ಮಧ್ಯಪ್ರದೇಶ ಸಚಿವ ಸಂಪುಟ ವಿಸ್ತರಣೆ, 28 ಜನರ ಸೇರ್ಪಡೆ

ministry
Published on

ನವದೆಹಲಿ: ಮಧ್ಯಪ್ರದೇಶದಲ್ಲಿ ಕಮಲ್​ನಾಥ್​ ನೇತೃತ್ವದ ಕಾಂಗ್ರೆಸ್​ ಸರ್ಕಾರವನ್ನು ಪದಚ್ಯುತಗೊಳಿಸಿ ಬಿಜೆಪಿ ಅಧಿಕಾರ ಹಿಡಿದ ಮೂರು ತಿಂಗಳ ನಂತರದಲ್ಲಿ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ತಮ್ಮ ಸಚಿವ ಸಂಪುಟವನ್ನು ಪೂರ್ಣಪ್ರಮಾಣಕ್ಕೆ ವಿಸ್ತರಿಸಿದ್ದಾರೆ.

ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಬಂದ ಜ್ಯೋತಿರಾದಿತ್ಯ ಸಿಂಧಿಯಾ ಅವರ 11 ಜನ ಬೆಂಬಲಿಗರು ಸೇರಿ 28 ಜನರು ಸಚಿವರಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಭೋಪಾಲ್​ನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲೆ ಆನಂದಿಬೆನ್ ಪಟೇಲ್​ ಅವರು ಗೋಪಾಲ್​ ಭಾರ್ಗವ, ವಿಜಯ್​ ಷಾ, ಜಗದೀಶ್​ ದೇವ್ಡಾ, ಬಿಶಹುಲಾಲ್​ ಸಿಂಗ್​, ಯಶೋಧರ ರಾಜೆ ಸಿಂಧಿಯಾ, ಭೂಪೇಂದರ್​ ಸಿಂಗ್​, ಐದಾಲ್​ ಸಿಂಗ್​ ಕನ್ಸಾನಾ, ಬ್ರಿಜೇಂದ್ರ ಪ್ರತಾಪ್​ ಸಿಂಗ್​ ಮತ್ತು ವಿಶ್ವಾಸ್​ ಸಾರಾಂಗ್​ ಅವರು ಸೇರಿ ಎಲ್ಲ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.

ಜ್ಯೋತಿರಾದಿತ್ಯ ಸಿಂಧ್ಯಾ ಅವರ ಬೆಂಬಲಿಗರಾದ ಇಮಾರ್ತಿ ದೇವಿ, ಡಾ. ಪ್ರಭುರಾಮ್​ ಚೌಧಾರ್​, ಮಹೇಂದ್ರ ಸಿಂಗ್​ ಸಿಸೋಡಿಯಾ, ಪ್ರದ್ಯುಮ್ನ ಸಿಂಗ್​ ತೋಮರ್​, ರಾಜ್ಯವರ್ಧನ್​ ಸಿಂಗ್​, ಬ್ರಿಜೇಂದ್ರ ಸಿಂಗ್​ ಯಾದವ್​, ಗಿರ್​ರಾಜ್​ ಡಾನ್​ದೊತಿಯಾ, ಒಪಿಎಸ್​ ಬಹದ್ದೂರಿಯಾ ಮತ್ತು ಸುರೇಶ್​ ಜಾಖಡ್​ ಪ್ರಮಾಣವಚನ ಸ್ವೀಕರಿಸಿದವರಲ್ಲಿ ಪ್ರಮುಖರು.

ಶಿವರಾಜ್​ ಸಿಂಗ್​ ಚೌಹಾಣ್​ ಅವರು ಮಾ.23ರಂದು ಮಧ್ಯಪ್ರದೇಶದ ಸಿಎಂ ಆಗಿ ಅಧಿಕಾರ ಸ್ವೀರಿಸಿದ್ದರು. ಮಾ.25ರಿಂದ ದೇಶಾದ್ಯಂತ ಕೋವಿಡ್​-19 ಲಾಕ್​ಡೌನ್​ ಜಾರಿಗೆ ಬಂದಿದ್ದರಿಂದ, ಏಪ್ರಿಲ್​ 21ರವರೆಗೆ ಏಕಾಂಗಿಯಾಗಿ ಕಾರ್ಯನಿರ್ವಹಿಸಿದ್ದರು. ಸಿಂಧ್ಯಾ ಅವರ ಇಬ್ಬರು ಬೆಂಬಲಿಗರು ಸೇರಿ ಏ.21ರಂದು ಐವರನ್ನು ಸಚಿವರನ್ನಾಗಿ ನೇಮಿಸಿ ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net