More

    VIDEO|ಗಡ್ಡ ಪ್ರಿಯರು ತಲೆ ಕೆಡಿಸಿಕೊಳ್ಳಬೇಕಾದ ಸುದ್ದಿ!

    ಬೆಂಗಳೂರು: ಸಲೂನ್​ ಓಪನ್ ಇಲ್ಲ. ಫ್ಯಾಷನ್ ಮಾಡೋಕೆ ಇದೇ ಒಂದು ಅವಕಾಶ. ಗಡ್ಡ ಬಿಟ್ಟು ಬಿಡೋಣ. ಸ್ವಲ್ಪ ಶೇಪ್ ಕೊಟ್ಟು ಸ್ಟೈಲ್ ಮಾಡಿದರಾಯಿತು ಅನ್ನೋ ಭಾವನೆ ಅನೇಕರಲ್ಲಿದೆ. ಕೋವಿಡ್ 19 ಸೋಂಕು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಸಲುವಾಗಿ ಅನೇಕ ಕ್ರಮಗಳನ್ನು ಅನುಸರಿಸುವಂತೆ ಘೋಷಿಸಲಾಗಿದೆ. ಸಲೂನ್​ಗೆ ಹೆಚ್ಚು ಜನ ಹೋಗುವ ಕಾರಣ ಅಲ್ಲಿಂದ ಹರಡುವ ಸಾಧ್ಯತೆ ಇದೆ ಎಂದು ಸಲೂನ್ ಓಪನ್ ಮಾಡದಂತೆ ಸೂಚಿಸಲಾಗಿತ್ತು. ಆದರೆ ಅನ್​ಲಾಕ್ ಅವಧಿಯಲ್ಲಿ ಎಲ್ಲರಲ್ಲೂ ಉಂಟಾಗಿರುವ ಅವ್ಯಕ್ತ ಭಯದ ಕಾರಣ ಸಲೂನ್​ಗೆ ಅನೇಕರು ಹೋಗುತ್ತಿಲ್ಲ. ಆದಾಗ್ಯೂ, ಗಡ್ಡ ಬಿಟ್ಟುಕೊಂಡು ಓಡಾಡೋದು ಕೂಡಾ ಅಪಾಯಕಾರಿ ಎಂದು ಡಾಕ್ಟರ್​ಗಳ ತಂಡ ಎಚ್ಚರಿಸಿದೆ.

    ಡಾ.ಗಿರೀಶ್ ಮತ್ತು ಅವರ ತಂಡದ ಕಲೆಹಾಕಿರುವ ಮಾಹಿತಿ ಪ್ರಕಾರ, ಸದ್ಯದ ಪರಿಸ್ಥಿತಿಯಲ್ಲಿ ಹೆಲ್ತ್ ಕೇರ್ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕಡ್ಡಾಯವಾಗಿ ಕ್ಲೀನ್ ಶೇವ್ ಮಾಡಿಕೊಂಡಿರಬೇಕು. ಇಲ್ಲದೇ ಹೋದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚು. ರೋಗಿಗಳ ಜತೆಗೆ ಒಡನಾಡುವ ಕಾರಣ ಎನ್​95 ಮಾಸ್ಕ್​ ಧರಿಸಿದ್ದರೂ ಹೊರಗೆ ಚಾಚಿಕೊಂಡಿರುವ ಗಡ್ಡದ ಕೂದಲುಗಳ ಮೂಲಕ ವೈರಾಣುಗಳು ಬಾಯಿ, ಮೂಗಿನ ಮೂಲಕ ಶ್ವಾಸಕೋಶ ಪ್ರವೇಶಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಕ್ಲೀನ್ ಶೇವ್ ಮಾಡಿಕೊಂಡಿರಬೇಕು ಎಂದು ಹೇಳಲಾಗುತ್ತದೆ. ವಿದೇಶಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.

    ಇದನ್ನೂ ಓದಿ: ಪುರಿ ಜಗನ್ನಾಥನೇ ನಮ್ಮನ್ನು ಕ್ಷಮಿಸುವುದಿಲ್ಲ ಎಂದ ಸುಪ್ರೀಂ ಕೋರ್ಟ್​

    ಇನ್ನು ಸಾರ್ವಜನಿಕರ ವಿಷಯದಲ್ಲಿ, ಅವರೂ ಅಷ್ಟೇ ಗಡ್ಡ ಬಿಟ್ಟುಕೊಂಡು ಓಡಾಡಿದರೆ, ಮಾಸ್ಕ್ ಧರಿಸಿದರೂ ಪ್ರಯೋಜನವಾಗದು. ಅನೇಕರಲ್ಲಿ ವೈರಾಣು ಸೋಂಕಿನ ಗುಣ ಲಕ್ಷಣಗಳಿಲ್ಲ. ಆದರೆ, ಅವರಲ್ಲಿ ವೈರಾಣು ಸೋಂಕು ಇದ್ದರೆ ಅದು ಸುಲಭವಾಗಿ ಗಡ್ಡಧಾರಿಗಳ ಗಡ್ಡದ ಮೂಲಕ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಸ್ವಚ್ಛತೆ ಕಡೆಗೆ ಹೆಚ್ಚು ಆದ್ಯತೆ ನೀಡಬೇಕಾದ್ದು ಅನಿವಾರ್ಯ ಎಂದು ಡಾ.ಗಿರೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)

    ಸಂಗಾತಿ ಮುಟ್ಟಾದರೆ ಪುರುಷರಿಗೆ ವೇತನಸಹಿತ ರಜೆ ನೀಡುತ್ತಂತೆ ಈ ಕಂಪನಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts