ಕಾಡಾನೆ ದಾಳಿಯಿಂದ ಬೆಳೆಹಾನಿ

anr elephant
ಗಾಟೆತವರು ಗ್ರಾಮದ ಈಶ್ವರ್ ಎಂಬುವವರ ಭತ್ತದ ಗದ್ದೆಯಲ್ಲಿ ಪ್ರತ್ಯಕ್ಷವಾದ ಕಾಡಾನೆಗಳು.
Published on

ಆಯನೂರು: ಸಿರಿಗೆರೆ ವನ್ಯಜೀವಿ ವಲಯ ವ್ಯಾಪ್ತಿಯ ತಮ್ಮಡಿಹಳ್ಳಿ, ಗಾಟೆತವರು, ಆಡಿನಕೊಟ್ಟಿಗೆ ಭಾಗದಲ್ಲಿ ಗುರುವಾರ ಒಂದು ಗಂಡಾನೆ ಮತ್ತು ಮರಿಯಾನೆ ದಾಳಿಯಿಂದ ಕಟಾವಿಗೆ ಬಂದ ಮೆಕ್ಕೆಜೋಳ, ಭತ್ತ ನಾಶವಾಗಿದೆ. ಭತ್ತ, ಮೆಕ್ಕೆಜೋಳ, ಜೋಳ ಹಾಗೂ ರಾಗಿ ಬೆಳೆದಿರುವ ಗದ್ದೆಗಳಲ್ಲಿ ಎರಡು ಆನೆಗಳು ಕಾಣಿಸಿಕೊಂಡಿವೆ. ಗಾಟೆ ತವರು ಗ್ರಾಮದ ಈಶ್ವರ ಎಂಬುವವರ ಭತ್ತ, ಜೋಳದ ಗದ್ದೆಯಲ್ಲಿ ಓಡಾಡಿ ಬೆಳೆ ಹಾನಿ ಮಾಡಿವೆ. ತಕ್ಷಣವೇ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಸಿರಿಗೆರೆ ವನ್ಯಜೀವಿ ವಲಯದ ಅಧಿಕಾರಿಗಳು ಸ್ಥಳಕ್ಕೆ ಬಂದು ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ, ತಮಟೆ ಶಬ್ದ ಮಾಡುವ ಮೂಲಕ ಗ್ರಾಮಸ್ಥರ ಸಹಕಾರದಿಂದ ಸಮೀಪದ ಕಾಡಿನ ಕಡೆಗೆ ಓಡಿಸಿದರು.ಸಿರಿಗೆರೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಅರವಿಂದ, ಡಿವೈಆರ್‌ಎ್ಒಗಳಾದ ಶಿವಕುಮಾರ್, ಮಂಜುನಾಯ್ಕ, ಅರಣ್ಯ ಪಾಲಕರಾದ ಕೊಟ್ರೇಶ್, ಅಶೋಕ, ಚಿಕ್ಕಪ್ಪ, ಅರವಿಂದ ಮತ್ತಿತ್ರರು ಗ್ರಾಮಸ್ಥರ ಸಹಕಾರದಿಂದ ಆಡಿನಕೊಟ್ಟಿಗೆ- ಕೂಡಿ ಭಾಗದ ಬೆಳ್ಳೂರು ರಸ್ತೆಯ ಪಕ್ಕದ ಕಾಡಿಗೆ ಓಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net