ಟೆಲಿಮೆಡಿಸಿನ್​ಗೂ ಬರಲಿದೆ ಒಂದು ಕೋರ್ಸ್​, ಎಲ್ಲ ವೈದ್ಯರಿಗೂ ಇದು ಕಡ್ಡಾಯ

telemedicine
Published on

ನವದೆಹಲಿ: ತಮ್ಮ ರೋಗಿಗಳಿಗೆ ಟಿಲಿಕನ್ಸಲ್ಟೇಷನ್​ ಮೂಲಕ ವೈದ್ಯಕೀಯ ಸಲಹೆಗಳನ್ನು ಕೊಡುತ್ತಿರುವ ವೈದ್ಯರೆಲ್ಲರೂ ಕಡ್ಡಾಯವಾಗಿ ಟೆಲಿಮೆಡಿಸಿನ್​ ತರಬೇತಿಗೆ ಒಳಪಡಬೇಕಾಗಿದೆ. ಭಾರತೀಯ ವೈದ್ಯಕೀಯ ಮಂಡಳಿ ಇದಕ್ಕಾಗಿ ಕೋರ್ಸ್​ ಅನ್ನು ವಿನ್ಯಾಸಗೊಳಿಸಿದೆ. ಇಂಥ ಕೋರ್ಸ್​ ಆರಂಭಿಸುವ ಕುರಿತು ಅದರ ರೂಪುರೇಷೆಯನ್ನು ನಿರ್ಧರಿಸಲು ಭಾರತೀಯ ವೈದ್ಯಕೀಯ ಮಂಡಳಿ ಕಳೆದ ಮೇನಲ್ಲಿ ಗರ್ವನರ್​ಗಳ ಮಂಡಳಿಯ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು ತನ್ನ ವರದಿಯನ್ನು ಸಿದ್ಧಪಡಿಸಿದ್ದು, ಅದನ್ನು ಸರ್ಕಾರಕ್ಕೆ ಸಲ್ಲಿಸಲು ಸಜ್ಜಾಗುತ್ತಿದೆ.

ನಮಗೆ ಟೆಲಿಮೆಡಿಸಿನ್​ ಸರ್ಟಿಫಿಕೇಷನ್​ ಕೋರ್ಸ್​ನ ರೂಪುರೇಷೆ ಸಿದ್ಧಪಡಿಸುವಂತೆ ಸೂಚಿಸಲಾಗಿತ್ತು. aದು ಸಿದ್ಧವಾಗಿದ್ದು, ಶೀಘ್ರದಲ್ಲೇ aದನ್ನು ಎಂಸಿಐ-ಬಿಒಜಿಗೆ ಸಲ್ಲಿಸಲಾಗುವುದು ಎಂದು ಬೆಂಗಳೂರು ನಿಮ್ಹಾನ್ಸ್​ನ ನಿರ್ದೇಶಕ ಹಾಗೂ ಗರ್ವನರ್​ಗಳ ಮಂಡಳಿಯ ಮುಖ್ಯಸ್ಥ ಡಾ. ಬಿ.ಎನ್​. ಗಂಗಾಧರ್​ ತಿಳಿಸಿದ್ದಾರೆ.

ಈ ಕೋರ್ಸ್​ ಅನ್ನು ಆನ್​ಲೈನ್​ ಶಿಕ್ಷಣದ ಮೂಲಕ ಒದಗಿಸಲಾಗುತ್ತದೆ. ಬಹುತೇಕ ಅದು ಅಲ್ಪಾವಧಿಯದ್ದಾಗಿರುತ್ತದೆ. ವೈದ್ಯಕೀಯ ಸಲಹೆ ನೀಡುವಾಗ ರೋಗಿಗಳೊಂದಿಗೆ ಹೇಗೆಲ್ಲ ನಡೆದುಕೊಳ್ಳಬೇಕು ಎಂಬ ಬಗ್ಗೆ ಈ ಕೋರ್ಸ್​ನಲ್ಲಿ ತಿಳಿಸಿಕೊಡಲಾಗುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ವಿಶೇಷವಾದ ಪದವಿಯನ್ನು ಹೊಂದಿಲ್ಲದ ವೈದ್ಯರು ಕೂಡ ಇಮೇಲ್​, ಫೋನ್​, ಆ್ಯಪ್​, ಚಾಟ್​ ಅಥವಾ ವಿಡಿಯೋ ಮೂಲಕ ತಮ್ಮ ರೋಗಿಗಳಿಗೆ ವೈದ್ಯಕೀಯ ಸಲಹೆ ನೀಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net