ತಾಳೆ ಮರದ ತಲೆ ಕತ್ತರಿಸಿದ ವ್ಯಕ್ತಿ ಏನಾದ...? ಭಯ ಹುಟ್ಟಿಸುವ ವಿಡಿಯೋ ಇದು

Palm Tree
Published on

ವ್ಯಕ್ತಿಯೋರ್ವ ಎತ್ತರದ ತಾಳೆ ಮರವನ್ನೇರಿ, ತುದಿಯಲ್ಲಿ ಕುಳಿತು, ಅದರ ತಲೆಯನ್ನು ಕತ್ತರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.

ನೆಟ್ಟಿಗರಂತೂ ವಿಡಿಯೋ ನೋಡಿ ಸಿಕ್ಕಾಪಟೆ ಶಾಕ್​ ಆಗಿದ್ದಾರೆ. ಅದನ್ನು ನೋಡಿದರೆ ನಿಮಗೂ ಒಮ್ಮೆ ಆತಂಕ, ಗಾಬರಿ ಆಗದೆ ಇರದು.

ಅಮೆರಿಕದ ಬಾಸ್ಕೆಟ್​ ಬಾಲ್​ ಆಟಗಾರ ರೆಕ್ಸ್ ಚಾಪ್ಮನ್ ಎಂಬುವರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ವ್ಯಕ್ತಿಯೋರ್ವ ಸಲೀಸಾಗಿ ಎತ್ತರದ ತಾಳೆ ಮರ ಏರುತ್ತಾನೆ. ಅದರ ತುದಿಯಲ್ಲಿ ಕುಳಿತು ಮರದ ತಲೆಯನ್ನು ಗರಗಸದಿಂದ ಕತ್ತರಿಸುತ್ತಾನೆ. ಆದರೆ ಹಾಗೆ ಮರದ ರೆಂಬೆಗಳಿರುವ ತಲೆ ಭಾಗವನ್ನು ಕಡಿದ ಮೇಲೆ ಬೋಳು ಮರ ಅತ್ತಿತ್ತ ಜೋಕಾಲಿಯಂತೆ ತೂಗುವುದನ್ನು ನೋಡಿದರೆ ಖಂಡಿತ ಭಯವಾಗುತ್ತದೆ. ಬೋಳಾದ..ತೆಳುವಾದ ಎತ್ತರದ ತಾಳೆ ಮರದಲ್ಲಿ ಕುಳಿತ ವ್ಯಕ್ತಿಯೂ ಗಾಳಿಯಲ್ಲಿ ಆಚೀಚೆ ತೂಗುವುದನ್ನು ನೋಡಬಹುದು. ಬಿದ್ದರೆ ಆತ ಉಳಿಯುವುದು ಸಾಧ್ಯವೇ ಇಲ್ಲ. ಆದರೆ ನಂತರ ಆತ ಮರವನ್ನು ಹೇಗೆ ಇಳಿದ..ಏನಾದ ಎಂಬುದು ಗೊತ್ತಾಗಲಿಲ್ಲ. ಇದನ್ನೂ ಓದಿ: ‘ಮಹಾ’ ನಾಯಕರ ಗುಟ್ಟಾದ ಭೇಟಿಗೆ ಹೀಗಿದೆ ಸಮಜಾಯಿಶಿ; ರಾಜಕೀಯ ಇಲ್ವೇ ಇಲ್ವಂತೆ !

ಮರ ಗಾಳಿಯಲ್ಲಿ ತೂಗುತ್ತಿದ್ದರೂ ಗಟ್ಟಿಯಾಗಿ ಹಿಡಿದು ಕುಳಿತ ವ್ಯಕ್ತಿಯ ಸಾಹಸವನ್ನು ನೆಟ್ಟಿಗರು ಹೊಗಳಿದ್ದಾರೆ. ಆದರೆ ಕೆಲವರಂತೂ ಇದೆಂಥಾ ಮೂರ್ಖತನ ಎಂದಿದ್ದಾರೆ. ವಿಡಿಯೋಕ್ಕೆ 6.7 ಮಿಲಿಯನ್​​ಗಳಷ್ಟು ವೀವ್ಸ್​ ಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net