

ನವದೆಹಲಿ: ಕೃತಕ ಬುದ್ಧಿಮತ್ತೆ ಆಧರಿತ ಮತ್ತು ಡೀಪ್ಫೇಕ್ ಒಳಗೊಂಡ ಸೈಬರ್ ದಾಳಿಗಳ ಸಂಖ್ಯೆಯು 2025ರಲ್ಲಿ ತೀವ್ರವಾಗಿ ಹೆಚ್ಚಾಗಲಿದೆ. ಆರೋಗ್ಯ ಮತ್ತು ಹಣಕಾಸು ವಲಯಗಳೇ ಇದರ ಮುಖ್ಯ ಟಾರ್ಗೆಟ್ ಆಗಿರಲಿವೆ ಎಂದು ವರದಿಯೊಂದು ತಿಳಿಸಿದೆ.
ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿಎಸ್ಸಿಐ) ಮತ್ತು ಸೆಕ್ರೖೆಟ್ ಸಂಸ್ಥೆಯು ಸಮೀಕ್ಷೆ ನಡೆಸಿ ತಯಾರಿಸಿರುವ ‘ಇಂಡಿಯಾ ಸೈಬರ್ ಥ್ರೆಟ್ ರಿಪೋರ್ಟ್ 2025’ನಲ್ಲಿ ಸೈಬರ್ ಕ್ರಿಮಿನಲ್ಗಳು ಎಐ ಬಳಸಿ ನಡೆಸುವ ದಾಳಿಗಳ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ.
‘ದುಷ್ಕರ್ವಿುಗಳು ಎಐ, ಡೀಪ್ಫೇಕ್ ಬಳಸಿ ದಾಳಿ ನಡೆಸುವುದರಿಂದ ಅವರನ್ನು ಪತ್ತೆ ಹಚ್ಚುವುದೂ ಕಷ್ಟವಾಗಲಿದೆ. ಸಾಂಪ್ರದಾಯಿಕ ಭದ್ರತಾ ವ್ಯವಸ್ಥೆಯಿಂದ ಈ ಎಐ ಆಧರಿತ ಮಾಲ್ವೇರ್ಗಳನ್ನು ಪತ್ತೆ ಮಾಡಲು ಆಗುವುದಿಲ್ಲ. ಫೇಕ್ ವಿಡಿಯೋ, ಆಡಿಯೋ ಸಂದೇಶಗಳು ವಿಶ್ವಾಸದಾಯಕ (ಟ್ರಸ್ಟೆಡ್) ಮೂಲಗಳಿಂದಲೇ ಬರುವುದರಿಂದ ಪತ್ತೆ ಮಾಡುವುದು ಅಷ್ಟು ಸುಲಭವಲ್ಲ. ಜನರು ಹೊಸ ಮಾದರಿಯ ಸೈಬರ್ ದಾಳಿಗಳಿಗೆ ಮುಖಾಮುಖಿಯಾಗಲಿದ್ದಾರೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ. ‘ರ್ಯಾನ್ಸಮ್ೇರ್ ದಾಳಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರಲಿದೆ. ದತ್ತಾಂಶವನ್ನು ಹಿಡಿದಿಟ್ಟುಕೊಂಡ ದುಷ್ಕರ್ವಿುಗಳಿಂದ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಬರಲಿದೆ. ಇಂಟರ್ನೆಟ್ ಉಪಕರಣಗಳು ಹೆಚ್ಚಾಗುವುದರಿಂದ ಇದು ಸೈಬರ್ ಕ್ರಿಮಿನಲ್ಗಳಿಗೆ ಹೆಚ್ಚಿನ ಅವಕಾಶ ನೀಡುತ್ತದೆ. ಹೆಚ್ಚಿನ ಭದ್ರತಾ ವ್ಯವಸ್ಥೆ ಅಳವಡಿಸದಿರುವ ಉಪಕರಣಗಳ ಮೂಲಕ ಸೈಬರ್ ದಾಳಿಗಳು ನಡೆಯಲಿವೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಸರ್ಕಾರದ ವಿವಿಧ ಯೋಜನೆಗಳಡಿ ಪ್ರಯೋಜನ ಪಡೆಯುವಂತೆ ಆಮಿಷ ಒಡ್ಡುವ ನಕಲಿ ಸರ್ಕಾರಿ ಸೇವಾ ಆಪ್ಗಳು, ವೈಯಕ್ತಿಕ ಉಳಿತಾಯದ ಹಣವನ್ನು ಕಬಳಸಿಸುವ ವಂಚಕ ಹೂಡಿಕೆ ವೇದಿಕೆಗಳು ಮುಂದಿನ ವರ್ಷ ಹೊಸ ಸವಾಲನ್ನು ಜನರಿಗೆ ಒಡ್ಡಲಿವೆ. ಕ್ರಿಪ್ಟೋಕರೆನ್ಸಿ ಮೈನಿಂಗ್, ಕ್ರಿಪ್ಟೋ ಜಾಕಿಂಗ್ ದಾಳಿಗಳೂ ಹೆಚ್ಚಾಗಲಿವೆ. ಈ ದಾಳಿಗಳನ್ನು ತಡೆಯುವುದಕ್ಕೆ ಮತ್ತು ಅವುಗಳಿಂದ ಹಾನಿಯಾಗದಂತೆ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದೂ ವರದಿ ತಿಳಿಸಿದೆ.