ಕೋವಿಡ್ ಅಕ್ರಮ ಶೋಧಕ್ಕೆ SIT; 500 ಕೋಟಿ ರೂ. ವಸೂಲಾತಿ ಪ್ರಕ್ರಿಯೆಗೆ ತಕ್ಷಣವೇ ಚಾಲನೆ

covid illegal
Published on

ಬೆಂಗಳೂರು: ಮಹಾಮಾರಿ ಕೋವಿಡ್ ಅವಧಿಯ ಅಕ್ರಮ ಆರೋಪಗಳ ಬೆನ್ನು ಹತ್ತಿರುವ ರಾಜ್ಯ ಸರ್ಕಾರ, ತಪ್ಪಿತಸ್ಥರ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚಿಸಲು ತೀರ್ಮಾನಿಸಿದೆ. ಇದರ ಜತೆಗೆ ಕೋವಿಡ್ (Covid Illegal) ಅವಧಿಯಲ್ಲಾದ ಪರಿಕರ, ಸೇವೆಗಳ ದರಗಳು, ಅಧಿಕಾರಿಗಳ ಲೋಪ ಹಾಗೂ ಆಡಳಿತಾತ್ಮಕ ನ್ಯೂನತೆಗಳನ್ನು ಪತ್ತೆ ಮಾಡಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುವ ಉದ್ದೇಶದಿಂದ ಸಚಿವ ಸಂಪುಟದ ಉಪಸಮಿತಿ ರಚಿಸಲು ಮುಂದಾಗಿದೆ. ಅಷ್ಟೇ ಅಲ್ಲ, ಅಕ್ರಮವಾಗಿದೆ ಎನ್ನಲಾದ 500 ಕೋಟಿ ರೂ.ಗಳನ್ನು ವಸೂಲಿ ಮಾಡುವ ನಿರ್ಧಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊರಬಿದ್ದಿದೆ.

ಕೋವಿಡ್ ಹಗರಣ ಸಂಬಂಧ ನ್ಯಾ.ಕುನ್ಹಾ ಆಯೋಗದ ಮಧ್ಯಂತರ ವರದಿ ಆಧರಿಸಿ ಈ ಪ್ರಮುಖ ಮೂರು ತೀರ್ವನಗಳನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ನಿರ್ಧಾರಗಳ ಕುರಿತು ಮಾಹಿತಿ ನೀಡಿದರು. 7,223.64 ಕೋಟಿ ಮೊತ್ತದ ಕೋವಿಡ್ ಅವ್ಯವಹಾರದ ಬಗ್ಗೆ ನ್ಯಾ.ಕುನ್ಹಾ ಆಯೋಗವು 11 ಸಂಪುಟಗಳಲ್ಲಿ ಸಲ್ಲಿಸಿದ ಮಧ್ಯಂತರ ವರದಿ, ಶಿಫಾರಸುಗಳ ಬಗ್ಗೆ ರ್ಚಚಿಸಲಾಯಿತು. ಆಯೋಗ ತಿಳಿಸಿರುವ ಪ್ರಕಾರ ನಾಲ್ಕು ಜಿಲ್ಲೆಗಳು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಾಲ್ಕು ವಲಯಗಳು, ಆರೋಗ್ಯ ಇಲಾಖೆಯದ್ದು ಸೇರಿ 55 ಸಾವಿರ ಕಡತಗಳನ್ನು ಪರಿಶೀಲಿಸಲಾಗಿದೆ. ಇನ್ನೂ 31 ಜಿಲ್ಲೆಗಳು, ಬಿಬಿಎಂಪಿಯ ನಾಲ್ಕು ವಲಯಗಳ ವರದಿ, ದಾಖಲೆಗಳು, ಕಡತಗಳನ್ನು ಪರಿಶೀಲಿಸಿದ ನಂತರ ಅಂತಿಮ ವರದಿ ಸಲ್ಲಿಸುವುದಾಗಿ ತಿಳಿಸಿದೆ.

