More

    ಗ್ಯಾರೆಂಟಿ ಕಾರ್ಡ್‌ಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತ

    ಸಿರಗುಪ್ಪ: ಗ್ಯಾರೆಂಟಿ ಕಾರ್ಡ್‌ನಿಂದಾಗಿ ರಾಜ್ಯ ಅಭಿವೃದ್ಧಿ ಕಾಣುತ್ತಿಲ್ಲ. ಎಸ್.ಇ.ಪಿ, ಟಿ.ಎಸ್.ಪಿ. ಮೀಸಲಿಟ್ಟ ಹಣವನ್ನು ಗ್ಯಾರೆಂಟಿಗಳಿಗೆ ಬಳಕೆ ಮಾಡುವ ಮೂಲಕ ಪ.ಜಾತಿ ಮತ್ತು ಪ.ಪಂಗಡ ಜನಾಂಗಕ್ಕೆ ಅನ್ಯಾಯ ಮಾಡಿದೆ ಎಂದು ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಆರೋಪಿಸಿದರು.

    ಇದನ್ನೂ ಓದಿ: ಸಮೃದ್ಧ-ಸುರಕ್ಷಿತ ಕರ್ನಾಟಕ ಬಿಜೆಪಿ ಗ್ಯಾರೆಂಟಿ: ಅಮಿತ್ ಶಾ

    ತಾಲೂಕಿನ ತೆಕ್ಕಲಕೋಟೆ ಮಾಜಿ ಶಾಸಕರ ನಿವಾಸದಲ್ಲಿ ಶನಿವಾರ ನಡೆದ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಮಾತನಾಡಿದರು. ಸಿದ್ದರಾಮಯ್ಯ ಸುಳ್ಳಿನ ಸರದಾರರಾಗಿದ್ದು, ತಾಲೂಕಿನ ಅಭಿವೃದ್ಧಿಗೆ 100ರೂ. ಅನುದಾನ ನೀಡಿಲ್ಲ, ಕೇವಲ ಪತ್ರಿಕೆಗಳಲ್ಲಿ ಮಾತ್ರ ‘ನಾವು ನುಡಿದಂತೆ ನಡೆದಿದ್ದೇವೆ’ ಎಂದು ಹೇಳುತ್ತಿದ್ದಾರೆ.

    ಗ್ಯಾರೆಂಟಿಗಳನ್ನು ನೀಡುವು ಮೂಲಕ ರಾಜ್ಯದಲ್ಲಿ ಅವ್ಯವಸ್ಥೆ ಸೃಷ್ಟಿಸಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪಯಾಣ ನೀಡಿ ಸಾರ್ವಜನಿಕರಿಗೆ ಬಸ್‌ಗಳ ವ್ಯವಸ್ಥೆ ಇಲ್ಲದಂತೆ ಮಾಡಿ. ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಶಾಲೆ ಕಾಲೇಜುಗಳಿಗೆ ಹೋಗಲಾಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

    ಉಚಿತ ವಿದ್ಯುತ್ ಎಂದು ಹೆಚ್ಚಿನ ಶುಲ್ಕವನ್ನು ಭರಿಸುವಂತೆಯಾಗಿದೆ. ಯುವಕರಿಗೆ ನಿರುದ್ಯೋಗ ಬತ್ಯೆ ಕೋಡುವ ವಿಚಾರ ಕೈ ಬಿಟ್ಟಂತೆ ಕಾಣುತ್ತಿದೆ. ಮಹಿಳೆಯರಿಗೆ ಎರಡು ಸಾವಿರ ನೀಡುತ್ತೇವೆ ಎಂದು ಹೇಳಿ ಚಾಲನೆ ನೀಡಿದರು ಶೇ.10 ರಷ್ಟು ಜನರಿಗೆ ತಲುಪಿದೆ.

    ಹಾಲಿ ಶಾಸಕರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷೃ ವಹಿಸಿದ್ದಾರೆ. ಮುಂಬರುವ ಲೋಕಸಭೆ, ಜಿ.ಪಂ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಈಗಿರುವ ಕಾಂಗ್ರೇಸ್ ಸರ್ಕಾರದ ದುರಾಡಳಿತವನ್ನು ಜನರ ಮುಂದೆ ಇಟ್ಟು ಬಿಜೆಪಿ ಪಕ್ಷವನ್ನು ಗೆಲ್ಲಿಸಲು ಶ್ರಮಿಸೋಣ ಎಂದು ಕರೆ ನೀಡಿದರು.

    ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕ್ರಪ್ಪ, ಪ್ರಮುಖರಾದ ಯು.ವೆಂಕೋಬ, ಕೆ.ಮಾರುತಿ, ಮಲ್ಲಿಕಾರ್ಜುನ, ಈರಣ್ಣ, ಖಾಜಾಸಾಬ್, ಬಸವರಾಜ, ಸಿಂಗ್ರಿ ಸಿದ್ದಯ್ಯ, ಪಕ್ಕೀರಯ್ಯ, ಆರ್.ಟಿ.ಮಾದಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts