ರಾಜ್ಯದಲ್ಲಿ ಕೋವಿಡ್​ 19 ಹೊಸ ಕೇಸ್ 210: ಇಂದಿನ ಮರಣ ಪ್ರಮಾಣ 12

06062020 Koppal Corona Positive Case
Published on

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯವರೆಗಿನ 24 ಗಂಟೆ ಅವಧಿಯಲ್ಲಿ ಕೋವಿಡ್​ 19 ನ 210 ಹೊಸ ಕೇಸ್​ಗಳು ಖಚಿತವಾಗಿವೆ. ಅದೇ ರೀತಿ 12 ಸೋಂಕು ಪೀಡಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತ ಸಂಖ್ಯೆ 8 ಸಾವಿರದ ಸನಿಹ ತಲುಪಿದೆ.

ಇಂದಿನ 210 ಕೇಸ್​ಗಳೊಂದಿಗೆ ರಾಜ್ಯದಲ್ಲಿ ಒಟ್ಟು 7,944 ಕೇಸ್​ಗಳಾಗಿದೆ. ಮರಣ ಪ್ರಮಾಣ ಒಟ್ಟು 114 ತಲುಪಿದ್ದು, ಇದರಲ್ಲಿ 4 ಪ್ರಕರಣಗಳಲ್ಲಿ ಸೋಂಕು ಪೀಡಿತರು ಅನ್ಯಕಾರಣಗಳಿಗೆ ಮೃತಪಟ್ಟಿದ್ದಾರೆ. ಈ ದಿನ ಆಸ್ಪತ್ರೆಯಿಂದ ಒಟ್ಟು 179 ಜನ ಸೋಂಕು ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ ಸೋಂಕು ಮುಕ್ತರಾದವರ ಸಂಖ್ಯೆ 4,983 ತಲುಪಿದೆ. ಒಟ್ಟು ಸಕ್ರಿಯ ಪ್ರಕರಣಗಳು 2, 843. ಐಸಿಯುನಲ್ಲಿ 73 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾ ಮಟ್ಟದ ಡೇಟಾ ಗಮನಿಸಿದರೆ, ಬಳ್ಳಾರಿ ಮತ್ತು ಕಲಬುರಗಿಯಲ್ಲಿ ಇಂದು ಗರಿಷ್ಠ 48 ಪ್ರಕರಣಗಳು ಖಚಿತವಾಗಿವೆ. ದಕ್ಷಿಣ ಕನ್ನಡ 23, ರಾಮನಗರ 21, ಬೆಂಗಳೂರು ನಗರ 17 ಕೇಸ್​ಗಳು ಖಚಿತ ಪಟ್ಟಿದ್ದು ಟಾಪ್ 5ರ ಪಟ್ಟಿಯಲ್ಲಿವೆ. ಒಟ್ಟಾರೆ ಪ್ರಕರಣಗಳ ಪಟ್ಟಿಯಲ್ಲಿ ಕಲುಬರಗಿ 1074, ಉಡುಪಿ 1039 (ಇಂದು ಯಾವುದೇ ಕೇಸ್ ಇಲ್ಲ), ಯಾದಗಿರಿ 873, ಬೆಂಗಳೂರು ನಗರ 844, ರಾಯಚೂರು 414 ಕೇಸ್​ಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net