ಬೆಂಗಳೂರು: ರಾಜ್ಯದಲ್ಲಿ ಕರೊನಾ ಕೋವಿಡ್ 19 ವೈರಸ್ ಸೋಂಕು ಪೀಡಿತರ ಸಂಖ್ಯೆ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯ 24 ಗಂಟೆ ಅವಧಿಯಲ್ಲಿ 416 ಹೊಸ ಕೇಸ್ಗಳು ಪತ್ತೆಯಾಗಿವೆ. ಈ ಅವಧಿಯಲ್ಲಿ ಸೋಂಕು ತಗುಲಿ ಮೃತಪಟ್ಟವರ ಸಂಖ್ಯೆ 9 ಆಗಿದ್ದು, ಇದುವರೆಗೆ ಮೃತರಾದವರ ಒಟ್ಟು ಸಂಖ್ಯೆ 132ಕ್ಕೆ ತಲುಪಿದೆ. ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರು 181 ಮತ್ತು ಇದುವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾದವರು 5,391.
ಪ್ರಸ್ತುತ ಕೋವಿಡ್ 19 ಸೋಂಕು ಸಕ್ರಿಯವಾಗಿರುವ ರೋಗಿಗಳ ಸಂಖ್ಯೆ 3170. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 74 ಮಂದಿ. ಇಂದು ದೃಢಪಟ್ಟ ಕೇಸ್ಗಳ ಪೈಕಿ 22 ಜನರಿಗೆ ಅಂತಾರಾಷ್ಟ್ರೀಯ ಪ್ರಯಾಣದ ಇತಿಹಾಸವಿದ್ದರೆ, 116 ಜನರದ್ದು ಅಂತಾರಾಜ್ಯ ಪ್ರಯಾಣದ ಹಿಸ್ಟರಿ ಕಂಡುಬಂದಿದೆ.
ಜಿಲ್ಲಾವಾರು ಅಂಕಿಅಂಶ ಗಮನಿಸಿದರೆ ಇಂದು ಕೂಡ ಬೆಂಗಳೂರು ನಗರದಲ್ಲೇ ಗರಿಷ್ಠ 94 ಕೇಸ್ಗಳು ಪತ್ತೆಯಾಗಿರುವಂಥದ್ದು. ಬೀದರ್ 73, ಬಳ್ಳಾರಿ, ರಾಮನಗರ ತಲಾ 38, ಕಲಬುರಗಿಯಲ್ಲಿ 34 ಕೇಸ್ಗಳು ಕಂಡುಬಂದಿವೆ. ಒಟ್ಟಾರೆ ಪ್ರಕರಣಗಳನ್ನು ಗಮನಿಸಿದರೆ ಬೆಂಗಳೂರು ನಗರ ಸಾವಿರದ ಗಡಿ ದಾಟಿದ್ದು, 1076 ಕೇಸ್ಗಳಿವೆ. ಕಲಬುರಗಿಯಲ್ಲಿ 1160 ಕೇಸ್, ಉಡುಪಿಯಲ್ಲಿ 1063, ಬೀದರ್ 484, ದಕ್ಷಿಣ ಕನ್ನಡ 418, ಬಳ್ಳಾರಿಯಲ್ಲಿ 402 ಪ್ರಕರಣಗಳಿವೆ. ಪೂರ್ಣವಿವರಗಳಿಗೆ ಗ್ಯಾಲರಿ ಗಮನಿಸಿ.