More

    ಚೀನಾದ ಟಿಕ್​ಟಾಕ್​ ಆ್ಯಪ್​ ಕುರಿತು ತನಿಖೆ ಆರಂಭಿಸಿದ ಅಮೆರಿಕ

    ನವದೆಹಲಿ: ರಾಷ್ಟ್ರೀಯ ಭದ್ರತೆಗೆ ಧಕ್ಕೆ ಒದಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅಮೆರಿಕದ ಅಧಿಕಾರಿಗಳು ಚೀನಾ ಮೂಲದ ಟಿಕ್​ಟಾಕ್​ ಆ್ಯಪ್​ ಕುರಿತು ತನಿಖೆ ಆರಂಭಿಸಿದ್ದಾರೆ. ಅಮೆರಿಕದ ವಿತ್ತ ಕಾರ್ಯದರ್ಶಿ ಸ್ಟೀವ್​ ಮ್ನುಚಿನ್​ ಈ ವಿಷಯ ತಿಳಿಸಿದ್ದಾರೆ.

    ಚೀನಾ ಮೂಲದ ವಿಡಿಯೋ ಶೇರಿಂಗ್​ ಆ್ಯಪ್​ ಕುರಿತು ಈಗಾಗಲೆ ತನಿಖೆ ಆರಂಭವಾಗಿದೆ. ಈ ವಾರದಲ್ಲಿ ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ತನ್ಮೂಲಕ ವಿತ್ತ ಸಚಿವಾಲಯದ ನೇತೃತ್ವದಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಒದಗಿಸುವಂಥ ವಿದೇಶಿ ಹೂಡಿಕೆಗಳ ಕುರಿತು ಪರಿಶೀಲನೆ ನಡೆಸುವ ಅಮೆರಿಕದಲ್ಲಿನ ವಿದೇಶಿ ಹೂಡಿಕೆಯ ಸಮಿತಿ (ಸಿಎಫ್​ಐಯುಎಸ್​) ಟಿಕ್​ಟಾಕ್​ ಕುರಿತು ತನಿಖೆ ನಡೆಸುತ್ತಿದೆ ಎಂಬ ಅಂಶವನ್ನು ಅಮೆರಿಕ ಸರ್ಕಾರ ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದೆ.

    ಚೀನಾದ ಟಿಕ್​ಟಾಕ್​ನ ಮೂಲ ಕಂಪನಿ ಬೀಜಿಂಗ್​ ಬೈಟ್​ಡಾನ್ಸ್​ ಟೆಕ್ನಾಲಜಿ ಕಂಪನಿಯು Musical.ly ಎಂಬ ಅಮೆರಿಕದ ಸಾಮಾಜಿಕ ಜಾಲತಾಣದ ಆ್ಯಪ್​ ಅನ್ನು 1 ಶತಕೋಟಿ ಡಾಲರ್​ಗೆ ಖರೀದಿಸಿತ್ತು. ಈ ಆ್ಯಪ್​ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿದುದ್ದಲ್ಲದೆ, ಸೆನ್ಸಾರ್​ ಮಾಡುತ್ತಿತ್ತು. ಈ ಆರೋಪಗಳ ಹಿನ್ನೆಲೆಯಲ್ಲಿ ಸಿಎಫ್​ಐಯುಎಸ್​ ಈ ವಹಿವಾಟಿನ ಕುರಿತು ತನಿಖೆಗೆ ಮುಂದಾಗಿತ್ತು.

    ಇದನ್ನೂ ಓದಿ: ಎತ್ತರದ ಕಟ್ಟಡದಿಂದ ಜಿಗಿದ ಯುವಕ ತಕ್ಷಣವೇ ಎದ್ದು ನಿಂತ: ಆತ್ಮಹತ್ಯೆ ಯತ್ನ ಬೆನ್ನಲ್ಲೆ ನಡೆಯಿತು ಚಮತ್ಕಾರ!

    ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಟಿಕ್​ಟಾಕ್​ನ ಅಧಿಕಾರಿಗಳು, ತಮ್ಮ ಆ್ಯಪ್​ನ ಭದ್ರತಾ ಮೂಲಸೌಕರ್ಯವನ್ನು ಹೆಚ್ಚಿಸುವ ಜತೆಗೆ ಸುರಕ್ಷತೆಯ ಅಂಶಗಳಿಗೆ ಒತ್ತು ನೀಡುವ ಸಲುವಾಗಿ ಅದನ್ನು ಉತ್ತಮಪಡಿಸಲು ಶ್ರಮಿಸುತ್ತಿರುವುದಾಗಿ ಹೇಳಿದ್ದಾರೆ.

    ಒಂದು ವೇಳೆ ಅಮೆರಿಕದ ರಾಷ್ಟ್ರೀಯ ಭದ್ರತೆ ಧಕ್ಕೆಯನ್ನುಂಟು ಮಾಡುವ ಅಂಶಗಳು ಟಿಕ್​ಟಾಕ್​ ಆ್ಯಪ್​ನಲ್ಲಿ ಇರುವುದು ಸ್ಪಷ್ಟವಾದಲ್ಲಿ, Musical.lyನೊಂದಿಗಿನ ವಹಿವಾಟನ್ನು ರದ್ದುಗೊಳಿಸುವಂತೆ ಬೈಟ್​ಡಾನ್ಸ್​ ಮೇಲೆ ಸಮಿತಿಯು ಒತ್ತಡ ಹೇರಬಹುದಾಗಿದೆ.

    ಮುಂಬೈ ತಲುಪಿರುವ ಬಿಹಾರ ಪೊಲೀಸರು; ರಿಯಾ ಮನೆ ಬಾಗಿಲು ಬಡಿಯುತ್ತಾರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts