ಪ್ರಶಾಂತ್ ಸಂಬರಗಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ!

prashanth sambaragi
Published on

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನಗರದ 24ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ.

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಮಾಫಿಯಾ ಲಿಂಕ್​ ಬಗ್ಗೆ ​ಪ್ರತಿದಿನವೂ ಒಂದೊಂದು ಮಾಹಿತಿ ಕೊಡುತ್ತಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ, ಚಾಮರಾಜಪೇಟೆ ಶಾಸಕ ಜಮೀರ್​ ಅಹ್ಮದ್​ ಖಾನ್​ ವಿರುದ್ಧವೂ ಸಿಡಿದೆದ್ದಿದ್ದರು. ಡ್ರಗ್ ಕೇಸ್​ ಮತ್ತು ಹಾಗೂ ಕೊಲಂಬೊದ ಕ್ಯಾಸಿನೋದಲ್ಲಿ ಜಮೀರ್ ನಂಟಿದೆ ಎಂದು ಪ್ರಶಾಂತ್ ಸಂಬರಗಿ ಆರೋಪಿಸಿದ್ದರು. ಡ್ರಗ್ಸ್ ಕೇಸ್​ನ ಪ್ರಮುಖ ಆರೋಪಿ ಕ್ಯಾಸಿನೋ ಶೇಖ್ ಫಾಝಿಲ್​ ಎಂಬಾತ ಜಮೀರ್​ ಅಹ್ಮದ್​ರ ಆಪ್ತ ಎಂದು ಫೋಟೋ ಸಮೇತ ಸಂಬರಗಿ ದಿನಕ್ಕೊಂದು ಬಾಂಬ್​ ಸಿಡಿಸುತ್ತಾ ಜಮೀರ್​ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಶಾಂತ್​ ಸಂಬರಗಿ ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ದೂರು ದಾಖಲಿಸಿದ್ದರು. ಕ್ರಿಮಿನಲ್​ ಮೊಕದ್ದೊಮೆ ಹೂಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ 24ನೇ ಎಸಿಎಂಎಂನ ನ್ಯಾಯಾಧೀಶ ಬಾಲಗೋಪಾಲ ಕೃಷ್ಣ ಅವರು, ಸಂಬರಗಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚನೆ ನೀಡಿದರು. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net