

ನವದೆಹಲಿ: ಅವರುಗಳು ತಮ್ಮತಮ್ಮ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳು. ಭಾರತೀಯ ಕ್ರೀಡಾ ಇತಿಹಾಸದಲ್ಲಿ ಹೀರೋ ಆಗಿ ಮಿಂಚಿದ್ದ ಇವರು ಇದೀಗ ಕೋವಿಡ್-19 ವೈರಸ್ ತಡೆಗಟ್ಟಲು ಟೊಂಕಕಟ್ಟಿ ನಿಂತಿದ್ದಾರೆ. ಪೊಲೀಸ್ ಅಧಿಕಾರಿಗಳಾಗಿರುವ ಹರಿಯಾಣ ಮೂಲದ ಕ್ರೀಡಾಪಟುಗಳಾದ 2007ರ ಟಿ20 ವಿಶ್ವಕಪ್ ಹೀರೋ ಜೋಗಿಂದರ್ ಶರ್ಮ, ಕಾಮನ್ವೆಲ್ತ್ ಗೇಮ್್ಸ ಸ್ವರ್ಣ ಪದಕ ವಿಜೇತ ಬಾಕ್ಸರ್ ಅಖಿಲ್ ಕುಮಾರ್, ಏಷ್ಯಾಡ್ ಸ್ವರ್ಣ ಪದಕ ವಿಜೇತ ಕಬಡ್ಡಿ ತಂಡದ ಸದಸ್ಯ ಹಿಮಾಚಲ ಪ್ರದೇಶದ ಅಜಯ್ ಠಾಕೂರ್ ಈಗ ಲಾಠಿ ಹಿಡಿದು ಬೀದಿಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜೋಗಿಂದರ್-ಅಖಿಲ್ ಹಿಂದಿನಿಂದಲೂ ಉತ್ತಮ ಸ್ನೇಹಿತರು, ಕ್ರೀಡೆ ಬೇರೆಯಾದರೂ ಒಂದೇ ಇಲಾಖೆಯಲ್ಲಿ ನೌಕರಿ ಗಿಟ್ಟಿಸಿಕೊಂಡು ಒಟ್ಟಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.
2007ರಿಂದಲೂ ಡಿಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನೌಕರಿಗೆ ಸೇರಿದ ಮೇಲೆ ಸಾಕಷ್ಟು ಸವಾಲು ಎದುರಿಸಿದ್ದೇನೆ’ ಎನ್ನುತ್ತಾರೆ ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮ. ದಕ್ಷಿಣ ಆಫ್ರಿಕಾದಲ್ಲಿ 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಕಡೇ ಓವರ್ ಬೌಲಿಂಗ್ ಮಾಡುವ ಅವರು ಗಮನಸೆಳೆದಿದ್ದರು. 36 ವರ್ಷದ ಜೋಗಿಂದರ್ ಸದ್ಯ ಹಿಸ್ಸಾರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ಕಾರ್ಯನಿರ್ವಹಿಸುತ್ತೇವೆ. ರಾತ್ರಿ ಎಷ್ಟೊತ್ತಿಗಾದರೂ ಬಂದು ಮಲಗಬಹುದು ಎನ್ನುತ್ತಾರೆ ಜೋಗಿಂದರ್.
ಇಂಥ ಪ್ರಕರಣಗಳಲ್ಲಿ ಜನರೇ ನಮಗೆ ಸಹಕರಿಸುತ್ತಾರೆ. ಕೆಲವೊಂದು ಅಹಿತಕರ ಘಟನೆ ಹೊರತುಪಡಿಸಿ, ಉಳಿದಂತೆ ಎಲ್ಲವೂ ಸುಗಮವಾಗಿದೆ. ಜನರು ಕೂಡ ದಿನದಿಂದ ದಿನಕ್ಕೆ ಪರಿಸ್ಥಿತಿ ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂದು 2006ರ ಕಾಮನ್ವೆಲ್ತ್ ಗೇಮ್್ಸ ಸ್ವರ್ಣ ಪದಕ ವಿಜೇತ ಅಖಿಲ್ ಹೇಳುತ್ತಾರೆ. ಸದ್ಯ ರೆವಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2014ರ ಏಷ್ಯಾಡ್ ಕಬಡ್ಡಿ ಸ್ವರ್ಣ ಪದಕ ವಿಜೇತ ಭಾರತ ತಂಡದ ಸದಸ್ಯ ಅಜಯ್ ಠಾಕೂರ್ ಸದ್ಯ ಬಿಸ್ಲಾಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೀದಿ ಬೀದಿಗಳಲ್ಲಿ ಸಾರ್ವಜನಿಕರಿಗೆ ಕರೊನಾ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪದ್ಮಶ್ರೀ ಪುರಸ್ಕೃತ ಅಜಯ್ ಠಾಕೂರ್ ಪೊ› ಕಬಡ್ಡಿ ಲೀಗ್ನಲ್ಲಿ ಹಾಲಿ ತಮಿಳ್ ತಲೈವಾಸ್ ತಂಡದ ಸದಸ್ಯರಾಗಿದ್ದಾರೆ. -ಪಿಟಿಐ