

ಬೆಂಗಳೂರು: ಬಿಸಿಬಿಸಿ ಬೋಂಡಾ ತಿಂದವನ ಬಳಿ ಹಣ ಕೇಳಿದ್ದೇ ಈ ವ್ಯಾಪಾರಸ್ಥೆಗೆ ಮುಳುವಾಗಿ ಹೋಯಿತು. ಅಂಗಡಿ ಎದುರು ನಿಂತು ಬೋಂಡಾ ತಿಂದು, ಸಿಗರೇಟ್ ತಿಂದವನು ಹಣ ಕೇಳುತ್ತಿದ್ದಂತೆ ಆಕೆಯ ಮೈಯಿಗೆ ಬಿಸಿ ಎಣ್ಣೆ ಎರಚಿ ವಿಕೃತಿ ಮೆರೆದಿದ್ದಾನೆ.
ಥಣಿಸಂದ್ರ ಬಳಿ ನಿನ್ನೆ ಸಂಜೆ ಏಳುಗಂಟೆ ಹೊತ್ತಿಗೆ ಘಟನೆ ನಡೆದಿದೆ. ಈ ಅಂಗಡಿ ಮೇಘಲಾ ಎಂಬುವರದಾಗಿದ್ದು, ಹನೀಫ್ ಎಂಬ ರೌಡಿ ಶೀಟರ್ ಆರೋಪಿ.
ತಿಂದ ಬೋಂಡಾಕ್ಕೆ ಹಣ ಮೇಘಲಾ ಹಣ ಕೇಳಿದಾಗ, ಆಕೆಯ ಮೇಲೆ ಬಿಸಿ ಎಣ್ಣೆ ಎರಚಿ ಓಡಿಹೋಗಿದ್ದಾನೆ. ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹನೀಫ್ನನ್ನು ಪೊಲೀಸರು ಹುಡುಕುತ್ತಿದ್ದಾರೆ.