ಕೋವಿನ್​ ಪೋರ್ಟಲ್​ ಸಂಪೂರ್ಣ ಸುರಕ್ಷಿತ, ಡೇಟಾ ಉಲ್ಲಂಘನೆಯ ಆರೋಪ ಆಧಾರರಹಿತವಾದದ್ದು: ಕೇಂದ್ರ

cowin
Published on

ದೆಹಲಿ: ದೇಶದಲ್ಲಿ ಕೋವಿಡ್ ಲಸಿಕೆ ಪಡೆದ ಫಲಾನುಭವಿಗಳ ದತ್ತಾಂಶದ ಉಲ್ಲಂಘನೆಯ ಕುರಿತು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಮಾಡಿದ ಬೆನ್ನಲ್ಲೇ, ಈ ಆರೋಪವನ್ನು ಕೇಂದ್ರ ಆರೋಗ್ಯ ಸಚಿವಾಲಯವು ತಳ್ಳಿ ಹಾಕಿದೆ.

ಸಾಮಾಜಿಕ ಜಾಲತಾಣದಲ್ಲಿ ಕೆಲವು ಪೋಸ್ಟ್‌ಗಳನ್ನು ಹಂಚಿಕೊಂಡು ಟೆಲಿಗ್ರಾಮ್ BOT ಮೂಲಕ ಕೋವಿನ್​ ಆ್ಯಪ್​ನ ದತ್ತಾಂಶ ಸೋರಿಕೆಯಾಗುತ್ತಿದೆ ಎಂದು ಆರೋಪಿಸಿ ಹಲವಾರು ಪೋಸ್ಟ್​ಗಳನ್ನು ಮಾಡಲಾಗಿತ್ತು. ಅಲ್ಲದೇ, ಫಲಾನುಭವಿಯ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ಸರಳವಾಗಿ ರವಾನಿಸುವ ಮೂಲಕ ವೈಯಕ್ತಿಕ ಡೇಟಾವನ್ನು ಕದಿಯಲು ಈ BOT ಸಮರ್ಥವಾಗಿದೆ ಎಂದು ಹೇಳಲಾಗಿತ್ತು.

ಆದರೆ ಕೇಂದ್ರವು ಇದನ್ನು ತಳ್ಳಿ ಹಾಕಿದ್ದು, ಎಲ್ಲಾ ವರದಿಗಳು ಯಾವುದೇ ಆಧಾರವಿಲ್ಲದವುಗಳಾಗಿವೆ. ಆರೋಗ್ಯ ಸಚಿವಾಲಯದ ಕೋವಿನ್ ಪೋರ್ಟಲ್ ಡೇಟಾ ಸಾಕಷ್ಟು ಸುರಕ್ಷತೆಗಳೊಂದಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇದಲ್ಲದೆ, ವೆಬ್ ಅಪ್ಲಿಕೇಶನ್ ಫೈರ್‌ವಾಲ್, ಆಂಟಿ-ಡಿಡಿಒಎಸ್, ಎಸ್‌ಎಸ್‌ಎಲ್/ಟಿಎಲ್‌ಎಸ್ ಇತ್ಯಾದಿಗಳೊಂದಿಗೆ ಪೋರ್ಟಲ್‌ನಲ್ಲಿ ಡೇಟಾದ ಸುರಕ್ಷತೆಯನ್ನು ನಿರ್ವಹಿಸಲು ಅನುಸರಿಸಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net