ಒಂದು ಫೋಟೋ ಪೋಸ್ಟ್ ಮಾಡಿ 1 ಲಕ್ಷ ರೂ. ನಗದು ಬಹುಮಾನ ಘೋಷಿಸಿದ ನಿರ್ದೇಶಕ!

RGV
Published on

ಮುಂಬೈ: ಸದಾ ಏನಾದರೊಂದು ವಿಷಯದ ಮೂಲಕ ಸುದ್ದಿಯಲ್ಲಿರುವ ಖ್ಯಾತ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಇಂದು ತಮ್ಮ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದರು.

ನಗು ಇರುವ ತಮ್ಮದೇ ಬ್ಲೋಅಪ್​ ಫೋಟೋ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ ರಾಮ್​ಗೋಪಾಲ್ ವರ್ಮಾ, ಈ ಎಕ್ಸ್​ಪ್ರೆಷನ್​ಗೆ ಕಾರಣವೇನು? ಎಂದು ಹೇಳಿದವರಿಗೆ 1 ಲಕ್ಷ ರೂಪಾಯಿ ಬಹುಮಾನವಾಗಿ ನೀಡುವುದಾಗಿ ಗಡುವನ್ನೂ ಘೋಷಿಸಿದ್ದರು. ಆದರೆ ಅವರು ನೀಡಿದ್ದ ನಿಗದಿತ ಸಮಯದೊಳಗೆ ಯಾರೂ ಅದನ್ನು ತಿಳಿಸಿಲ್ಲ.

ಕೊನೆಗೂ ತಮ್ಮ ಆ ಚಿತ್ರದಲ್ಲಿನ ಎಕ್ಸ್​ಪ್ರೆಷನ್​ಗೆ ಕಾರಣವೇನು ಎಂಬುದನ್ನು ರಾಮ್​ಗೋಪಾಲ್​ ವರ್ಮಾ ಪೂರ್ತಿ ಫೋಟೋ ಹಂಚಿಕೊಳ್ಳುವ ಮೂಲಕ ರಹಸ್ಯ ಬಹಿರಂಗಗೊಳಿಸಿದ್ದಾರೆ. ಅವರ ನಿರ್ದೇಶನದ ಡೇಂಜರಸ್ ಸಿನಿಮಾದ ನಾಯಕಿಯರೇ ಈ ಎಕ್ಸ್​ಪ್ರೆಷನ್​ಗೆ ಕಾರಣ ಎನ್ನುವ ಜತೆಗೆ ಆ ಫೋಟೋ ಕೂಡ ಆರ್​ಜಿವಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net