

ಭೂಪಾಲ್: ಮಹಾಕುಂಭ ಮೇಳ(Mahakumbh Mela) ಹಿನ್ನೆಲೆ ಪ್ರಯಾಗ್ರಾಜ್ಗೆ ತೆರಳುತ್ತಿದ್ದ ಟ್ರೈನ್, ಕಿಕ್ಕಿರಿದ ಜನ ಕಾರಣದಿಂದ ಬಾಗಿಲು ತೆರೆಯದ ಕಾರಣದಿಂದ ಆಕ್ರೋಶಗೊಂಡ ಪ್ರಯಾಣಿಕರು ಕಲ್ಲಿನಿಂದ ಬಾಗಿಲಿನ ಗ್ಲಾಸ್ ಪುಡಿ-ಪುಡಿ ಮಾಡಿದ ಘಟನೆ ಮಧ್ಯಪ್ರದೇಶದ ಹರ್ಪಲ್ಪುರದಲ್ಲಿ ಮಂಗಳವಾರ ನಡೆದಿದೆ.
ಅಂಬೇಡ್ಕರ್ ನಗರದಿಂದ ಪ್ರಯಾಗ್ರಾಜ್ಗೆ ತೆರಳುತ್ತಿದ್ದ ಎಕ್ಸ್ಪ್ರೆಸ್ ಹರ್ಪಲ್ಪುರ ನಿಲ್ದಾಣಕ್ಕೆ ಬಂದಾಗ ಸುಮಾರು 1 ರಿಂದ 1.30 ಸಮಯ ಆಗಿತ್ತು. ಕುಂಭಮೇಳಕ್ಕೆ ತೆರಳಲು ಉತ್ಸುಕರಾಗಿದ್ದ ಪ್ರಯಾಣಿಕರು ಟ್ರೈನ್ ಹತ್ತಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಕೆಲ ಪ್ರಯಾಣಿಕರು ಒಳಗೆ ಹೋಗಿದ್ದಾರೆ. ಆದರೆ, ಕಿಕ್ಕಿರಿದ ಜನ ಇರುವ ಕಾರಣ ಎಕ್ಸ್ಪ್ರೆಸ್ ಸ್ವಯಂ ಬಾಗಿಲು ಹಾಕಿಕೊಂಡಿದೆ. ಇದರಿಂದ ಆಕ್ರೋಶಗೊಂಡ ಉಳಿದ ಪ್ರಯಾಣಿಕರು ಟ್ರೈನ್ ಮೇಲೆ ಕಲ್ಲಿನ ದಾಳಿಮ ಮಾಡಿದ್ದಾರೆ ಎಂದು ವರದಿಯಾಗಿದೆ.
ಕಲ್ಲು ಎಸೆದು ಟ್ರೈನ್ನ ಬಾಗಿಲಿನ ಗ್ಲಾಸ್ ಒಡೆಯುತ್ತಿರುವ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ಲಾಟ್ಫಾರಂನಲ್ಲಿ 7ರಿಂದ 8 ಸಾವಿರ ಜನರಿದ್ದರು. ಟ್ರೈನ್ ಕಿಕ್ಕಿರಿದ ಪ್ರಯಾಣಿಕರಿದ್ದ ಕಾರಣ ಟ್ರೈನ್ ಅನ್ನು ಬಹಳ ಹೊತ್ತು ನಿಲ್ಲಿಸಿಲ್ಲ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ದಾಳಿ ನಡೆಸಿದ್ದರು. ಒಂದು ಗಂಟೆ ಕಾಲ ಪರಿಸ್ಥಿತಿ ಬಿಗಾಡಿಯಿಸಿದ್ದು, ಕೂಡಲೇ ನಮ್ಮ ಅಧಿಕಾರಿಗಳು ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಟ್ರೈನ್ ತೆರಳು ಅನುವು ಮಾಡಿಕೊಟ್ಟಿದ್ದೇವೆ ಎಂದು ಸ್ಥಳೀಯ ಪೋಲಿಸ್ ಠಾಣೆಯ ಪ್ರಭಾರಿ ಪುಷ್ಪಕ್ ಶರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.(ಏಜೆನ್ಸೀಸ್)