ಪ್ರಧಾನಿ ಮೋದಿ ಬಂದು ಹೋಗಿದ್ದೇ ನಮಗೆ ದೊಡ್ಡ ಸ್ಫೂರ್ತಿ; ಹೀಗಂದಿದ್ಯಾರು?

Bharath
Published on

ಹೈದರಾಬಾದ್​: ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಇವರಿರುವ ಸ್ಥಳಕ್ಕೇ ಬಂದುಹೋಗಿದ್ದು ಇದೀಗ ಇವರಿಗೆ ಭಾರಿ ಸ್ಫೂರ್ತಿಯನ್ನು ತುಂಬಿದೆಯಂತೆ. ಅವರ ಆಗಮನವೇ ನಮ್ಮ ತಂಡಕ್ಕೆ ದೊಡ್ಡ ಸ್ಫೂರ್ತಿ ಎಂದು ಇವರು ಹೇಳಿಕೊಂಡಿದ್ದಾರೆ.

ಕೋವಿಡ್-19 ಹಿನ್ನೆಲೆಯಲ್ಲಿ ಲಸಿಕೆ ತಯಾರಾಗುತ್ತಿರುವ ಭಾರತ್ ಬಯೋಟೆಕ್ ಕಂಪನಿಗೆ ಶನಿವಾರ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಅಲ್ಲಿನ ವಿಜ್ಞಾನಿಗಳ ತಂಡ ಅದರಿಂದ ಸಂತೋಷಗೊಂಡಿದೆ. ಜೀನೋಮ್​ ವ್ಯಾಲಿಯಲ್ಲಿರುವ ನಮ್ಮ ಕಂಪನಿಗೆ ಮೋದಿಯವರು ಭೇಟಿ ಕೊಟ್ಟಿರುವುದು ನಮಗೆ ಸ್ಫೂರ್ತಿ ನೀಡಿರುವುದು ಮಾತ್ರವಲ್ಲ, ಕೋವಿಡ್​-19 ವಿರುದ್ಧ ಹೋರಾಟದ ಹುರುಪನ್ನು ಹೆಚ್ಚಿಸಿದೆ ಎಂದೂ ಹೇಳಿದ್ದಾರೆ.

ಭಾರತದ ಮೊದಲ ಸ್ವದೇಶಿ ವ್ಯಾಕ್ಸಿನ್​ ಕೊವ್ಯಾಕ್ಸಿನ್ ತಯಾರಿಕೆ ಭಾರತ್ ಬಯೋಟೆಕ್​ನಲ್ಲಿ ತಯಾರಾಗುತ್ತಿದ್ದು, ಇದೀಗ ಅದರ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ದೇಶದ 25 ನಗರಗಳಲ್ಲಿ 26,000 ಜನ ಸ್ವಯಂಸೇವಕರೊಂದಿಗೆ ಈ ಪ್ರಯೋಗ ನಡೆಯುತ್ತಿದೆ ಎಂದು ಕಂಪನಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net