ಆಯೋಗದ ಮಧ್ಯಂತರ ವರದಿ, ಶಿಫಾರಸು

ಪ್ರಕಾರ 500 ಕೋಟಿ ರೂ ವಸೂಲಿ ಪ್ರಕ್ರಿಯೆ ಆರಂಭಿಸಲು ಸಮ್ಮತಿಸಿ, ಪಾಲುದಾರ ಕಂಪನಿಗಳು/ ಸಂಸ್ಥೆಗಳನ್ನು ಕಪು್ಪ ಪಟ್ಟಿಯಲ್ಲಿಡಲು ಸಂಪುಟ ಗಂಭೀರ ಚಿಂತನೆ ನಡೆಸಿತು.

ಸಂಪುಟದ 3 ಪ್ರಮುಖ ನಿರ್ಧಾರ

1. ನ್ಯಾ.ಜಾನ್​ವೆುೖಕೆಲ್ ಡಿ.ಕುನ್ಹಾ ಏಕಸದಸ್ಯ ತನಿಖಾ ಆಯೋಗದ ಮಧ್ಯಂತರ ವರದಿಯಂತೆ ಅಪರಾಧಿಕ ಉದ್ದೇಶ ಬೇಧಿಸಲು ಎಸ್​ಐಟಿ ರಚನೆ

2. ಪರಿಕರ, ಸೇವೆಗಳ ದರಗಳು, ಅಧಿಕಾರಿಗಳ ಲೋಪದೋಷ ಹಾಗೂ ಆಡಳಿತಾತ್ಮಕ ನ್ಯೂನತೆಗಳ ಪತ್ತೆ ಮಾಡಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟದ ಉಪಸಮಿತಿ ರಚನೆ

3. ನ್ಯಾ.ಕುನ್ಹಾ ಆಯೋಗದ ಶಿಫಾರಸಿನಂತೆ ಅನಗತ್ಯ ವೆಚ್ಚ, ನಷ್ಟ ಹಾಗೂ ಕಾರ್ಯಾದೇಶ ಪಡೆದು ಪೂರೈಕೆಯಾಗದ ಪರಿಕರ ಮೊತ್ತ ಸೇರಿ ಒಟ್ಟು 500 ಕೋಟಿ ರೂಪಾಯಿ ಸಂಬಂಧಿತರಿಂದ ವಸೂಲಿ ಪ್ರಕ್ರಿಯೆಗೆ ತಕ್ಷಣ ಚಾಲನೆ.

ಎಸ್​ಐಟಿ ಚೌಕಟ್ಟೇನು?

ಸಿಐಡಿ ಅಧೀನದ ವಿಶೇಷ ತನಿಖಾ ತಂಡ ಸಂಪುಟ ಉಪ ಸಮಿತಿ ಪರಾಮರ್ಶೆ, ಸೂಚನೆಯಂತೆ ಕಾರ್ಯನಿರ್ವಹಣೆ ಮಾಡಲಿದೆ. ಮೊದಲು ಎಫ್​ಐಆರ್ ದಾಖಲಿಸಿ ತನಿಖೆ ಆರಂಭಿಸಲಿದೆ. ಕೋವಿಡ್ ಸಂದರ್ಭದಲ್ಲಿ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರು, ಪೂರೈಕೆದಾರರು ತನಿಖೆಗೆ ಒಳಪಡಲಿದ್ದಾರೆ. ಒಂದೊಮ್ಮೆ ವ್ಯತ್ಯಾಸಗಳು ಕಂಡುಬಂದಲ್ಲಿ ಎಸ್​ಐಟಿ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಿದೆ.

