ಪತಿಯನ್ನು ಫಂಕ್ಷನ್​ಗೆ ಕಳುಹಿಸಿ, ಆತನ ಗೆಳೆಯನ ಜೊತೆ ಪರಾರಿಯಾದ ಪತ್ನಿ..!

hand
ಸಾಂದರ್ಭಿಕ ಚಿತ್ರ
Published on

ಹೈದರಾಬಾದ್​: ಪತಿಯನ್ನು ಸಂಬಂಧಿಕರ ಕಾರ್ಯಕ್ರಮಕ್ಕೆ ಕಳುಹಿಸಿ ಆತನ ಸ್ನೇಹಿತನೊಂದಿಗೆ ಪತ್ನಿ ಪರಾರಿಯಾಗಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

ನಗರದ ರಹಮತ್ ನಗರದ ನಿವಾಸಿ ಪ್ರಶಾಂತ್ ಕೊರಿಯರ್ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಈತ 2020ರಲ್ಲಿ ತೇಜಸ್ವಿನಿ ಎಂಬಾಕೆಯನ್ನು ವಿವಾಹವಾಗಿದ್ದನು. ಇಬ್ಬರ ನಡುವೆ ದಾಂಪತ್ಯ ಜೀವನವು ಚೆನ್ನಾಗಿಯೇ ಇತ್ತು. ಇದೇ ತಿಂಗಳ 20ರಂದು ಪ್ರಶಾಂತ್ ತನ್ನ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವಿದ್ದು, ಒಟ್ಟಿಗೆ ಹೋಗೋಣ ಎಂದು ಹೇಳಿದ್ದನು. ಆದರೆ ಆಕೆ ತನಗೆ ಆಸಕ್ತಿ ಇಲ್ಲ, ಹಾಗಾಗಿ ಬರಲು ಸಾಧ್ಯವಿಲ್ಲ ಎಂದಿದ್ದಾಳೆ.

ಕೊನೆಗೆ ಪ್ರಶಾಂತ್ ಫಂಕ್ಷನ್​​ಗೆ ತೆರಳಿದ್ದು, ಹಿಂತಿರುಗಿ ಬಂದಾಗ ಮನೆಯಲ್ಲಿ ಪತ್ನಿ ಕಾಣಲಿಲ್ಲ. ಅಲ್ಲದೇ ಮನೆಯಲ್ಲಿ ಆಕೆಯ ಬಟ್ಟೆ, ಚಿನ್ನ ಅಥವಾ ನಗದು ಕಾಣದೇ ಇದ್ದಿದ್ದನ್ನು ಕಂಡು ಕಂಗಾಲಾಗಿದ್ದಾನೆ. ಏನು ನಡೆದಿರಬಹುದೆಂದು ಯೋಚಿಸುತ್ತಿರುವಾಗಲೇ ತನ್ನ ಸ್ನೇಹಿತ ಕಿರಣ್ ಕೂಡ ತಾನು ಕೆಲಸ ಮಾಡುತ್ತಿದ್ದ ಕಂಪನಿಯಿಂದ ನಾಪತ್ತೆಯಾಗಿರುವ ಮಾಹಿತಿ ಸಿಕ್ಕಿದೆ. ಆಗ ಪ್ರಶಾಂತ್​ಗೆ​ ಎಲ್ಲವೂ ಅರ್ಥವಾಗಿದೆ.

ಇದನ್ನೂ ಓದಿ: ವರನ ಕೈಯಲ್ಲಿದ್ದ: ತಾಳಿ ಕಸಿದುಕೊಂಡು ದೇವರ ಹುಂಡಿಗೆ ಎಸೆಯಲೆತ್ನಿಸಿದ ವಧು..!

ಪ್ರಶಾಂತ್ ಕೆಲಸ ಮಾಡುವ ಸ್ಥಳದಲ್ಲಿ ಕಿರಣ್ ಎಂಬ ಯುವಕನ ಪರಿಚಯವಾಗಿದ್ದು, ಇಬ್ಬರ ನಡುವೆ ಉತ್ತಮ ಸ್ನೇಹವಿತ್ತು. ಕಿರಣ್ ಆಗಾಗ ಪ್ರಶಾಂತ್ ಮನೆಗೆ ಬರುತ್ತಿದ್ದು, ಈ ನಡುವೆ ತೇಜಸ್ವಿನಿ ಮತ್ತು ಆತನ ನಡುವೆ ವಿವಾಹೇತರ ಸಂಬಂಧ ಶುರುವಾಗಿದೆ. ಪ್ರಶಾಂತ್ ಮೊದಲಿನಿಂದಲೂ ತೇಜಸ್ವಿನಿಯನ್ನು ಕಿರಣ್ ಅಕ್ಕ ಎಂದೇ ಕರೆಯುತ್ತಿದ್ದರಿಂದ ಪ್ರಶಾಂತ್​ಗೆ ಯಾವುದೇ ಅನುಮಾನ ಬಂದಿರಲಿಲ್ಲ.

ಆದರೆ,ಈಗಿನ ಪರಿಸ್ಥಿತಿ ನೋಡಿದರೆ ಕಿರಣ್ ಮತ್ತು ತೇಜಸ್ವಿನಿ ಸೇರಿಕೊಂಡೆ ಆತನನ್ನು ಫಂಕ್ಷನ್‌ಗೆ ಕಳಿಸಿ, ಇಬ್ಬರು ಪರಾರಿಯಾಗಿದ್ದಾರೆ ಎಂಬ ವಿಷಯ ಆತನಿಗೆ ಅರ್ಥವಾಗಿದೆ. ಕೂಡಲೇ ಆತ, ಕಿರಣ್ ತನ್ನ ಪತ್ನಿಗೆ ಮಾಟ ಮಾಡಿ ಕರೆದುಕೊಂಡು ಹೋಗಿರಬಹುದು ಎಂದು ಪ್ರಶಾಂತ್ ದೂರಿದ್ದಾರೆ. ಪ್ರಶಾಂತ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್)

telangana

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net