

ಜೀವನಾಧಾರ ಕೃಷಿ ಪದ್ಧತಿ: ಜೀವನಕ್ಕೆ ಬೇಕಿರುವುದು ಆಹಾರ, ಆಶ್ರಯ, ಆದಾಯ ಈ ಮೂರು. ನಿಲ್ಲೋದಕ್ಕೊಂದು ನೆಲೆ, ಉಂಡು- ಉಪಚರಿಸುವುದಕ್ಕೆ ಬೆಳೆ, ಓಡಾಡೋದಕ್ಕೆ ಹಣ, ಇವನ್ನ ಇದ್ದ ಭೂಮಿಯಲ್ಲೇ ಸಂಪಾದಿಸುವುದು ಜೀವನಾಧಾರ ಕೃಷಿಯ ಧ್ಯೇಯ. ಇದೇ ಅಂಶವನ್ನು ಅಳವಡಿಸಿಕೊಂಡು ದಿನದ ಭತ್ಯೆ, ವಾರದ ಬಟಾವಾಡಿ, ತಿಂಗಳ ವೇತನ, 6 ತಿಂಗಳ ಸಂಭಾವನೆ, ವರ್ಷದ ಆದಾಯ, ಬಹುವರ್ಷದ ವಿಮೆ ರೂಪದ ಹಣ ಬರುವ ದಾರಿಯನ್ನು ಸೃಷ್ಟಿಸಿಕೊಳ್ಳಬೇಕು. ದಿನದ ದುಡಿಮೆಗೆ ಮೊಟ್ಟೆ, ವಾರದ ಸಂತೆಗೆ ಕೋಳಿ/ತರಕಾರಿ, ತಿಂಗಳ ಸಂಬಳಕ್ಕೆ ಹಾಲು, 3 ತಿಂಗಳ ದುಡ್ಡಿಗೆ ಭತ್ತ, ವರ್ಷಕ್ಕೆ ಅಡಕೆ, ವಿಮೆಗೆ ಅರಣ್ಯ ಕೃಷಿ ಇವುಗಳ ಅಳವಡಿಕೆ ಪರಿಣಾಮವೇ ಮುತ್ತಣ್ಣ ಬಹುಮೂಲದಿಂದ 1 ವರ್ಷಕ್ಕೆ ಕೋಟಿ ರೂ. ದುಡಿಯುತ್ತಿದ್ದಾರೆ.
ನಂಟು ಗಂಟಿನ ನಿಗಂಟು: ಕೃಷಿ ಭೂಮಿಯಲ್ಲಿ ಒಂದಕ್ಕೊಂದು ನಂಟಿದ್ದರೆ ಅರ್ಧ ಗೆಲುವು ಪಡೆದಂತೆಯೇ ಸರಿ. ಮೇವು ಬೆಳೆದರೆ ಹಸು, ಕುರಿಗಳಿಗೆ ಆಹಾರವಾಗುತ್ತೆ. ಹಸು, ಕುರಿಗಳ ಸೆಗಣಿ, ಹಿಕ್ಕೆ ಬೆಳೆಗಳಿಗೆ ಗೊಬ್ಬರವಾಗುತ್ತೆ. ಗೊಬ್ಬರದಿಂದ ಬೆಳೆಗಳಲ್ಲಿ ಹೆಚ್ಚು ಫಲ ಸಿಗತ್ತೆ. ಫಲಗಳಿಂದ ರೈತನಿಗೆ ಉತ್ತಮ ಆದಾಯ ಬರುತ್ತೆ ಇದೇ ನಂಟು ಗಂಟಿನ ನಿಗಂಟು.