ದುರ್ಬಳಕೆ ಮೊತ್ತವೆಷ್ಟು?, ಯಾರೆಲ್ಲ ಶಾಮೀಲಾಗಿದ್ದಾರೆ ಎಂದು ವರದಿಯಲ್ಲಿ ನಿರ್ದಿಷ್ಟವಾಗಿ ತಿಳಿಸಿಲ್ಲ. ವರದಿಯಂತೆ ಕ್ರಿಮಿನಲ್ ಉದ್ದೇಶವಿರುವ ಕಾರಣಕ್ಕೆ ಯಾರ ಪಾತ್ರವೇನು ಎಂದು ತಿಳಿದು, ಮುಂದಿನ ಕ್ರಮ ವಹಿಸುವುದಕ್ಕಾಗಿ ಎಸ್​ಐಟಿ ರಚಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. | ಎಚ್.ಕೆ.ಪಾಟೀಲ ಸಚಿವ ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಇ.ಡಿ. ಮೂಲಕ ಬಹಿರಂಗವಾಗಿದೆ. ಅದಕ್ಕೆ ಪ್ರತಿಯಾಗಿ ಇವರು ಕೋವಿಡ್ ಸಂದರ್ಭದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ತಿಳಿಸಿ ತನಿಖೆಗೆ ನೀಡಲು ಮುಂದಾಗಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ಕೇಳಿದ್ದಕ್ಕಾಗಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. | ಎನ್.ರವಿಕುಮಾರ್ ವಿಧಾನ ಪರಿಷತ್ ಸದಸ್ಯ

ಕೋವಿಡ್ ಮಧ್ಯಂತರ ವರದಿ ಮುಖ್ಯಾಂಶಗಳು

  • ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಸ್ಥಾವರ ನಿರ್ವಣ, ಐಸಿಯು/ಪಿಐಸಿಯು, ಎಲ್​ಎಂಒ ಟ್ಯಾಂಕ್ ನಿರ್ವಣ, ಲಸಿಕೆ ಖರೀದಿ, ಮಾನವ ಸಂಪನ್ಮೂಲ ಪೂರೈಕೆ, ಟೆಸ್ಟ್ಕಿಟ್ ಖರೀದಿ, ಆಂಬುಲೆನ್ಸ್ ಸೇವೆಗಳು ಅವಲಂಬಿತರಿಗೆ ಪರಿಹಾರ ಮತ್ತಿತರ ವೆಚ್ಚದ ಮೊತ್ತ- 1754.34 ಕೋಟಿ ರೂ.
  • ಲ್ಯಾಬ್/ತಪಾಸಣೆ ವೆಚ್ಚ, ಅರಿವು-ಮಾಹಿತಿ, ಸಹಾಯವಾಣಿ ಮತ್ತಿತರ ಕೆಲಸಗಳಿಗೆ ಎನ್​ಎಚ್​ಎಂ ಬಿಡುಗಡೆ ಮಾಡಿದ ಒಟ್ಟು ಮೊತ್ತ- 24.02 ಕೋಟಿ ರೂಪಾಯಿ
  • ಕೆಎಸ್​ಎಂಸಿಎಲ್​ನಿಂದ ಆರ್​ಟಿಪಿಸಿಆರ್ ಕಿಟ್ಸ್, ಮಾಸ್ಕ್, ಔಷಧ, ಮಾತ್ರೆಗಳು, ಆಕ್ಸಿಜನ್ ಕನ್ಸಂಟ್ರೇಷನ್ಸ್ ಮತ್ತಿತರ ವೈದ್ಯಕೀಯ ಪರಿಕರ ಖರೀದಿ ವೆಚ್ಚ- 1394.60 ಕೋಟಿ ರೂ.
  • ಕೆಟಿಪಿಪಿ ಕಾಯ್ದೆ ಉಲ್ಲಂಘನೆ, ನ್ಯಾಯಸಮ್ಮತ ಕಾರಣ ನೀಡದೆ ಟೆಂಡರ್ ಷರತ್ತುಗಳ ಬದಲಾವಣೆ, ಯಾರಿಂದ ಎಷ್ಟು ವಸೂಲಿ ಮಾಡಬೇಕೆಂಬುದಕ್ಕೆ ಶಿಫಾರಸು
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಬೆಂಗಳೂರು (ಆಯುಕ್ತರ ಕಚೇರಿ, ಎಸ್​ಎಎಸ್​ಟಿ, ಇತರ)- 17.84 ಕೋಟಿ ರೂ.,
  • ಎನ್​ಎಚ್​ಎಂ- 0.08 ಕೋಟಿ ರೂ.
  • ಕೆಎಸ್​ಎಂಸಿಎಲ್- 82.66 ಕೋಟಿ ರೂ. ಹಾಗೂ 87.33 ಕೋಟಿ ರೂ.
  • ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ- 49.07 ಕೋಟಿ ರೂಪಾಯಿ ದಂಡ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net