ಹಳೆಯ ಮನೆಯಲ್ಲಿ ದಂಪತಿಗೆ ಒಲಿದು ಬಂದಿತು ಅದೃಷ್ಟ! ಮುಂದೇನಾಯ್ತು?

house
Published on

ಲಂಡನ್​: ಕೆಲವರಿಗೆ ಅದೃಷ್ಟ ಎಲ್ಲಿಂದಲೋ ಬರುತ್ತದೆ. ಮಣ್ಣು ಅಗೆಯುವಾಗ ಆಕಸ್ಮಿಕವಾಗಿ ಸಿಗುವ ಚಿನ್ನದ ನಾಣ್ಯಗಳು, ಹಳೆಯ ಮನೆಗಳನ್ನು ಕೆಡವಿದಾಗ ಸಿಗುವ ಪ್ರಾಚೀನ ವಸ್ತುಗಳು ಕೂಲಿಮಾಡುವವರನ್ನು ಕೋಟ್ಯಾದಿಪತಿಯನ್ನಾಗಿಸಿರುತ್ತದೆ. ಇತ್ತೀಚೆಗೆ ಇಂತಹದ್ದೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದಂಪತಿ ಅಡುಗೆ ಮನೆಯಲ್ಲಿ ಮಣ್ಣು ಅಗೆಯುತ್ತಿದ್ದಾಗ ಮಧ್ಯದಲ್ಲಿ ಬೆಚ್ಚಿ ಬೀಳಿಸುವ ದೃಶ್ಯ ಕಂಡುಬಂದಿದೆ.

ಈ ಘಟನೆ ದಕ್ಷಿಣ ಇಂಗ್ಲೆಂಡ್‌ನಲ್ಲಿ ನಡೆದಿದೆ. ಸ್ಥಳೀಯ ವೆಸ್ಟ್ ಡಾರ್ಸೆಟ್ ಪ್ರದೇಶದ ದಂಪತಿ 2019 ರಲ್ಲಿ ಅದೇ ಪ್ರದೇಶದಲ್ಲಿ 17 ನೇ ಶತಮಾನದ ಮನೆಯನ್ನು ಖರೀದಿಸಿದರು. ಮನೆ ಹಳೆಯದಾಗಿರುವ ಕಾರಣ ಈಗಿನ ತಂತ್ರಜ್ಞಾನದ ಪ್ರಕಾರ ಮನೆಯನ್ನು ಮರುರೂಪಿಸಬೇಕೆಂದು ಯೋಚಿಸಿ ಅದರಂತೆ ಅವರು ತಮ್ಮ ಅಡುಗೆ ಕೋಣೆಯನ್ನು ವಿನ್ಯಾಸಗೊಳಿಸಲು ನಿರ್ಧರಿಸಿದರು. ಇದಕ್ಕಾಗಿ ಕೋಣೆಯ ಸಂಪೂರ್ಣ ಕಾಂಕ್ರೀಟ್ ನೆಲವನ್ನು ಕಿತ್ತುಹಾಕುತ್ತಿದ್ದಾಗ ಅವರಿಗೆ ಆಶ್ಚರ್ಯಕರ ದೃಶ್ಯ ಕಂಡಿತು.

ಮಣ್ಣಿನ ಮಧ್ಯದಲ್ಲಿ ಒಂದು ಮಡಕೆ ಸಿಕ್ಕಿತು. ಅದನ್ನು ಒಡೆದು ತೆರೆದಾಗ ರಾಜರ ಕಾಲದ 1ಸಾವಿರ ಪುರಾತನ ನಾಣ್ಯಗಳು ಪತ್ತೆಯಾದವು. ಈ ಎಲ್ಲಾ ನಾಣ್ಯಗಳು 1642 ಮತ್ತು 1644 ರ ಹಿಂದಿನವು ಎಂದು ಬ್ರಿಟಿಷ್ ಮ್ಯೂಸಿಯಂ ಅಧಿಕಾರಿಗಳು ತಿಳಿಸಿದ್ದಾರೆ.

ಇವುಗಳನ್ನು ಏಪ್ರಿಲ್ 23 ರಂದು ಹರಾಜು ಮಾಡಲಾಯಿತು. ಅನೇಕ ಉತ್ಸಾಹಿಗಳು ಭಾಗವಹಿಸಿದ್ದರು. ಒಟ್ಟು 62.88ರೂ.ಲಕ್ಷ ಪೌಂಡ್ ಮೌಲ್ಯ ಅವುಗಳ ಹರಾಜಿನಿಂದ ಬಂದಿತು. ಈ ನಾಣ್ಯಗಳು 2019 ರಲ್ಲಿ ಕಂಡುಬಂದರೆ, ಅಧಿಕಾರಿಗಳು ಈ ವರ್ಷ ಅವರಿಗೆ ಸಂಬಂಧಿಸಿದ ಹಣವನ್ನು ಹಸ್ತಾಂತರಿಸಿದ್ದಾರೆ.

ಆ ಹಣದಲ್ಲಿ ಮನೆ ಕಟ್ಟುತ್ತೇವೆ ಎನ್ನುತ್ತಾರೆ ದಂಪತಿ. ಈ ಮಧ್ಯೆ, ಈ ಘಟನೆಗೆ ಸಂಬಂಧಿಸಿದ ಸುದ್ದಿ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net