ಸೋಲನ್ನೇ ಸೋಲಿಸಿತ್ತು ಸಾವಯವ ಕೃಷಿ: ರೈತ ಮುತ್ತಣ್ಣನ ಎಲ್ಲ ಸೋಲನ್ನು ಸರಿಪಡಿಸಿದ್ದು ಸಾವಯವ ಕೃಷಿ. ಆಧುನಿಕತೆಗೂ ಪೂರ್ವದಲ್ಲಿ ನಮ್ಮ ಪೂರ್ವಜರು ಕೂಡ ಕೃಷಿ ಬದುಕು ನಡೆಸಿದ್ದು ಸಾವಯವದಲ್ಲೇ. ಅಂದಾಗೆ ಈ ಸಾವಯವ ಕೃಷಿ ಮತ್ತೆ ಮರುಚೇತನ ಪಡೆದುಕೊಂಡಿದ್ದು 1900ರ ಸಮಯದಲ್ಲಿ. ಆಗ ಆಲ್ಬರ್ಟ್ ಹೊವಾರ್ಡ್, ರುಡಾಲ್ಪ್ ಸ್ಟೈನರ್, ಎಫ್.ಎಚ್. ಕಿಂಗ್ ಮತ್ತಿತರರು ಸಾವಯವ ಕೃಷಿ ಮಹತ್ವ ಸಾರಿದ್ದರು. ಅದೇ ರೀತಿ 1940ರ ಸಮಯದಲ್ಲಿ ಭಾರತದ ರೈತರು ಕೂಡ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳೋಕೆ ಎಚ್ಚೆತ್ತುಕೊಳ್ಳತೊಡಗಿದರು. ಎಸ್ಟೋನಿಯ ಜಗತ್ತಿನ ಮೊದಲ ಸಾವಯವ ಕೃಷಿ ರಾಷ್ಟ್ರವೆಂದು ಗುರುತಿಸಿಕೊಂಡಿತು. ಆಸ್ಟ್ರೇಲಿಯ ಅತಿ ಹೆಚ್ಚು ಸಾವಯವ ಕೃಷಿ ಭೂಮಿ ಹೊಂದಿರುವ ರಾಷ್ಟ್ರವೆಂಬ ಮನ್ನಣೆ ಪಡೆಯಿತು. ಹಾಗೆಯೇ ಈ ಸಾವಯವ ಕೃಷಿ ಜತೆಯಲ್ಲೇ ಇನ್ನೆರಡು ಕೃಷಿ ಪದ್ಧತಿಗಳು ಈ ಜಗತ್ತಿನಲ್ಲಿ ಅನಾವರಣಗೊಂಡಿದೆ. ಅದರಲ್ಲಿ ಒಂದು ಜಪಾನ್ ಕೃಷಿ ಸಂತ ಮಸನಬು ಫುಕುವೋಕಾರ ಸಹಜ ಕೃಷಿ, ಮತ್ತು ನಮ್ಮ ದೇಶದ ಸುಭಾಷ್ ಪಾಳೇಕರ್ ಅವರ ನೈಸರ್ಗಿಕ ಕೃಷಿ ಪದ್ಧತಿ ಕೂಡ ಕೃಷಿ ಮಹತ್ವ ಸಾರಿ ಸಾಕಷ್ಟು ಜನ ಕೃಷಿಗೆ ಪದಾರ್ಪಣೆ ಮಾಡುವಂತೆ ಮಾಡಿದೆ. ಅದೇ ರೀತಿ ಬರದ ಸಮಯದಲ್ಲಿ ಕೆಮಿಕಲ್ ಕೃಷಿಲಿ ಸೋಲು ಕಂಡ ಮುತ್ತಣ್ಣನನ್ನ ಸಾವಯವ ಕೃಷಿ ಮತ್ತೆ ಭರ್ಜರಿ ಯಶಸ್ಸು ಕಾಣುವಂತೆ ಮಾಡಿದೆ.
ಫ್ರೀಡಂ ಆಪ್ನಲ್ಲಿ ಜೀವನಾಧಾರ ಕೃಷಿ ಕೋರ್ಸ್: ಫ್ರೀಡಂ ಆಪ್ನಲ್ಲಿ ಜಿಕೃಷಿಯಲ್ಲೇ ಜೀವನ ನಿರ್ವಹಿಸಬಯಸುವವರಿಗಾಗಿ ಜೀವನಕ್ಕೇ ಆಧಾರವಾಗಲಿ ಅನ್ನೋ ನಿಟ್ಟಿನಲ್ಲಿ ಇಂಡಿಯನ್ ಮನಿ ಡಾಟ್ ಕಾಂನ ಫ್ರೀಡಂ ಆಪ್ ಜೀವನಾಧಾರ ಕೃಷಿ ಕೋರ್ಸ್ನ ಅನಾವರಣ ಮಾಡಿದೆ. ಸಂಚಾರ ಜೀವನ ತೊರೆದು ಜೀವನಕ್ಕೆ ನೆಲೆ ಮಾಡಿಕೊಂಡು ಜೀವನಾಧಾರ ಕೃಷಿ ಮಾಡಿ ಗೆದ್ದ ಯಶಸ್ವಿ ಕೃಷಿಕ ಹಾವೇರಿ ಜಿಲ್ಲೆಯ ಮುತ್ತಣ್ಣ ಪೂಜಾರ ಈ ಕೋರ್ಸ್ ಮಾರ್ಗದರ್ಶಕರು.
ಆನ್ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್ಗೆ ಈಗಲೇ ಸೇರಿ!: ಕನ್ನಡ ನಟಿ ಮತ್ತು ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ವೈಭವಿ ಜಗದೀಶ್ ಅವರು ಇಂಡಿಯನ್ ಮನಿ ಡಾಟ್ ಕಾಂನ ಫ್ರೀಡಂ ಆಪ್ ಸಹಯೋಗದಲ್ಲಿ ನಡೆಸುತ್ತಿರುವ ಆನ್ಲೈನ್ ಮೇಕಪ್ ಆರ್ಟಿಸ್ಟ್ ಕೋರ್ಸ್ಗೆ ಈಗಲೇ ಸೇರಿಕೊಳ್ಳಿ. ನೀವು ಮೇಕಪ್ ಕಲೆ ಕಲಿತು ದುಡಿಮೆಯ ದಾರಿ ಕಂಡುಕೊಳ್ಳಿ. ಹೆಚ್ಚಿನ ಮಾಹಿತಿಗೆ ಸಂರ್ಪಸಿ- 9632742525