ಯಮಯ ಉತ್ಪನ್ನ ಪೋರ್ಟ್‌ ಫೋಲಿಯೋಗಳನ್ನು ಪ್ರದರ್ಶಿಸುತ್ತದೆ.

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…