More

    ಮುಂಬೈ ತಲುಪಿರುವ ಬಿಹಾರ ಪೊಲೀಸರು; ರಿಯಾ ಮನೆ ಬಾಗಿಲು ಬಡಿಯುತ್ತಾರಾ?

    ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದ ವಿಚಾರಣೆಗೆ ಮುಂದಾಗಿರುವ ಬಿಹಾರ ಪೊಲೀಸರು ಗುರುವಾರ ಮುಂಬೈ ತಲುಪಿದ್ದಾರೆ. ಪ್ರಕರಣದಲ್ಲಿ ಹೊಸ ವಿಷಯಗಳು ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದ ಕುರಿತು ಇದುವರೆಗೂ ನಡೆಸಿರುವ ತನಿಖೆಯ ಕುರಿತು ಮುಂಬೈ ಪೊಲೀಸರಿಂದ ಅವರು ಮಾಹಿತಿ ಪಡೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ಗುರುವಾರ ಅಥವಾ ಶುಕ್ರವಾರದಂದು ಬಿಹಾರ ಪೊಲೀಸರು ರಿಯಾ ಮನೆ ಬಾಗಿಲು ಬಡಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

    ಪಟನಾದ ರಾಜೀವ್​ ನಗರ ಪೊಲೀಸ್​ ಠಾಣೆಯಲ್ಲಿ ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ಜು.25ರಂದು ದೂರು ದಾಖಲಿಸಿದ್ದು, ತಮ್ಮ ಪುತ್ರನ ಆತ್ಮಹತ್ಯೆಗೆ ರಿಯಾ ಚಕ್ರವರ್ತಿ ಹಾಗೂ ಅವರ ಕುಟುಂಬ ವರ್ಗದವರು ಸೇರಿ ಒಟ್ಟು ಆರು ಮಂದಿ ನೀಡಿದ ಪ್ರಚೋದನೆ ಕಾರಣ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿರುವ ಬಿಹಾರ ಪೊಲೀಸರು, ನಾಲ್ವರು ಅಧಿಕಾರಿಗಳ ತಂಡವನ್ನು ಮುಂಬೈಗೆ ರವಾನಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಬಿಹಾರ ಪೊಲೀಸ್​ ಪಡೆಯ ಹಿರಿಯ ಅಧಿಕಾರಿಯೊಬ್ಬರು, ಪ್ರಕರಣದ ಬಗ್ಗೆ ಹೊಸ ವಿಚಾರಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಬಿಹಾರ ಪೊಲೀಸರ ತಂಡ ಹೆಚ್ಚಿನ ಮಾಹಿತಿ ಕಲೆಹಾಕಲು ಮುಂಬೈಗೆ ತೆರಳಿದೆ. ಸುಶಾಂತ್​ ಆತ್ಮಹತ್ಯೆ ಪ್ರಕರಣದಲ್ಲಿ ಇದುವರೆಗೆ ಮುಂಬೈ ಪೊಲೀಸರು ನಡೆಸಿರುವ ತನಿಖೆಯ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ. ಸದ್ಯಕ್ಕೆ ಅವರು ಯಾವುದೇ ವಾರಂಟ್​ನೊಂದಿಗೆ ಅಲ್ಲಿಗೆ ಹೋಗಿಲ್ಲ ಎಂದು ಹೇಳಿದ್ದಾರೆ.

    ಸುಶಾಂತ್​ ಅವರ ಬ್ಯಾಂಕ್​ ಖಾತೆಯಿಂದ ರಿಯಾ ಚಕ್ರವರ್ತಿ ಒಂದು ವರ್ಷದಲ್ಲಿ 15 ಕೋಟಿ ರೂ. ನಗದನ್ನು ಲಪಟಾಯಿಸಿದ್ದರು. ಸುಶಾಂತ್​ಗೆ ಪರಿಚಯವೂ ಇರದಿದ್ದ ವ್ಯಕ್ತಿಗಳ ಬ್ಯಾಂಕ್​ ಖಾತೆಗಳಿಗೆ ಆ ಮೊತ್ತವನ್ನು ವರ್ಗಾವಣೆ ಮಾಡಿದ್ದರು. ಅಲ್ಲದೆ, ಸುಶಾಂತ್​ಗೆ ಒಮ್ಮೆ ಯಾವುದೋ ಒಂದು ಔಷಧವನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ನೀಡಿ, ಅವರಿಗೆ ಡೆಂಘಿ ಆಗಿರುವುದಾಗಿ ನಾಟಕ ಆಡಿದ್ದರು ಎಂದು ಕೆ.ಕೆ. ಸಿಂಗ್​ ತಮ್ಮ ದೂರಿನಲ್ಲಿ ವಿವರಿಸಿದ್ದರು.

