

ನೋಯ್ಡಾ: ಪಾರ್ಸೆಲ್ ಡೆಲಿವರಿ ಮಾಡಲು ಹೋಗಿದ್ದ ಇ-ಕಾಮರ್ಸ್ ಕಂಪನಿಯ ಡೆಲಿವರಿ ಬಾಯ್ಗೆ ಯುವಕರಿಬ್ಬರು ಹಣ ನೀಡದೆ ಪಾರ್ಸೆಲ್ನೊಂದಿಗೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.
ಇದನ್ನೂ ಓದಿ: ಬೇರೆಯವರೊಂದಿಗೆ ಮಾತನಾಡಬೇಡವೆಂದ ಪತಿ: ಪತ್ನಿ ಮಾಡಿದ್ದಿಷ್ಟು..
ಕಂಪನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ರಾಜ್‌ಕುಮಾರ್ ಎಂಬ ಯುವಕ, ಆಗಸ್ಟ್ 21ರಂದು ಕಂಪನಿಯ ಕಚೇರಿಯಿಂದ ಪಾರ್ಸೆಲ್ ಸ್ವೀಕರಿಸಿದ್ದನು. ಅದರ ಮೇಲೆ ಗ್ರಾಹಕರ ಹೆಸರು ದೀಪಕ್ ಎಂದು ಬರೆಯಲಾಗಿತ್ತು. ಆ ಬಳಿಕ ಯುವಕನು ಆ ಪಾರ್ಸೆಲ್ ತೆಗೆದುಕೊಂಡು ನಿಗದಿತ ಸ್ಥಳಕ್ಕೆ ಹೋಗಿ ಕರೆ ಮಾಡಿದ್ದಾನೆ.
ಈ ವೇಳೆ ಆ ಕಡೆಯಿಂದ ಗ್ರಾಹಕನು ಪಾರ್ಸೆಲ್ನ್ನು ಸೆಕ್ಟರ್ 81ರಲ್ಲಿರುವ ಕಂಪನಿಯ 3ನೇ ಗೇಟ್ ಬಳಿ ಬರುವಂತೆ ತಿಳಿಸಿದ್ದಾನೆ. ಡೆಲಿವರಿ ಬಾಯ್ ಅಲ್ಲಿಗೆ ತಲುಪಿದಾಗ, ಗ್ರಾಹಕನು ತನ್ನ ಸ್ನೇಹಿತನೊಂದಿಗೆ ತನ್ನ ಕಾರಿನಲ್ಲಿ ಮಧ್ಯಾಹ್ನ 1:30ರ ಸುಮಾರಿಗೆ ಅಲ್ಲಿಗೆ ಬಂದಿದ್ದಾನೆ. ನಂತರ ಗ್ರಾಹಕರು ಪಾರ್ಸೆಲ್ನ್ನು ಕೈಯಲ್ಲಿ ತೆಗೆದುಕೊಂಡು ಕಾರಿನೊಳಗೆ ಕುಳಿತು ಪಾವತಿ ಮಾಡಲು ಪ್ರಾರಂಭಿಸಿ, ಹಣ ಪಾವತಿಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪತ್ನಿ, ಆಕೆಯ ಕುಟುಂಬಸ್ಥರ ಮೇ ಹಲ್ಲೆ ನಡೆಸಿ, 2ನೇ ಅಂತಸ್ತಿನಿಂದ ಜಿಗಿದ ಭೂಪ..
ಆದರೆ ಡೆಲಿವರಿ ಬಾಯ್ ಹಣ ಪಾವತಿಯಾಗಿಲ್ಲ ಎಂದು ಹೇಳಿದಾಗ, ಕೂಡಲೇ ಕಾರಿನಲ್ಲಿದ್ದ ಗ್ರಾಹಕ ಕಾರು ಸ್ಟಾರ್ಟ್ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ. ಇತ್ತ ದಿಕ್ಕುತೋಚದ ಯುವಕ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ನೀಡಿದ್ದು. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್)