ಮದುವೆಯಲ್ಲಿ ನವ ವಧುವರರ ಕೈಗೆ ತಮ್ಮ ಮಗುವನ್ನು ಕೊಟ್ಟು ಊಟಕ್ಕೆ ಹೋದ ದಂಪತಿ | Wedding Guest

Wedding Guest
Published on

Wedding Guest: ಮದುವೆಯ ಆರತಕ್ಷತೆಯಲ್ಲಿ ಅತಿಥಿ ದಂಪತಿಗಳು ಊಟ ಮಾಡುವುದಕ್ಕಾಗಿ ತಮ್ಮ ಮಗುವನ್ನು ವಧು-ವರರ ಕೈಗೆ ಕೊಟ್ಟು ಹೋದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​​ ವೈರಲ್​​ ಆಗಿದೆ.

ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆದ ಈ ವಿಡಿಯೋದಲ್ಲಿ, ಮದುವೆಯ ಆರತಕ್ಷತೆಗೆ ಬಂದಂತಹ ಅತಿಥಿ ದಂಪತಿಗಳು ಊಟವನ್ನು ಆನಂದಿಸಲು ತಮ್ಮ ಮಗುವನ್ನು ವಧು-ವರರಿಗೆ ಕೊಟ್ಟು ಹೋಗಿರುವ ಘಟನೆ ನಡೆದಿದೆ. ಹೌದು, ಇದು ತಮಾಷೆಯಲ್ಲ. ವಿಡಿಯೋದಲ್ಲಿ ಅತಿಥಿಗಳು ತಮ್ಮ ಊಟಕ್ಕೆ ಹೋಗುವ ಮೊದಲು ಮಗುವನ್ನು ನವವಿವಾಹಿತ ವಧುವಿನ ಮಡಿಲಲ್ಲಿ ನಿಧಾನವಾಗಿ ಇರಿಸಿ ಹೋಗಿದ್ದಾರೆ.

ಪೋಷಕರು ತಮ್ಮ ಭೋಜನವನ್ನು ಆನಂದಿಸುತ್ತಿದ್ದಂತೆ, ವಧುವಿನ ಕೈಯಲ್ಲಿರುವ ಮಗು ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿತು. ಮಗುವನ್ನು ಶಾಂತಗೊಳಿಸಲು ಮಧು ಎಷ್ಟೇ ಪ್ರಯತ್ನಿಸುತ್ತಿದ್ದರೂ, ಪುಟ್ಟ ಮಗು ಜೋರಾಗಿ ಅಳಲು ಪ್ರಾರಂಭಿಸಿತು. ಆ ಕ್ಷಣದಲ್ಲಿ, ಅವಳು ತನ್ನ ಪತಿಗೆ ಮಗುವನ್ನು ಕೊಟ್ಟುಳು. ನಂತರ ವರ ಮಗುವನ್ನು ಎತ್ತಿಕೊಂಡು ನಿಧಾನವಾಗಿ ತಟ್ಟಿದಾಗ ಮಗು ಸುಮ್ಮನಾಗಿರುವುದನ್ನು ಕಾಣಬಹುದು.

ನೆಟ್ಟಿಗರ ಪ್ರತಿಕ್ರಿಯೆ: ಈ ವೈರಲ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್​​ ವೈರಲ್​​ ಆಗಿದ್ದು, ಹಲವರು ವರನು ಪುಟ್ಟ ಮಗುವಿನ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದಾನೆ ಎಂದು ಹೇಳಿದರು. ಹಲವರು ಖುಷಿ ವ್ಯಕ್ತಪಡಿಸಿದರು, ಮತ್ತು ಇತರರು ಪೋಷಕರ ಕ್ರಮವನ್ನು ಅನುಚಿತವೆಂದು ಟೀಕಿಸಿದರು. ಒಬ್ಬ ನೆಟ್ಟಿಗ,"ಅಯ್ಯೋ, ವರ ಮಗುವನ್ನು ಕರೆದುಕೊಂಡು ಹೋದ ರೀತಿ ನೋಡಿ, ಅವನು ಒಳ್ಳೆಯ ತಂದೆಯಾಗುತ್ತಾನೆ!" ಎಂದು ಕಾಮೆಂಟ್ ಮಾಡಿದ್ದಾರೆ. "ಇದು ದಂಪತಿಗಳ ಭವಿಷ್ಯಕ್ಕಾಗಿ ಪ್ರಾಯೋಗಿಕ ತರಬೇತಿಯಾಗಿದೆ" ಎಂದು ಮತ್ತೊಬ್ಬರು ಹೇಳಿದ್ದಾರೆ. ಈ ವಿಡಿಯೋ ಇಲ್ಲಿಯವರೆಗೆ 1.2 ಮಿಲಿಯನ್ ವೀಕ್ಷಣೆ ಪಡೆದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net