ಕಾಶ್ಮೀರದಲ್ಲಿ ಕರೊನಾಗೆ ಬಲಿಯಾದ ಸಿಆರ್​ಪಿಎಫ್ ಯೋಧ

CPRF
Published on
ಶ್ರೀನಗರ: ಕಳೆದ 24 ಗಂಟೆಗಳ ಅವಧಿಯಲ್ಲಿ ಕಾಶ್ಮೀರ ವಿಭಾಗದಲ್ಲಿ ಸಿಆರ್‌ಪಿಎಫ್ ನ ಒಬ್ಬ ವ್ಯಕ್ತಿ ಸೇರಿದಂತೆ ಏಳು ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ.
ಸಿಆರ್​ಪಿಎಫ್ 198ನೇ ಬಟಾಲಿಯನ್​​ನ 55 ವರ್ಷದ ವ್ಯಕ್ತಿ  ಜುಲೈ 27 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಕೋವಿಡ್​​ಗೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರ ವಿಭಾಗದಲ್ಲಿ ಬುಧವಾರ 13 ಜನ ಕೋವಿಡ್​​ಗೆ ತುತ್ತಾಗಿದ್ದು, ಜಮ್ಮು ವಿಭಾಗದಲ್ಲಿ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಸಾವನ್ನಪ್ಪಿದವರ ಸಂಖ್ಯೆ 351 ಕ್ಕೆ ತಲುಪಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net