ರಾಜ್ಯದಲ್ಲಿ 8 ಸಾವಿರ ಸಮೀಪಿಸಿದ ಕೋವಿಡ್ ಮೃತರ ಸಂಖ್ಯೆ

Covid-19
Published on

ಬೆಂಗಳೂರು:ರಾಜ್ಯದಲ್ಲಿ ಕೋವಿಡ್ -19 ಆರ್ಭಟ ಮುಂದುವರೆದಿದ್ದು, ಶನಿವಾರ 114 ಸೋಂಕಿತರ ಸಾವಿನೊಂದಿಗೆ ಮೃತರ ಸಂಖ್ಯೆ 8 ಸಾವಿರ ಗಡಿ ಸಮೀಪಿಸಿದ್ದು, ಮತ್ತೊಂದೆಡೆ 10,815 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಮೂಲಕ ಗುಣಮುಖರ ಸಂಖ್ಯೆ 4 ಲಕ್ಷ ಗಡಿ ದಾಟಿದೆ. 8,364 ಸೋಂಕು ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 5.11 ಲಕ್ಷ ತಲುಪಿದೆ.

ಒಟ್ಟಾರೆ ಸೋಂಕಿತರಲ್ಲಿ 98,564 ಮಂದಿ ರಾಜ್ಯದ ನಾನಾ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ದಾಖಲಾಗಿದ್ದು, ಈ ಪೈಕಿ 822 ಮಂದಿ ಗಂಭೀರ ಆರೋಗ್ಯ ಸಮಸ್ಯೆಯಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷಣ ರಹಿತ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಹೊಸ ಪ್ರಕರಣಗಳು? ಬೆಂಗಳೂರು ನಗರ 3,733 (33 ಸಾವು), ಮೈಸೂರು 626 (12), ದಕ್ಷಿಣ ಕನ್ನಡ 432 (5), ಗದಗ 391 (0), ಬಳ್ಳಾರಿ 300 (7), ಧಾರವಾಡ 264 (5), ಉಡುಪಿ 215 (1), ಬೆಂಗಳೂರು ಗ್ರಾಮಾಂತರ 189 (0), ಚಿಕ್ಕಮಗಳೂರು 165 (1), ದಾವಣಗೆರೆ 163 (3), ತುಮಕೂರು 159 (4), ರಾಯಚೂರು 156 (1), ಬಾಗಲಕೋಟೆ 152 (1), ಉತ್ತರ ಕನ್ನಡ 129 (6), ಯಾದಗಿರಿ 127 (0), ಕಲಬುರಗಿ 110 (3), ಹಾವೇರಿ 107 (2), ಶಿವಮೊಗ್ಗ 106 (1), ಬೆಳಗಾವಿ 100 (6), ಕೊಪ್ಪಳ 96 (7), ಮಂಡ್ಯ 94 (2), ಕೋಲಾರ 91 (0), ಚಿತ್ರದುರ್ಗ 84 (0), ವಿಜಯಪುರ 87 (2), ಚಿಕ್ಕಬಳ್ಳಾಪುರ 89 (0), ಚಾಮರಾಜನಗರ 72 (7), ರಾಮನಗರ 47 (0), ಕೊಡಗು 38 (0), ಬೀದರ್ 23 (0), ಹಾಸನ 19 (5) ಸೇರಿದಂತೆ ಕಳೆದ 24 ಗಂಟೆಗಳಲ್ಲಿ 8,364 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಲಿಸದೆ 114 ಮಂದಿ ಬಲಿಯಾಗಿದ್ದಾರೆ.

ಪ್ರಕರಣಗಳ ವಿವರ

ನಿಗಾದಲ್ಲಿರುವವರು - 4,83,087

ಪರೀಕ್ಷಿಸಿದ ಮಾದರಿಗಳು - 41,79,567

ಒಟ್ಟು ಸೋಂಕಿತರು - 5,11,346

ಮೃತಪಟ್ಟವರು - 7,922

ಅನ್ಯಕಾರಣದಿಂದ ಸಾವು - 19

ಗುಣಮುಖರಾದವರು - 4,04,841

ಚಿಕಿತ್ಸೆ ಪಡೆಯುತ್ತಿರುವವರು - 98,564

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net