

ತಿರುವನಂತಪುರ: ರಾಜತಾಂತ್ರಿಕ ಪಾರ್ಸೆಲ್ ರೂಪದಲ್ಲಿ ಧಾರ್ಮಿಕ ಗ್ರಂಥಗಳನ್ನು ವಿದೇಶದಿಂದ ತರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಕೊಚ್ಚಿಯಲ್ಲಿರುವ ಕಸ್ಟಮ್ಸ್ ಪ್ರಿವೆಂಟಿವ್ ಹೆಡ್ಕ್ವಾರ್ಟ್ರಸ್ ನಲ್ಲಿ ವಿಚಾರಣೆಗೆ ಹಾಜರಾಗುವಂತೆ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ಗೆ ಕಸ್ಟಮ್ಸ್ ಇಲಾಖೆ ನೋಟಿಸ್ ಜಾರಿಗೊಳಿಸಿದೆ.
ಡಿಪ್ಲೋಮಾಟಿಕ್ ಪಾರ್ಸೆಲ್ ರೂಪದಲ್ಲಿ 4478 ಕಿಲೋ ಧಾರ್ಮಿಕ ಗ್ರಂಥಗಳನ್ನು ತರಿಸಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಜಲೀಲ್ ಅವರನ್ನು ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎನ್ಐಎ), ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೊಳಪಡಿಸಿತ್ತು.
ಈ ಗ್ರಂಥಗಳನ್ನು ಮಲಪ್ಪುರಂನಲ್ಲಿ ಹಂಚಲಾಗಿದೆ. ರಾಜತಾಂತ್ರಿಕ ಪಾರ್ಸೆಲ್ ರೂಪದಲ್ಲಿ ಬಂದ ವಸ್ತುಗಳನ್ನು ಈ ರೀತಿ ಹಂಚುವುದು ಪ್ರೊಟೋಕಾಲ್ ಉಲ್ಲಂಘನೆಯಾಗಿದ್ದು, ಕಸ್ಟಮ್ಸ್ ಅಧಿಕಾರಿಗಳು ಇದರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಇದರ ತನಿಖೆ ಈಗ ಪ್ರಗತಿಯಲ್ಲಿದೆ. (ಏಜೆನ್ಸೀಸ್)