ಕಾಡಾನೆಗಳ ದಾಳಿಯಿಂದ ಬೆಳೆ ಹಾನಿ

rpt elephant
ರಿಪ್ಪನ್‌ಪೇಟೆ ಸಮೀಪದ ಹಾರೋಹಿತ್ತಲು ಗ್ರಾಮದಲ್ಲಿ ಕಾಡಾನೆಗಳು ಕಬ್ಬು ಬೆಳೆ ನಾಶಪಡಿಸಿರುವುದು.
Published on

ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ಅರಸಾಳು, ಬೆಳ್ಳೂರು ಗ್ರಾಪಂನ ಕೆಲವು ಗ್ರಾಮಗಳ ರೈತರ ಹೊಲ, ಗದ್ದೆಗಳಿಗೆ ಕಾಡಾನೆಗಳು ನುಗ್ಗಿ ಬೆಳೆಗಳನ್ನು ಹಾನಿಮಾಡಿವೆ. ಹಾರೋಹಿತ್ತಲು, ಮಚ್ಚಲಿಜೆಡ್ದು, ಗುಳುಗುಳಿಶಂಕರ ಮಾರ್ಗವಾಗಿ ಸಂಚರಿಸಿರುವ ಕಾಡಾನೆಗಳು ಸುರೇಶ್, ಮೋಹನ, ಹೊನ್ನಪ್ಪ, ತೀರ್ಥಪ್ಪ, ನಾಗೇಶ, ಟೂಕಪ್ಪ ಎಂಬುವರ ಅಡಕೆ, ಬಾಳೆ, ಭತ್ತ, ಕಬ್ಬು ಬೆಳೆಗಳನ್ನು ಹಾನಿಗೊಳಿಸಿವೆ. ವಾಸದ ಮನೆ ಸುತ್ತಮುತ್ತ ಓಡಾಡಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸುತ್ತಿವೆ. ಆರು ತಿಂಗಳ ಹಿಂದೆ ಬಸವಪುರದ ರೈತ ತಿಮ್ಮಪ್ಪ ಅವರನ್ನು ಬಲಿ ತೆಗೆದುಕೊಂಡ ಕಾಡಾನೆ ಭಯ ಮೂಡಿಸಿತ್ತು. ಮತ್ತೀಗ ಮೂರ್ನಾಲ್ಕು ಕಾಡಾನೆಗಳು ಕಾಣಿಸಿಕೊಂಡು ಆತಂಕ ಮೂಡಿಸಿವೆ. ಪದೇಪದೆ ರೈತರ ಬೆಳೆಗಳನ್ನು ನಾಶಪಡಿಸಿದರೂ ಅರಣ್ಯ ಇಲಾಖೆ ಆನೆಗಳ ನಿಯಂತ್ರಣಕ್ಕೆ ಕ್ರಮ ಜರುಗಿಸುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net