ಫೆ. 14ರಂದು 'ಕೌ ಹಗ್ ಡೇ' ಇಲ್ಲ; ಮನವಿ ಹಿಂಪಡೆದುಕೊಂಡ ಪ್ರಾಣಿ ಕಲ್ಯಾಣ ಮಂಡಳಿ

Cow Hug Day
Published on

ನವದೆಹಲಿ: ಪ್ರೇಮಿಗಳ ದಿನವಾದ ಫೆ. 14ರಂದ ಹಸುಗಳನ್ನು ಅಪ್ಪಿಕೊಳ್ಳುವ ಮೂಲಕ ಕೌ ಹಗ್​ ಡೇ ಆಚರಿಸಬೇಕು ಎಂದು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ಈ ಹಿಂದೆ ಮಾಡಿಕೊಂಡಿದ್ದ ಮನವಿಯನ್ನು ಹಿಂಪಡೆದುಕೊಂಡಿದೆ.

ಪ್ರಾಣಿ ಕಲ್ಯಾಣ ಮಂಡಳಿಯ ಈ ಮನವಿಯ ಬಗ್ಗೆ ಆಕ್ಷೇಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ವಿಷಯ ವಿವಾದಾತ್ಮಕವಾಗಿ ಪರಿಣಮಿಸಿತ್ತು. ಅದಾಗ್ಯೂ ಮಂಡಳಿಯ ಈ ನಿಲುವನ್ನು ಉತ್ತರಪ್ರದೇಶದ ಸಚಿವರು ಸಮರ್ಥಿಸಿಕೊಂಡಿದ್ದರು.

ಗೋವನ್ನು ಸ್ಪರ್ಶಿಸುವುದು ಅಥವಾ ಅಪ್ಪಿಕೊಳ್ಳುವುದರಿಂದ ಅನೇಕ ರೋಗಗಳು ವಾಸಿಯಾಗುತ್ತವೆ ಮತ್ತು ರಕ್ತದೊತ್ತಡದ ಮಟ್ಟವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ ಎಂದು ಉತ್ತರ ಪ್ರದೇಶದ ಪಶುಸಂಗೋಪನೆ ಸಚಿವ ಧರಮ್​ ಪಾಲ್​ ಸಿಂಗ್​ ಹೇಳಿದ್ದರು.

ಆದರೆ ಇಂದು ತನ್ನ ಮನವಿಯನ್ನು ಹಿಂಪಡೆದುಕೊಂಡಿರುವುದಾಗಿ ಪ್ರಾಣಿ ಕಲ್ಯಾಣ ಮಂಡಳಿ ಹೊಸ ಸುತ್ತೋಲೆಯೊಂದನ್ನು ಹೊರಡಿಸಿದೆ. ಹೀಗಾಗಿ ಫೆ. 14ರಂದು ಕೌ ಹಗ್​ ಡೇ ಆಚರಣೆ ಇರುವುದಿಲ್ಲ ಎಂಬುದನ್ನು ಪ್ರಾಣಿ ಕಲ್ಯಾಣ ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net