800 ಉದ್ಯೋಗಿಗಳಿರುವ ದೊಡ್ಡ ಕಂಪನಿಯ ಸಂಸ್ಥಾಪಕ-ಸಿಇಒ ಸಂಬಳ ಬರೀ 15 ಸಾವಿರ ರೂಪಾಯಿ!

Kunal Shah CRED
Published on

ಬೆಂಗಳೂರು: ದೊಡ್ಡ ದೊಡ್ಡ ಕಂಪನಿಗಳ ಮಾಲೀಕರ, ಸಿಇಒಗಳ ಸಂಬಳ ಎಷ್ಟಿರಬಹುದು ಎಂಬ ಕುತೂಹಲ ಜನಸಾಮಾನ್ಯರಿಗೆ ಇರುವಂಥದ್ದೇ. ಅಂಥದ್ದೇ ಒಂದು ಕುತೂಹಲಕ್ಕೆ ಸಿಇಒ ಒಬ್ಬರಿಂದ ಸಿಕ್ಕ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಲಾರಂಭಿಸಿದೆ.

ಸುಮಾರು 800 ಉದ್ಯೋಗಿಗಳಿರುವ ಈ ದೊಡ್ಡ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಸಂಬಳ ಬರೀ 15 ಸಾವಿರ ರೂಪಾಯಿ ಎಂಬುದೇ ಈ ಸಂಚಲನಕ್ಕೆ ಕಾರಣವಾಗಿದೆ. ಇನ್​ಸ್ಟಾಗ್ರಾಮ್​ ಕ್ವಶ್ಚನ್​ ಆ್ಯಂಡ್ ಆನ್ಸರ್​ ಸೆಷನ್ ವೇಳೆ ಖುದ್ದು ಆ ಸಿಇಒ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅಂದಹಾಗೆ ಈ ಸಂಬಳ ಪಡೆಯುತ್ತಿರುವ ಸಿಎಒ ಹೆಸರು ಕುನಾಲ್ ಶಾ. ಭಾರತೀಯ ಫಿನ್​ಟೆಕ್ ಕಂಪನಿ ಕ್ರೆಡ್​ನ ಸಂಸ್ಥಾಪಕರೂ ಆಗಿರುವ ಇವರು ಸಿಇಒ ಆಗಿ ತಮ್ಮ ಸಂಬಳ 15 ಸಾವಿರ ಎಂದು ಬಹಿರಂಗಪಡಿಸಿದ್ದಾರೆ. ಏನನ್ನಾದರೂ ಕೇಳಿ ಎಂದು ಅವರು ಇನ್​ಸ್ಟಾಗ್ರಾಮ್​ನಲ್ಲಿ ಕೇಳಿದ್ದಕ್ಕೆ ಒಬ್ಬರು, ಅವರ ವೇತನ ಎಷ್ಟೆಂದು ಹೇಳಿದ್ದು, ಅದಕ್ಕೆ ಅಷ್ಟೊಂದು ಕಡಿಮೆಯಾ ಎಂಬ ಪ್ರಶ್ನೆಯೂ ಎದುರಾಗಿತ್ತು.

Kunal Shah CRED

'ಕಂಪನಿಯು ಲಾಭದಾಯಕವಾಗುವವರೆಗೂ ನಾನು ಉತ್ತಮ ಸಂಬಳವನ್ನು ಪಡೆಯಬೇಕೆಂದು ನನಗೆ ಅನಿಸುತ್ತಿಲ್ಲ. ಕ್ರೆಡ್​​ನಲ್ಲಿ ನನ್ನ ಸಂಬಳ ತಿಂಗಳಿಗೆ 15,000 ಆಗಿದೆ ಮತ್ತು ನಾನು ಈ ಹಿಂದೆ ನನ್ನ ಫ್ರೀಚಾರ್ಜ್ ಕಂಪನಿಯನ್ನು ಮಾರಾಟ ಮಾಡಿದ್ದರಿಂದ ಬದುಕಲಿಕ್ಕೆ ಸಮಸ್ಯೆ ಇಲ್ಲ' ಎಂಬುದಾಗಿ ಅವರು ಉತ್ತರಿಸಿದ್ದಾರೆ. ಬೆಂಗಳೂರು ಮೂಲದ ಕ್ರೆಡ್ ಕಂಪನಿಯಲ್ಲಿ ಸುಮಾರು 800 ಉದ್ಯೋಗಿಗಳಿದ್ದು, ಕೋಟ್ಯಂತರ ವಹಿವಾಟು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net