    ಇದನ್ನೂ ಓದಿ: ಕೇಂದ್ರ ಸರ್ಕಾರ ಅನ್​ಲಾಕ್​ ಮಾಡುತ್ತಿರುವ ಸಮಯದಲ್ಲೂ ಆಗಸ್ಟ್​ 31ರವರೆಗೆ ಲಾಕ್​ಡೌನ್​ ವಿಸ್ತರಣೆ!

    ಜೂ.14ರಂದು ಸುಶಾಂತ್​ ತಮ್ಮ ಮುಂಬೈ ಫ್ಲ್ಯಾಟ್​ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಕೆಲವು ದಿನಗಳ ಮೊದಲು ನನ್ನ ಪುತ್ರಿ ಆತನನ್ನು ಭೇಟಿಯಾಗಿದ್ದಳು. ಆ ಸಂದರ್ಭದಲ್ಲಿ ಸುಶಾಂತ್​ ತುಂಬಾ ಅಸ್ಪಷ್ಟವಾಗಿ ಮಾತನಾಡಿದ್ದ. ಇದರಿಂದ ಹೆದರಿದ್ದ ನನ್ನ ಪುತ್ರಿ ಒಳ್ಳೆಯ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸುವಂತೆ ರಿಯಾಗೆ ಹೇಳಿದಾಗ, ಮನೆಯಲ್ಲೇ ಆತನಿಗೆ ಚಿಕಿತ್ಸೆ ಕೊಡಿಸುತ್ತಿರುವುದಾಗಿ ಆಕೆ ಹೇಳಿದ್ದರು. ಅಷ್ಟೇ ಅಲ್ಲ, ಕಳೆದ ವರ್ಷದ ಡಿಸೆಂಬರ್​ನಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಅವರ ಮೊಬೈಲ್​ಫೋನ್​ ನಂಬರ್​ ಅನ್ನು ಹಠಾತ್ತಾಗಿ ಬದಲಿಸಿ, ಕುಟುಂಬದವರೊಂದಿಗೆ ಅವರಿಗೆ ಯಾವುದೇ ಸಂಪರ್ಕ ಇರದಂತೆ ನೋಡಿಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.

    2019ರಲ್ಲಿ ಸುಶಾಂತ್​ ಅವರು ವೃತ್ತಿಜೀವನದಲ್ಲಿ ಔನತ್ಯಕ್ಕೆ ಏರುತ್ತಿದ್ದ ಸಂದರ್ಭದಲ್ಲಿ ಅವರೊಂದಿಗೆ ರಿಯಾ ಚಕ್ರವರ್ತಿ ಸಂಪರ್ಕ ಏರ್ಪಡಿಸಿಕೊಂಡಿದ್ದರು. ಸುಶಾಂತ್​ ಅವರ ಸಂಪತ್ತಿನ ಮೇಲೆ ಒಂದು ಕಣ್ಣಿಟ್ಟಿದ್ದ ಅವರು, ಆತನನ್ನು ಬಳಸಿಕೊಂಡು ಬಾಲಿವುಡ್​ನಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಿದ್ದರು.

    ಒಂದು ಹಂತದಲ್ಲಿ ಸುಶಾಂತ್​ ಅವರನ್ನು ಪಟನಾಕ್ಕೆ ವಾಪಸು ಕರೆತರಲು ಪ್ರಯತ್ನಿಸಿದ್ದೆ. ಆದರೆ, ರಿಯಾ ಮತ್ತು ಅವರ ಕುಟುಂಬ ವರ್ಗದವರು ಇದಕ್ಕೆ ಅವಕಾಶ ಕೊಡಲಿಲ್ಲ. ರಿಯಾ ಮತ್ತು ಇತರರು ತಮ್ಮನ್ನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸಲು ಯತ್ನಿಸುತ್ತಿರುವುದಾಗಿ ಸುಶಾಂತ್​ ನನ್ನ ಬಳಿ ಒಮ್ಮೆ ಹೇಳಿಕೊಂಡಿದ್ದ ಎಂದು ತಿಳಿಸಿದ್ದರು.

    ಸುಳ್ಳು ಹೇಳಿ ಬಾಯ್​ಫ್ರೆಂಡ್​​ ನೋಡಲು ಹೋದ ಬ್ಯೂಟಿಷಿಯನ್ ದುರಂತ ಅಂತ್ಯ: ಅಸಲಿ ಕಾರಣ ಬಹಿರಂಗ!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts