ಅಕ್ಕನ ನಿಶ್ಚಿತಾರ್ಥದಲ್ಲಿ ಸಂಭ್ರಮದಿಂದ ಓಡಾಡಿದ್ದವಳಿಗೆ ಮರುದಿನವೇ ಕಾದಿತ್ತು ಕೊವಿಡ್​-19 ಶಾಕ್​ !

covid-19
Published on

ವಿಜಯಪುರ: ಕರೊನಾ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದೀಗ ನಿಶ್ಚಿತಾರ್ಥದ ಸಂಭ್ರಮದಲ್ಲಿ ಪಾಲ್ಗೊಂಡಿದ್ದ 150ಕ್ಕೂ ಹೆಚ್ಚು ಜನರಿಗೆ ಕರೊನಾ ಆತಂಕ ಶುರುವಾಗಿದೆ.

ನಗರದಲ್ಲಿ ಯುವತಿಯೋರ್ವಳ ನಿಶ್ಚಿತಾರ್ಥವಿತ್ತು. ಆದರೆ ಸಮಾರಂಭ ಮುಗಿಯುತ್ತಿದ್ದಂತೆ ಆಕೆಯ ತಂಗಿಯಲ್ಲಿ ಕರೊನಾ ದೃಢಪಟ್ಟಿದೆ.

17ವರ್ಷದ ಯುವತಿ ತನ್ನ ಅಕ್ಕನ ಎಂಗೇಜ್​ಮೆಂಟ್​ನಲ್ಲಿ ಸಂಭ್ರಮದಿಂದ ಓಡಾಡಿದ್ದಳು. ನಿಶ್ಚಿತಾರ್ಥಕ್ಕೂ ಮೊದಲೇ ಆಕೆಗೆ ಕೆಮ್ಮು, ಶೀತ, ಜ್ವರ ಇತ್ತು. ಆಸ್ಪತ್ರೆಗೆ ಹೋಗಿದ್ದಾಗ ಸ್ವಾಬ್​ ಕಲೆಕ್ಟ್ ಮಾಡಿದ್ದ ವೈದ್ಯರು, ಹೋಂ ಕ್ವಾರಂಟೈನ್​ ಆಗುವಂತೆ ಸೂಚಿಸಿದ್ದರು. ಇದನ್ನೂ ಓದಿ: ಉಗ್ರರದ್ದು ಕ್ರೂರ ಕಾಮತೃಷೆ; ಅಡಗುತಾಣಗಳಲ್ಲಿವೆ ಕಾಂಡೊಮ್​, ವಯಾಗ್ರಾ, ಅಶ್ಲೀಲ ವಸ್ತುಗಳು

ಅದರ ಮರುದಿನವೇ ಅಕ್ಕನ ನಿಶ್ಚಿತಾರ್ಥ ಇತ್ತು. ಈಕೆ ತನಗಿದ್ದ ಶೀತ, ಜ್ವರ ಮರೆತು ಸಂಭ್ರಮದಿಂದ ಓಡಾಡಿದ್ದಳು. ಆದರೆ ಎಂಗೇಜ್​ಮೆಂಟ್​ ಮರುದಿನ ಬಂದ ವೈದ್ಯಕೀಯ ವರದಿಯಲ್ಲಿ ಆಕೆಗೆ ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು.

ಇದೀಗ 150ಕ್ಕೂ ಹೆಚ್ಚು ಮಂದಿಗೆ ಕರೊನಾ ಆತಂಕ ಶುರುವಾಗಿದೆ. ಬಾಲಕಿಯ ಸಂಪರ್ಕಕ್ಕೆ ಬಂದಿದ್ದ 130 ಜನರ ಗಂಟಲು ದ್ರವದ ಮಾದರಿಯನ್ನು ಆರೋಗ್ಯ ಇಲಾಖೆ ಸಂಗ್ರಹ ಮಾಡಿದೆ. ಇನ್ನಷ್ಟು ಜನರನ್ನು ಟ್ರೇಸ್​ ಮಾಡಲಾಗುತ್ತಿದೆ. ಇದನ್ನೂ ಓದಿ: VIDEO: ಟ್ರೆಂಡಿಂಗ್​ನಲ್ಲಿದೆ ಚಹಾ ಮಾಡುವ ಈ ವಿಧಾನ- ನೀವೂ ಟ್ರೈ ಮಾಡಿ :)

ಸದ್ಯ ಬಾಲಕಿಯ ಮನೆಯ ಸುತ್ತಲಿನ ಏರಿಯಾವನ್ನು ಸೀಲ್​ ಡೌನ್​ ಮಾಡಲಾಗಿದೆ. ಇದೊಂದು ನಿಶ್ಚಿತಾರ್ಥ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ತಲೆಬಿಸಿ ತಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net