

ಗದಗ: ಗೋವು ಅಂದ್ರೆ ಸಾಕ್ಷಾತ್ ದೇವರು. ಅಂತಹ ಗೋ ಮಾತೆಯ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬಾಲ ಕತ್ತರಿಸಿ ಕೆಚ್ಚಲನ್ನ ಕೊಯ್ದಿರುವ ಅಮಾನವೀಯ ಘಟನೆ ರಾಧಾಕೃಷ್ಣ ನಗರದಲ್ಲಿ ಸಂಭವಿಸಿದೆ.
ಮೂರು ದಿನಗಳ ಹಿಂದೆ ಈ ಆಕಳು ಕರುವಿಗೆ ಜನ್ಮ ನೀಡಿತ್ತು. ಭಾನುವಾರ ರಾತ್ರಿ ಕಿಡಿಗೇಡಿಗಳು ಹಸುವಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಕೆಚ್ಚಲಿಗೆ ಬಲವಾದ ಏಟು ಬಿದ್ದಿದ್ದು, ಕರುವಿಗೆ ಹಾಲು ಕುಡಿಸಲು ಆಗದ ಸ್ಥಿತಿಯಲ್ಲಿ ನರಳುತ್ತಿದೆ. ಸೋಮವಾರ ಮುಂಜಾನ ಈ ದುರ್ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿರಿ ಡಿಕೆಶಿ ಮನೆಗೆ ಶಿವರಾಜ್ಕುಮಾರ್ ದಿಢೀರ್ ಭೇಟಿ ನೀಡಿದ್ದೇಕೆ?
ಗೋವಿನ ಸ್ಥಿತಿ ಕಂಡು ಗೋಪಾಲಕಿ ಕಣ್ಣೀರಿಡುತ್ತಿದ್ದಾರೆ. ಗೋಹತ್ಯೆ ನಿಷೇಧದ ಬಳಿಕ ಮೊದಲ ಬಾರಿಗೆ ನಗರದಲ್ಲಿ ಇಂಥ ಅಮಾನವೀಯ ಜರುಗಿದ್ದು, ಕೂಡಲೇ ಗೋವಿನ ಮೇಲೆ ಪೈಶಾಚಿಕ ಕೃತ್ಯ ಎಸಗಿದವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.